ನವದೆಹಲಿ: ಹರಿಯಾಣದ ಪಾಣಿಪತ್ ಜಿಲ್ಲೆ ಸಮಾಲ್ಕದಲ್ಲಿ ಮಾರ್ಚ್ 12ರಿಂದ 14ರವರೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS Meeting) ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭೆ ನಡೆಯಲಿದೆ. ಸಭೆಯಲ್ಲಿ 2022-23 ನೇ ಸಾಲಿನ ಸಂಘ ಕಾರ್ಯದ ಸಮೀಕ್ಷೆ ಮತ್ತು ಮುಂಬರುವ 2023-24ನೇ ಸಾಲಿನ ಸಂಘ ಕಾರ್ಯದ ವಾರ್ಷಿಕ ಯೋಜನೆಯ ಕುರಿತು ಚರ್ಚಿಸಲಾಗುತ್ತದೆ.
ಕಾರ್ಯಕರ್ತರ ನಿರ್ಮಾಣಕ್ಕಾಗಿ ಪರಿಶ್ರಮ, ಸಂಘ ಶಿಕ್ಷ ವರ್ಗದ ಯೋಜನೆ, ಶತಾಬ್ದಿ ವಿಸ್ತಾರದ ಕುರಿತಾಗಿ ಯೋಜನೆ, ಕಾರ್ಯದ ದೃಢೀಕರಣ ಹಾಗೂ ರಾಷ್ಟ್ರದ ವರ್ತಮಾನ ಸ್ಥಿತಿಗತಿಗಳ ಕುರಿತು ಸಭೆಯಲ್ಲಿ ಪ್ರಸ್ತಾಪವಾಗಲಿದೆ ಎಂದು ಆರ್‌ಎಸ್‌ಎಸ್ ಪ್ರಕಟಣೆ ತಿಳಿಸಿದೆ.
ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಎಲ್ಲ ಸಹಸರಕಾರ್ಯವಾಹರು, ಅಖಿಲ ಭಾರತೀಯ ಕಾರ್ಯಕಾರಿಣಿಗಳು, ಕ್ಷೇತ್ರ ಮತ್ತು ಪ್ರಾಂತದ ಕಾರ್ಯಕಾರಿಣಿಗಳು, ಸಂಘದ ಅಖಿಲ ಭಾರತೀಯ ಪ್ರತಿನಿಧಿಗಳು, ಎಲ್ಲ ವಿಭಾಗ ಪ್ರಚಾರಕರು, ವಿವಿಧ ಸಂಘಟನೆಗಳ ಆಹ್ವಾನಿತ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಸಂಘದ 1,400 ಕಾರ್ಯಕರ್ತರು ಕೂಡ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದೆ.
ಇದನ್ನೂ ಓದಿ: Shivamogga News: ಹಿಂದು, ಹಿಂದುತ್ವ ದೇಶಕ್ಕೆ ಅನಿವಾರ್ಯ: ಆರ್‌ಎಸ್‌ಎಸ್ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ