ನವದೆಹಲಿ: ದೆಹಲಿ ಬಳಿಯ ನುಹ್ನ ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇಯ್ಲಲಿ ಮಂಗಳವಾರ ಇಂಧನ ಟ್ಯಾಂಕರ್ಗೆ ಡಿಕ್ಕಿ ಹೊಡೆದ ರೋಲ್ಸ್ ರಾಯ್ಸ್ ಕಾರಿನಲ್ಲಿದ್ದ ಉದ್ಯಮಿ ಹಾಗೂ ಇನ್ನಿತರರಿಗೆ ಗಾಯಗಳಾಗಿವೆ ಎಂಬುದಾಗಿ ವರದಿಯಾಗಿದೆ. ಆದರೆ ಟ್ಯಾಂಕರ್ನಲ್ಲಿದ್ದ ಇಬ್ಬರು ಸಜೀವ ದಹನಗೊಂಡಿದ್ದು, ಒಬ್ಬರು ಗಾಯಗೊಂಡಿದ್ದಾರೆ. ಶ್ರೀಮಂತ ಉದ್ಯಮಿ ಈ 10 ಕೋಟಿ ರೂಪಾಯಿಯ ಕಾರಿಗೆ 14 ಬೆಂಗಾವಲು ವಾಹನಗಳೇ ಇದ್ದವು ಎಂಬುದು ಟೋಲ್ಗೇಟ್ನ ಸಿಸಿ ಟಿವಿ ಫೂಟೇಜ್ಗಳು ತೋರಿಸಿವೆ. ಅಂದ ಹಾಗೆ ಈ ವಾಹನಗಳು ಟೋಲ್ ಕಟ್ಟಿರಲಿಲ್ಲ ಹಾಗೂ ಅತ್ಯಂತ ವೇಗದಲ್ಲಿ ಹೋಗುತ್ತಿತ್ತು ಎಂಬುದು ಹಿಲಾಲ್ಪುರ ಟೋಲ್ ಪ್ಲಾಜಾದ ಸಿಸಿಟಿವಿ ದೃಶ್ಯಾವಳಿಗಳು ತೋರಿಸಿವೆ.
14 ಕಾರುಗಳಲ್ಲಿ ಎರಡು ಟೊಯೊಟಾ ಫಾರ್ಚೂನರ್, ರೋಲ್ಸ್ ರಾಯ್ಸ್ ಫ್ಯಾಂಟಮ್, ಮರ್ಸಿಡಿಸ್ ಜಿಎಲ್ ಎಸ್ ಯುವಿ, ಬಿಎಂಡಬ್ಲ್ಯು 6 ಸೀರಿಸ್, ಬಿಎಂಡಬ್ಲ್ಯು 5 ಸೀರಿಸ್, ಎರಡು ಇಸುಝು ವಿ ಕ್ರಾಸ್, ಎರಡು ಮರ್ಸಿಡಿಸ್ ಜಿಎಲ್ ಗಳು, ಹ್ಯುಂಡೈ ಕ್ರೆಟಾ, ಫೋರ್ಡ್ ಎಂಡೀವರ್ ಮತ್ತು ಟೊಯೊಟಾ ಹಿಲಕ್ಸ್ ಕಾರುಗಳಿದ್ದವು.
ಈ ಅಪಘಾತದ ತೀವ್ರತೆಗೆ ಇಬ್ಬರು ಮೃತಪಟ್ಟಿದ್ದಾರೆ. ಐಷಾರಾಮಿ ರೋಲ್ಸ್ ರಾಯ್ಸ್ನಲ್ಲಿ ಪ್ರಯಾಣಿಸುತ್ತಿದ್ದವರು ಗಾಯಗೊಂಡಿದ್ದಾರೆ. ಬೆಂಗಾವಲು ವಾಹನಗಳು ಹಾದುಹೋದ 15 ನಿಮಿಷಗಳ ನಂತರ ಈ ಟೋಲ್ ಪ್ಲಾಜಾದಿಂದ ಕೇವಲ 28 ಕಿ.ಮೀ ದೂರದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.
ರೋಲ್ಸ್ ರಾಯ್ಸ್ ಕಾರಿನಲ್ಲಿದ್ದ ಮೂವರು ಪ್ರಯಾಣಿಕರಲ್ಲಿ ಒಬ್ಬರು ಕೈಗಾರಿಕೋದ್ಯಮಿ ಮತ್ತು ಕುಬೇರ್ ಗ್ರೂಪ್ ನಿರ್ದೇಶಕ ವಿಕಾಸ್ ಮಾಲು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ದೃಢಪಡಿಸಿದ್ದಾರೆ. ಮಾಲು ಅವರು ಗುರುಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಎನ್ಡಿಟಿವಿಯೊಂದಿಗೆ ಮಾತನಾಡಿದ ನುಹ್ ಪೊಲೀಸ್ ವರಿಷ್ಠಾಧಿಕಾರಿ ನರೇಂದ್ರ ಬಿಜರಾನಿಯಾ, ಎಕ್ಸ್ಪ್ರೆಸ್ ಪೂರ್ತಿ ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿದೆ. ಪೊಲೀಸರು ದೃಶ್ಯಾವಳಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ ಎಂದು ಟ್ರಕ್ ಹೆದ್ದಾರಿಯಲ್ಲಿ ಏಕಾಏಕಿ ಯುಟರ್ನ್ ತೆಗೆದುಕೊಂಡು ಕಾರಣ ಫ್ಯಾಂಟಮ್ ಅತಿ ವೇಗದಲ್ಲಿ ಪ್ರಯಾಣಿಸುತ್ತಿದ್ದ ಕಾರಣ ನಿಯಂತ್ರಣ ಮಾಡಲಾಗದೇ ಡಿಕ್ಕಿ ಹೊಡೆದವು ಎಂದು ಹೇಳಿದ್ದಾರೆ.
ಇದನ್ನೂ ಓದಿ : Road Accident : ಬೆಂಗಳೂರಲ್ಲಿ ಸರಣಿ ಅಪಘಾತ; ಬೈಕ್ ಸವಾರ ದಾರುಣ ಸಾವು
ಟ್ಯಾಂಕರ್ನಲ್ಲಿದ್ದ ಮೂರನೇ ವ್ಯಕ್ತಿಯಾಗಿರುವ ಗೌತಮ್ ಎಂಬುವರು ಎಂದು ಹೇಳಲಾಗಿದೆ. ಅವರು ಹರಿಯಾಣದ ಉಜಿನಾದಲ್ಲಿರುವ ತಮ್ಮ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಚಾಲಕ ಮತ್ತು ಸಹಾಯಕನ ಪಕ್ಕದಲ್ಲಿ ಕುಳಿತಿದ್ದ ಗೌತಮ್, ಟ್ರಕ್ ಯು-ಟರ್ನ್ ತೆಗೆದುಕೊಳ್ಳುತ್ತಿದ್ದಾಗ ರೋಲ್ಸ್ ರಾಯ್ಸ್ ಡಿಕ್ಕಿ ಹೊಡೆದಿದೆ ಎಂದು ಹೇಳಿದ್ದಾರೆ. ಗಾಯಗಳಿಂದಾಗಿ ಮಾತನಾಡಲು ಹೆಣಗಾಡುತ್ತಿರುವ ಅವರು, ಫ್ಯಾಂಟಮ್ ಕಾರಿನ ವೇಗವು ಗಂಟೆಗೆ ಕನಿಷ್ಠ 190 ಕಿ.ಮೀ ಆಗಿತ್ತು. ಡಿಕ್ಕಿ ಹೊಡೆದ ನಂತರ ಟ್ರಕ್ ಪಲ್ಟಿಯಾಗಿದೆ ಎಂದು ಹೇಳಿದ್ದಾರೆ.
ಅಪಘಾತದ ಸ್ಥಳದಿಂದ ತೆಗೆದ ದೃಶ್ಯಗಳು ₹ 10 ಕೋಟಿಗಿಂತ ಹೆಚ್ಚಿನ ಬೆಲೆಯ ಫ್ಯಾಂಟಮ್ ನ ಸ್ವಲ್ಪ ಭಾಗವನ್ನು ತೋರಿಸಿದೆ. ಕಾರಿನ ಮುಂಭಾಗವು ಸಂಪೂರ್ಣವಾಗಿ ಜಖಂಗೊಂಡಿದೆ, ಎಂಜಿನ್ ಗೆ ಬೆಂಕಿ ಹೊತ್ತಿಕೊಂಡಿದೆ ಮತ್ತು ಹೊಡೆತದಿಂದ ಬಾಗಿಲುಗಳನ್ನು ತೆರೆಯಲಾಗಿದೆ. ಟ್ರಕ್ ಸಂಪೂರ್ಣವಾಗಿ ಸುಟ್ಟು ಹೋಗಿದೆ.