Site icon Vistara News

IT Raids: 353 ಕೋಟಿ ರೂ. ನಗದು ಜಪ್ತಿ! ಐಟಿ ದಾಳಿಯ ಇದುವರೆಗಿನ ಗರಿಷ್ಠ ಮೊತ್ತ!

rs 353 crore cash Seized from IT Raids and Congress MP

ನವದೆಹಲಿ: ಒಡಿಶಾ ಮೂಲದ ಡಿಸ್ಟಿಲರಿ ಗ್ರೂಪ್‌ಗೆ (Odisha-based distillery group) ಸಂಬಂಧಿಸಿದ ಮೂರು ರಾಜ್ಯಗಳ ವಿವಿಧ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸಿದ ಐದು ದಿನಗಳ ದಾಳಿಯಲ್ಲಿ (IT Raids) ಒಟ್ಟು 353 ಕೋಟಿ ರೂ. ನಗದನ್ನು ಜಪ್ತಿ ಮಾಡಿದೆ(Cash Seize). ಇದು ದೇಶದ ಆದಾಯ ತೆರಿಗೆ ದಾಳಿಯ ಇತಿಹಾಸದಲ್ಲಿ ಅತಿ ಹೆಚ್ಚು ನಗದು ವಶಪಡಿಸಿಕೊಂಡ ಪ್ರಕರಣವಾಗಿದೆ (highest ever cash seizure) ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಭಾನುವಾರ ಸಂಜೆಯ ಹೊತ್ತಿಗೆ ಬೊಲಂಗೀರ್, ತಿತ್ಲಗಢ್ ಮತ್ತು ಸಂಬಲ್‌ಪುರದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೂರು ಶಾಖೆಗಳಲ್ಲಿ ಮೂರು ಡಜನ್‌ಗೂ ಹೆಚ್ಚು ಎಣಿಕೆ ಯಂತ್ರಗಳು ಮತ್ತು 80 ಅಧಿಕಾರಿಗಳನ್ನು ನಿಯೋಜಿಸುವ ಮೂಲಕ ಎಲ್ಲಾ ವಶಪಡಿಸಿಕೊಂಡ ಹಣವನ್ನು ಎಣಿಸಲಾಯಿತು. ಎಸ್‌ಬಿಐನ ಸಂಬಲ್‌ಪುರ ಮತ್ತು ತಿತ್ಲಗಢ ಶಾಖೆಯಲ್ಲಿ 48.5 ಕೋಟಿ ಎಣಿಕೆಯಾಗಿದ್ದರೆ, ಬ್ಯಾಂಕ್‌ನ ಬೋಲಂಗಿರ್ ಮುಖ್ಯ ಶಾಖೆಯಲ್ಲಿ ಕನಿಷ್ಠ 50 ಉದ್ಯೋಗಿಗಳು 25 ಎಣಿಕೆ ಯಂತ್ರಗಳನ್ನು ಬಳಸಿ 305 ಕೋಟಿ ಎಣಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಾನುವಾರಮ ಮಧ್ಯೆ ರಾತ್ರಿ ವೇಳೆ ಐಟಿ ಅಧಿಕಾರಿಗಳು ತಮ್ಮ ಕಾರ್ಯಾಚರಣೆಯನ್ನು ಮುಗಿಸಿದ್ದಾರೆ.

ಎರಡು ದಿನಗಳ ಹಿಂದೆ ಬೋಳಂಗೀರಿನ ಎಸ್‌ಬಿಐ ಮುಖ್ಯ ಶಾಖೆಗೆ ಬೋಳಂಗಿರ್ ಪಟ್ಟಣದ ಸುಡಪದ ಪ್ರದೇಶದಲ್ಲಿರುವ ಮದ್ಯದ ಕಂಪನಿಯ ಕಚೇರಿಯಿಂದ 100, 200 ಮತ್ತು 500 ಮುಖಬೆಲೆಯ 176 ಚೀಲ ಕರೆನ್ಸಿಗಳನ್ನು ತರಲಾಗಿತ್ತು. ಸಿಬ್ಬಂದಿಯು ಹಗಲು ರಾತ್ರಿ ಶೌಚಾಲಯದ ವಿರಾಮಗಳನ್ನು ಹೊರತುಪಡಿಸಿ ಉಳಿದೆಲ್ಲ ಸಮಯದಲ್ಲಿ ಎಣಿಕೆಯಲ್ಲಿ ನಿರತರಾಗಿದ್ದರು. ಕಳೆದ 3 ದಿನಗಳಲ್ಲಿ ಸಿಬ್ಬಂದಿ ಎಣಿಸಿದ ನಗದು ಮೊತ್ತವು ಅವರು ಒಂದು ವರ್ಷದಲ್ಲಿ ಮಾಡಿದ್ದಕ್ಕಿಂತ ಹೆಚ್ಚು ಎಂದು ಎಸ್‌ಬಿಐ ಬೋಲಂಗಿರ್‌ನ ಪ್ರಾದೇಶಿಕ ವ್ಯವಸ್ಥಾಪಕ ಭಗತ್ ಬೆಹೆರಾ ಹೇಳಿದ್ದಾರೆ.

ಬೌಧ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್‌ನ ಗ್ರೂಪ್ ಕಂಪನಿಯಾಗಿರುವ ಬಾಲ್ಡಿಯೊ ಸಾಹು ಮತ್ತು ಗ್ರೂಪ್ ಆಫ್ ಕಂಪನಿಗಳು ಕಾಂಗ್ರೆಸ್ ರಾಜ್ಯಸಭಾ ಸಂಸದರೊಂದಿಗೆ ಸಂಪರ್ಕ ಹೊಂದಿವೆ. ಅವರ ಮಗ ರಿತೇಶ್ ಸಾಹು ವ್ಯವಸ್ಥಾಪಕ ನಿರ್ದೇಶಕರಾಗಿದ್ದರೆ, ಹಿರಿಯ ಸಹೋದರ ಉದಯ್ ಶಂಕರ್ ಪ್ರಸಾದ್ ಅವರು ಎಕ್ಸ್‌ಟ್ರಾ ನ್ಯೂಟ್ರಲ್ ಅಲ್ಕೋಹಾಲ್ ತಯಾರಿಸುವ ಕಂಪನಿಯ ಅಧ್ಯಕ್ಷರಾಗಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರು ಭಾನುವಾರ ರಾಹುಲ್ ಗಾಂಧಿಯನ್ನು ಗುರಿಯಾಗಿಸಿಕೊಂಡು ಹಲವಾರು ಪ್ರಶ್ನೆಗಳನ್ನು ಎತ್ತಿದ್ದಾರೆ. ಕಾಂಗ್ರೆಸ್​ನ ಭ್ರಷ್ಟರ ಕೈಗೆ ಕಾನೂನಿಗೆ ಕುಣಿಗೆ ಬೀಳಲಿದೆ, ಅವರೆಲ್ಲರೂ ಅದಕ್ಕೆ ಹೊಣೆಯಾಗಲಿದ್ದಾರೆ ಎಂಬುದಾಗಿ ಬಿಜೆಪಿ ಹೇಳಿದೆ.

ಒಡಿಶಾದ ಬಾಲಂಗೀರ್​ನಲ್ಲಿರುವ ಸಾಹು ಅವರ ಸಹೋದರನ ಒಡೆತನದ ಡಿಸ್ಟಿಲರಿ ಕಂಪನಿಯ ಆವರಣದಿಂದ ಆದಾಯ ತೆರಿಗೆ ಇಲಾಖೆ 300 ಕೋಟಿ ರೂ.ಗಿಂತ ಹೆಚ್ಚು ನಗದು ವಶಪಡಿಸಿಕೊಂಡಿದೆ. ನಿರಂತರವಾಗಿ ನಡೆಯುತ್ತಿರುವ ಶೋಧ ಕಾರ್ಯಾಚರಣೆಯಲ್ಲಿ ಬಗೆದಷ್ಟು ನೋಟಿನ ಕಂತೆಗಳು ಸಿಗುತ್ತಿವೆ. ಕಾರ್ಯಾಚರಣೆ ಆರನೇ ದಿನಕ್ಕೆ ಕಾಲಿಟ್ಟಿದ್ದು, ಭಾನುವಾರ ಬೆಳಿಗ್ಗೆ ಹೊಸ ಎಣಿಕೆ ಯಂತ್ರಗಳನ್ನು ತಂದು ದುಡ್ಡನ್ನು ಎಣಿಸಲು ಆರಂಭಿಸಿದ್ದಾರೆ.

ಸಹೋದರ, ನೀವು ಮತ್ತು ನಿಮ್ಮ ನಾಯಕ ರಾಹುಲ್ ಗಾಂಧಿ ಇದಕ್ಕೆಲ್ಲ ಉತ್ತರಿಸಬೇಕು. ಇದು ನವ ಭಾರತ. ವಂಶಪಾರಂಪರ್ಯದ ಹೆಸರಿನಲ್ಲಿ ಜನಸಾಮಾನ್ಯರ ಶೋಷಣೆ ಮಾಡಲು ಇಲ್ಲಿ ಕಿಂಚಿತ್ತೂ ಅವಕಾಶವಿಲ್ಲ. ನೀವು ತಪ್ಪಿಸಿಕೊಳ್ಳಲು ಓಡಿ ಓಡಿ ಸುಸ್ತಾಗುತ್ತೀರಿ. ಕಾನೂನು ನಿಮ್ಮನ್ನು ಬೆನ್ನಟ್ಟದೆ ಬಿಡುವುದಿಲ್ಲ. ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರಕ್ಕೆ ಖಾತರಿ ಕೊಟ್ಟರೆ, ನರೇಂದ್ರ ಮೋದಿ ಭ್ರಷ್ಟಾಚಾರದ ವಿರುದ್ಧ ಕ್ರಮದ ಖಾತರಿ ನೀಡುತ್ತಾರೆ. ಸಾರ್ವಜನಿಕರ ಹಣವನ್ನು ನೀವು ಹಿಂದಿರುಗಿಸಬೇಕಾಗುತ್ತದೆ” ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.

ಐಟಿ ರೇಡ್​ ವಿಚಾರದಲ್ಲಿ ರಾಹುಲ್ ಗಾಂಧಿ ಅವರ ಮೌನವನ್ನು ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಪ್ರಶ್ನಿಸಿದ್ದಾರೆ. “ಧೀರಜ್ ಸಾಹು ವಿರುದ್ಧದ ಐಟಿ ಶೋಧದ ಬಗ್ಗೆ ರಾಹುಲ್ ಗಾಂಧಿ ಏಕೆ ಮೌನವಾಗಿದ್ದಾರೆ ಎಂದು ನಾನು ಕೇಳಲು ಬಯಸುತ್ತೇನೆ. ನೀವು ಸದಾ ಆದಾಯ ತೆರಿಗೆ ಇಲಾಖೆಯನ್ನು ಟೀಕಿಸುತ್ತೀರುತ್ತೀರಿ. ಆದರೆ ಈಗ ಏಕೆ ಸುಮ್ಮನಿದ್ದೀರಿ ಎಂದು ಕೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: ಇಷ್ಟೊಂದು ಕಪ್ಪು ಹಣ ಎಲ್ಲಿಡುತ್ತಾರೋ ಎಂದು ಕೇಳಿದ್ದ ಕೈ ಸಂಸದನ ಬಳಿ 300 ಕೋಟಿ ರೂ. ಬ್ಲ್ಯಾಕ್ ಮನಿ!

Exit mobile version