Site icon Vistara News

RRR Movie | ಆರ್‌ಆರ್‌ಆರ್ ಹಿಂದಕ್ಕೆಳೆಯುವ ಚಿತ್ರ ಎಂದು ಟೀಕಿಸಿದ ನಟಿ ರತ್ನಾ ಪಾಠಕ್ ಶಾ!

Ratna Patak Shah @ RRR Movie

ನವದೆಹಲಿ: ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರ (RRR Movie) ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಸಕ್ಸೆಸ್ ಕಂಡಿದ್ದು ಮಾತ್ರವಲ್ಲದೇ ಜಗತ್ತಿನಾದ್ಯಂತ ಪ್ರದರ್ಶನವಾಗಿ ಮೆಚ್ಚುಗೆ ಪಡೆದುಕೊಂಡಿದೆ. ಹಲವು ಅಂತಾರಾಷ್ಟ್ರೀಯ ಚಿತ್ರಗಳಲ್ಲಿ ಪ್ರದರ್ಶನಗೊಂಡು, ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಹಾಗಿದ್ದೂ, ಆರ್‌ಆರ್‌ಆರ್ ವಿರುದ್ಧ ಟೀಕೆಗಳಿಗೇನೂ ಬರವಿಲ್ಲ. ಈಗ ಹಿಂದಿ ಚಿತ್ರರಂಗದ ಹಿರಿಯ ಕಲಾವಿದೆ ಹಾಗೂ ನಟ ನಾಸೀರುದ್ದೀನ್ ಶಾ ಅವರ ಪತ್ನಿಯೂ ಆಗಿರುವ ರತ್ನಾ ಪಾಠಕ್ ಶಾ ಅವರು, ಆರ್‌ಆರ್‌ಆರ್ ಚಿತ್ರ ನಮ್ಮನ್ನು ಹಿಂದಕ್ಕೆ ಎಳೆಯುತ್ತದೆ ಎಂದು ಟೀಕಿಸಿದ್ದಾರೆ.

ಇತ್ತೀಚೆಗೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ರತ್ನಾ ಪಾಠಕ್ ಶಾ ಅವರು, ಆರ್‌ಆರ್‌ಆರ್‌ನಂಥ ಸಿನಿಮಾಗಳು ಇತ್ತೀಚೆಗೆ ತುಂಬಾ ಪ್ರಸಿದ್ಧವಾಗುತ್ತಿವೆ. ಆದರೆ, ಅದೊಂದು ಹಿಂದಕ್ಕೆ ಎಳೆಯುವ ಚಿತ್ರವಾಗಿದೆ. ನಾವೆಲ್ಲ ಮುಂದೆ ನೋಡುತ್ತಿರುವಾಗ ಅದು ನಮ್ಮನ್ನು ಹಿಂದಿನಸ್ಥಿತಿಗೆ ಕರೆದೊಯ್ಯುತ್ತದೆ. ನಾವೆಲ್ಲರೂ ಪ್ರಜಾಪ್ರಭುತ್ವದ ತಾಯಿ ಎನಿಸಿರುವ ಭಾರತದ ಭಾಗವಾಗಿರುವುದರಿಂದ ನಾವು ಏನು ಮಾಡುತ್ತಿದ್ದೇವೂ ಎಲ್ಲವೂ ಒಳ್ಳೆಯದು ಎಂದು ಭಾವಿಸಿಕೊಳ್ಳುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಚಿತ್ರಕರ್ಮಿಗಳು ತಮ್ಮ ಕೆಲಸವನ್ನು ವಿಮರ್ಶಾತ್ಮಕ ದೃಷ್ಟಿಯಿಂದ ನೋಡಬೇಕು. ನಾವು ಅಹಂಕಾರವನ್ನು ಹೊತ್ತುಕೊಂಡಿರಬಾರದು. ಎಲ್ಲಿಯವರೆಗೂ ಚಿತ್ರಕರ್ಮಿಗಳು ತಮ್ಮ ಕೆಲಸವನ್ನು ವಿಮರ್ಶಾತ್ಮಕವಾಗಿ ನೋಡುವುದಿಲ್ಲವೋ ಅಲ್ಲಿಯವರೆಗೆ ನಾವು ಆರ್‌ಆರ್‌ಆರ್‌ಗಳಂಥ ಸಿನಿಮಾಗಳನ್ನೇ ನೋಡುತ್ತಿರಬೇಕಾಗುತ್ತದೆ. ಯಾಕೆಂದರೆ, ನಾವು ಟೀಕೆಯನ್ನು ಇಷ್ಟಪಡುವುದಿಲ್ಲ. ನಮ್ಮ ಅಹಂಕಾರಕ್ಕೆ ಧಕ್ಕೆಯಾಗುತ್ತದೆ. ಅಂಥದೊಂದು ಪರಿಸ್ಥಿತಿಯನ್ನು ದೊಡ್ಡ ದೊಡ್ಡ ವ್ಯಕ್ತಿಗಳು ಸೃಷ್ಟಿಸಿದ್ದಾರೆ. ದುರ್ದೈವ ಎಂದರೆ ನಾವು ಇದನ್ನು ಒಪ್ಪಿಕೊಂಡಿದ್ದೇವೆ ಎಂದು ರತ್ನಾ ಪಾಠಕ್ ಶಾ ಅವರು ಹೇಳಿದ್ದಾರೆ.

ಇದನ್ನೂ ಓದಿ | Anurag Kashyap | ಕಾಂತಾರ, ಪುಷ್ಪದಂತಹ ಸಿನಿಮಾಗಳಿಂದ ಬಾಲಿವುಡ್‌ ನಾಶ, ವಿವಾದ ಸೃಷ್ಟಿಸಿದ ನಿರ್ದೇಶಕ ಅನುರಾಗ್‌ ಕಶ್ಯಪ್

Exit mobile version