Site icon Vistara News

Mohan Bhagwat | ಮಾದರಿ ಸಮಾಜ ನಿರ್ಮಿಸುವುದೇ ಆರೆಸ್ಸೆಸ್‌ ಗುರಿ ಎಂದ ಮೋಹನ್‌ ಭಾಗವತ್‌

Misconceptions being spread about India to slow down its progress towards becoming vishwaguru: Mohan Bhagwat

Misconceptions being spread about India to slow down its progress towards becoming vishwaguru: Mohan Bhagwat

ನವದೆಹಲಿ: ಸಮಾಜದಲ್ಲಿ ಒಗ್ಗಟ್ಟು ಮೂಡಿಸುವ ಮೂಲಕ ಮಾದರಿ ಸಮಾಜ ನಿರ್ಮಿಸುವುದೇ ಸಂಘ ಪರಿವಾರದ ಉದ್ದೇಶವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್‌ ಭಾಗವತ್‌ (Mohan Bhagwat) ಹೇಳಿದ್ದಾರೆ. ಆರ್‌ಎಸ್‌ಎಸ್‌ ದಿಲ್ಲಿ ಘಟಕ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಸೇವೆಯ ಮೂಲಕ ಸಮಾಜಕ್ಕೆ ಕೊಡುಗೆ ನೀಡುವವರು ಒಗ್ಗಟ್ಟಾಗಿ ಬರಬೇಕೇ ಹೊರತು, ಒಬ್ಬೊಬ್ಬರಾಗಿ ಬರಬಾರದು. ಇದಕ್ಕಾಗಿ ಸಂಘ ಪರಿವಾರವೂ ಶ್ರಮಿಸುತ್ತಿದೆ” ಎಂದು ಹೇಳಿದರು.

“ಸಂಘವು ಸಮಾಜದಲ್ಲಿ ಜಾಗೃತಿ ಮೂಡಿಸಲು ಹಲವು ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಮಾಜದ ಸೇವೆಗೆ ಜನ ಒಗ್ಗಟ್ಟಾದರೆ ಮಾದರಿ ಸಮಾಜ ನಿರ್ಮಾಣವಾಗುವುದರಲ್ಲಿ ಎರಡು ಮಾತಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಹಲವು ಗಣ್ಯರು, ಸಾಮಾನ್ಯರು ಒಗ್ಗೂಡಿ ಹೋರಾಡಿದರು. ಹಾಗಾಗಿಯೇ, ದೇಶ ಸ್ವಾತಂತ್ರ್ಯ ಗಳಿಸಿತು. ಆದರೆ, ಒಂದು ಸಮಾಜವಾಗಿ ರೂಪುಗೊಳ್ಳಲು ಹೆಚ್ಚಿನ ಸಮಯ ಬೇಕಾಯಿತು” ಎಂದರು.

ಮಹಿಳೆಯರು ಸಬಲರು

ಮಹಿಳೆಯರ ಕುರಿತು ಮಾತನಾಡಿದ ಭಾಗವತ್‌, “ಪುರುಷರಿಗಿಂತ ಮಹಿಳೆಯರು ಹೆಚ್ಚು ಸಶಕ್ತರಾಗಿದ್ದಾರೆ. ಹಾಗಾಗಿ, ಪುರುಷರು ಹೆಣ್ಣುಮಕ್ಕಳಿಗೆ ಬೆಂಬಲ ನೀಡುತ್ತಿದ್ದೇವೆ, ಅವರ ಏಳಿಗೆಗೆ ಕಾರಣರಾಗುತ್ತಿದ್ದೇವೆ, ಸಬಲೀಕರಣಗೊಳಿಸುತ್ತಿದ್ದೇವೆ ಎಂದು ಭಾವಿಸುವುದು ಬೇಡ. ಹೆಣ್ಣುಮಕ್ಕಳು ಅವರ ಗುರಿಯನ್ನು ನಿರ್ಧರಿಸಲು ಮುಕ್ತ ಅವಕಾಶ ನೀಡಬೇಕು” ಎಂದು ಹೇಳಿದರು.

ಇದನ್ನೂ ಓದಿ | ಗೋ ಹತ್ಯೆ ನಿಷೇಧ, ಹಿಂದೂ ರಾಷ್ಟ್ರ ಉತ್ಥಾನ ಪ್ರತಿಪಾದಿಸಿದ ಮೋಹನ್​ ಭಾಗವತ್​

Exit mobile version