Site icon Vistara News

200 ಕೋಟಿ ರೂ. ಅದ್ಧೂರಿ ಮದ್ವೆ, ಎಲ್ಲ ನಗದು ರೂಪದಲ್ಲೇ ಪಾವತಿ! ಬೆಟ್ಟಿಂಗ್ ಆ್ಯಪ್‌‌ ಮಾಲೀಕನ ದಿಢೀರ್ ಶ್ರೀಮಂತಿಕೆ

Sourabh Chandrakar

ನವದೆಹಲಿ: ಕೆಲವೊಮ್ಮೆ ಅತಿಯಾದ ಶ್ರೀಮಂತಿಕೆ ಪ್ರದರ್ಶನ ಮುಳುಗು ನೀರುತ್ತದೆ! ಅದರಲ್ಲೂ ವಾಮ ಮಾರ್ಗದ ಮೂಲಕ ಶ್ರೀಮಂತಿಕೆಯ ಅಮಲೇರಿಸಿಕೊಂಡವರ ಕೈಗೆ ಕಾನೂನು ಬೇಡಿ ತೊಡಿಸದೇ ಬಿಡದು! ಇದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಈ ಸಾಲಿಗೆ ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ (Mahadev Online Betting App) ಪ್ರವರ್ತಕರಲ್ಲಿ ಒಬ್ಬರಾದ ಸೌರಭ್ ಚಂದ್ರಕರ್ (Sourabh Chandrakar) ಸೇರಿದ್ದಾರೆ. 2023ರ ಫೆಬ್ರವರಿಯಲ್ಲಿ ಯುಎಇನಲ್ಲಿ (UAE) ಚಂದ್ರಕರ್ 200 ಕೋಟಿ ರೂ. ವೆಚ್ಚದಲ್ಲಿ ವಿವಾಹ ಮಾಡಿಕೊಂಡಿದ್ದರು(Wedding). ಇಷ್ಟೇ ಸಾಕಾಯಿತು… ಜಾರಿ ನಿರ್ದೇಶನಾಲಯದ ಕಣ್ಣು ಬೀಳಲು(Enforcement Directorate). ಚಂದ್ರಕರ್ ಮದುವೆಗೆ ವೆಚ್ಚ ಮಾಡಿದ ಅಷ್ಟೂ 200 ಕೋಟಿ ರೂಪಾಯಿ ಹಣವನ್ನು ನಗದಲ್ಲಿನ ಪಾವತಿಸಿದ್ದಾರೆ!(Payment in Cash)

ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಹವಾಲ ಹಗರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ನ ಖ್ಯಾತ ನಟ ರಣಬೀರ್ ಕಪೂರ್ ಅವರನ್ನು ಜಾರಿ ನಿರ್ದೇಶನಾಲವು ಶುಕ್ರವಾರ ವಿಚಾರಣೆ ನಡೆಸಲಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಆ್ಯಪ್ ಹಗರಣವು ಹೆಡ್‌ಲೈನ್ಸ್‌ನಲ್ಲಿ ಕಾಣಿಸಿಕೊಂಡಿದೆ.

ಆನ್‌ಲೈನ್ ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ನ ಪ್ರವರ್ತಕರಲ್ಲಿ ಒಬ್ಬರಾದ ಸೌರಭ್ ಚಂದ್ರಕರ್ ಫೆಬ್ರವರಿಯಲ್ಲಿ ದುಬೈನ ರಾಸ್ ಅಲ್-ಖೈಮಾದಲ್ಲಿ ವಿವಾಹವಾದರು. ಕುಟುಂಬ ಸದಸ್ಯರನ್ನು ಕರೆದುಕೊಂಡ ಬರಲು ಖಾಸಗಿ ಜೆಟ್‌ಗಳನ್ನು ಬಾಡಿಗೆಗೆ ಪಡೆದಿದ್ದರು. ಸೆಲೆಬ್ರಿಟಿಗಳು ಮದುವೆಯಲ್ಲಿ ಪ್ರದರ್ಶನ ಮಾಡಿದ್ದರು. ಮುಂಬೈ ಮೂಲದ ಈವೆಂಟ್‌ಗಳ ಸಂಸ್ಥೆಯು ವಿವಾಹವನ್ನು ಆಯೋಜಿಸಿತ್ತು. ವಿಶೇಷ ಎಂದರೆ, ಸೌರಭ್ ಚಂದ್ರಕರ್ ಎಲ್ಲ ಪಾವತಿಯನ್ನು ನಗದು ರೂಪದಲ್ಲಿ ಮಾಡಿದ್ದು, ಇಡಿ ಎಚ್ಚರಗೊಳ್ಳುವಂತೆ ಮಾಡಿತು.

200 ಕೋಟಿ ರೂ. ನಗದಿನಲ್ಲೇ ಪೇಮೆಂಟ್!

2023ರ ಫೆಬ್ರವರಿಯಲ್ಲಿ ಸೌರಭ್ ಚಂದ್ರಕರ್ ಅವರು ಯುಎಇಯ ರ್ಯಾಕ್‌ನಲ್ಲಿ ವಿವಾಹದವಾದರು. ಈ ವಿವಾಹ ಸಮಾರಂಭಕ್ಕೆ ಮಹಾದೇವ್ ಆ್ಯಪ್‌ನ ಪ್ರವರ್ತರು ಸಮಾರು 200 ಕೋಟಿ ರೂ. ಹಣವನ್ನು ನಗದು ರೂಪದಲ್ಲಿ ವೆಚ್ಚ ಮಾಡದ್ದಾರೆ ಎಂದು ಜಾರಿ ನಿರ್ದೇಶನಾಲಯವು ಸೆಪ್ಟೆಂಬರ್ 15ರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಡಿಜಿಟಲ್ ಸಾಕ್ಷ್ಯದ ಪ್ರಕಾರ, ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಗೆ ಹವಾಲಾ ವಹಿವಾಟಿನ ಮೂಲಕ 112 ಕೋಟಿ ತಲುಪಿಸಲಾಗಿದೆ. 42 ಕೋಟಿ ರೂ. ವೆಚ್ಚದ ಹೋಟೆಲ್ ಬುಕಿಂಗ್‌ಗಳನ್ನು ಯುಎಇ ಕರೆನ್ಸಿಯಲ್ಲಿ ನಗದು ರೂಪದಲ್ಲಿ ಮಾಡಲಾಗಿದೆ ಇಡಿ ಹೇಳಿದೆ.

ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಗೆ ಸೇರಿದ ಜನರ ಕಚೇರಿ, ಮನೆಗಳನ್ನು ಶೋಧಿಸಿದಾಗ ಹವಾಲಾ ವಹಿವಾಟುಗಳು ನಡೆದಿರುವುದು ಗೊತ್ತಾಗಿದೆ. ಲೆಕ್ಕಕ್ಕೆ ಸಿಗದ ನಗದು ದೊರೆತಿದೆ ಎಂದು ಇಡಿ ಹೇಳಿತ್ತು. ಅನೇಕ ಸೆಲೆಬ್ರಿಟಿಗಳು ಈ ಬೆಟ್ಟಿಂಗ್ ಕಂಪನಿಗಳಿಗೆ ಪ್ರಚಾರ ನೀಡುತ್ತಾರೆ. ಇದಕ್ಕೆ ಪ್ರತಿಯಾಗಿ ಅವರಿಗೆ ಭಾರಿ ಮೊತ್ತದ ಶುಲ್ಕಗಳನ್ನು ಸಂಶಯಾಸ್ಪದ ರೀತಿಯಲ್ಲಿ ಪಾವತಿಸಲಾಗಿರುತ್ತದೆ. ಆನ್‌ಲೈನ್ ಬೆಟ್ಟಿಂಗ್ ಆದಾಯದಿಂದ ಪಾವತಿಸಲಾಗಿದೆ ಎಂದು ಇಡಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಟ್ರಾವೆಲ್ಸ್ ಏಜೆನ್ಸಿಯಿಂದ ಮೂಲಕ ವ್ಯವಹಾರ

ಸೌರಭ್ ಚಂದ್ರಕರ್ ಮದುವೆಗೆ ಸಂಬಂಧಿಸಿದಂತೆ ಟಿಕೆಟ್ ಬುಕ್ ಮಾಡಿದ್ದ ಟ್ರಾವೆಲ್ ಏಜೆನ್ಸಿ ಕುರಿತು ಇಡಿ ತನಿಖೆ ನಡೆಸಿದೆ. ಕಾರ್ಯಾಚರಣೆ ನಡೆಸಿ ಅನೇಕ ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಧೀರಜ್ ಅಹುಜಾ ಮತ್ತು ವಿಶಾಲ್ ಅಹುಜಾ ಸಹೋದರರು ರ್ಯಾಪಿಡ್ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಾರೆ. ಬೆಟ್ಟಿಂಗ್ ಅಕ್ರಮ ನಗದು ಗಳಿಕೆಯನ್ನು ಅಹುಜಾ ಸಹೋದರರು, ಮುಖ್ಯ ಟಿಕೆಟ್ ಪೂರೈಕೆದಾರರಲ್ಲಿ ಬಹಳ ಜಾಣ್ಮೆಯಿಂದ ಠೇವಣಿ ಮಾಡಿದ್ದರು. ಮತ್ತು ವಾಲೆಟ್ ಬ್ಯಾಲೆನ್ಸ್ ಅನ್ನು ದೇಶೀಯ ಮತ್ತು ಅಂತಾರರಾಷ್ಟ್ರೀಯ ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸಲು ಬಳಸಿಕೊಂಡಿದ್ದರು ಎಂದು ಇಡಿ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.

ಇನ್ನೂ ಇದ್ದಾರೆ ಹವಾಲಾಕೋರರು!

ಜಾರಿ ನಿರ್ದೇಶನಾಲಯದ ಪ್ರಕಾರ, ಇನ್ನೂ ಬಹಳಷ್ಟು ಜನರು ಈ ಮಹಾದೇವ್ ಆನ್‌ಲೈನ್ ಬುಕ್ ಆ್ಯಪ್ ಹವಾಲಾ ಹಗರಣದಲ್ಲಿ ಭಾಗಿಯಾಗಿದ್ದಾರೆ. ಅವರು ಯಾರೆಂಬುದನ್ನು ಇಡಿ ಗುರುತಿಸಿದೆ ಮತ್ತು ಆ ಕುರಿತು ತನಿಖೆ ನಡೆಸುತ್ತಿದೆ. ಸದ್ಯಕ್ಕೆ ಸೌರಭ್ ಚಂದ್ರಕರ್ ಮತ್ತು ರವಿ ಉಪ್ಪಳ್ ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ನ ಪ್ರಮುಖ ಪ್ರವರ್ತಕರಾಗಿದ್ದಾರೆ. ಛತ್ತೀಸ್‌ಗಢ ಮೂಲದ ಸೌರಭ ಮತ್ತು ಉಪ್ಪಳ್ ಇಬ್ಬರು ದುಬೈ ಮೂಲಕ ಕಾರ್ಯಾಚರಣೆ ಮಾಡುತ್ತಾರೆ.

ಈ ಸುದ್ದಿಯನ್ನೂ ಓದಿ: Ranbir Kapoor: ಮಹಾದೇವ್ ಬೆಟ್ಟಿಂಗ್ ಆ್ಯಪ್ ಕೇಸ್ ಸಂಬಂಧ ನಟ ರಣಬೀರ್ ಕಪೂರ್‌ಗೆ ಇಡಿ ಸಮನ್ಸ್

ಮಧ್ಯ ರಾತ್ರಿ ಬಂದ ಶ್ರೀಮಂತಿಕೆ!

ಛತ್ತೀಸ್‌ಗಢದಲ್ಲಿ ಸಾಮಾನ್ಯ ಬುಕ್ಕಿಗಳಾಗಿದ್ದ ಸೌರಭ್ ಚಂದ್ರಕರ್ ಮತ್ತು ರವಿ ಉಪ್ಪಳ್ ಅವರು ರಾತ್ರೋರಾತ್ರಿ ಶ್ರೀಮಂತರಾಗಿದ್ದು ಮಾತ್ರ ಊಹಾತೀತವಾಗಿದೆ. ಯುಎಇನಲ್ಲಿ ಇವರಿಬ್ಬರು ತಮ್ಮದೇ ಸಾಮ್ರಾಜ್ಯವನ್ನು ನಿರ್ಮಿಸಿಕೊಂಡಿದ್ದಾರೆ. ಹವಾಲ ಮೂಲಕ ಸಾಕಷ್ಟು ಹಣವನ್ನು ಸಂಗ್ರಹಿಸಿರುವ ಸಡನ್ ಆಗಿ ತಮ್ಮ ಶ್ರೀಮಂತಿಕೆಯನ್ನು ಪ್ರದರ್ಶಿಸುವ ಮೂಲಕ ಸುದ್ದಿಗೆ ಗ್ರಾಸವಾದರು.

ದೊಡ್ಡ ಪ್ರಮಾಣದ ಹವಾಲಾ ಕಾರ್ಯಾಚರಣೆಗಳನ್ನ ವಿದೇಶಿ ಖಾತೆಗಳಿಗೆ ಮಾಡಲಾಗುತ್ತದೆ. ಆ ಮೂಲಕ ಬೆಟ್ಟಿಂಗ್‌ನ ಆದಾಯವನ್ನು ತೋರಿಸಲಾಗುತ್ತದೆ. ಹೊಸ ಬಳಕೆದಾರರು ಮತ್ತು ಫ್ರ್ಯಾಂಚೈಸ್ (ಪ್ಯಾನೆಲ್) ಅನ್ವೇಷಕರನ್ನು ಆಕರ್ಷಿಸಲು ಅಗತ್ಯವಿರುವ ಬೆಟ್ಟಿಂಗ್ ವೆಬ್‌ಸೈಟ್‌ಗಳು ಮತ್ತು ಸ್ವಯಂ-ಗ್ರ್ಯಾಂಡೈಸ್‌ಮೆಂಟ್‌ಗಳ ಜಾಹೀರಾತುಗಳಿಗಾಗಿ ಭಾರತದಲ್ಲಿ ದೊಡ್ಡ ಪ್ರಮಾಣದ ನಗದು ವೆಚ್ಚವನ್ನು ಮಾಡಲಾಗುತ್ತಿದೆ. ಇದು ರವಿ ಉಪ್ಪಳ್ ಮತ್ತು ಸೌರಭ್ ಚಂದ್ರಕರ್ ಅವರು ನಡೆಸಿಕೊಂಡು ಬಂದಿರುವ ವ್ಯವಹಾರದ ಪ್ಯಾಟರ್ನ್ ಆಗಿದೆ ಎನ್ನಲಾಗುತ್ತಿದೆ. ಜಾರಿ ನಿರ್ದೇಶನಾಲಯವು, ಸೆಪ್ಟೆಂಬರ್ ತಿಂಗಳಲ್ಲಿ ಮಹಾದೇವ್ ಆನಲೈನ್ ಬುಕ್ ಆ್ಯಪ್‌ಗೆ ಸಂಬಂಧಿಸಿದ 39 ಸ್ಥಗಳಲ್ಲಿ ಶೋಧ ನಡೆಸಿದೆ ಮತ್ತು ಈವರೆಗೆ 417 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಸೀಜ್ ಮಾಡಿಕೊಂಡಿದೆ.

Exit mobile version