Site icon Vistara News

Russian MP Dies In Odisha | ಪುಟಿನ್‌ ಟೀಕಾಕಾರರಾಗಿದ್ದ ರಷ್ಯಾ ಸಂಸದ, ಅವರ ಆಪ್ತ ಒಡಿಶಾದಲ್ಲಿ ನಿಗೂಢ ಸಾವು

Russia MP Dies In Odisha

ಭುವನೇಶ್ವರ: ಅಚ್ಚರಿಯ ಘಟನೆಯೊಂದರಲ್ಲಿ ಒಡಿಶಾದ ರಾಯಗಡ ಜಿಲ್ಲೆಯ ಒಂದೇ ಹೋಟೆಲ್‌ನಲ್ಲಿ ರಷ್ಯಾ ಸಂಸದ ಪಾವೆಲ್‌ ಆ್ಯಂಟೋವ್‌ (Russian MP Dies In Odisha) ಹಾಗೂ ಅವರ ಆಪ್ತ ವ್ಲಾಡಿಮಿರ್‌ ಬುಡನೋವ್‌ ಅವರು ಮೃತಪಟ್ಟಿದ್ದಾರೆ. ಎರಡೇ ದಿನದ ಅಂತರದಲ್ಲಿ ಇಬ್ಬರೂ ಮೃತಪಟ್ಟಿದ್ದು, ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲಾಗುತ್ತಿದೆ. ಅದರಲ್ಲೂ, ಸಂಸದ ಹಾಗೂ ಅವರ ಆಪ್ತ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಟೀಕಾಕಾರರಾಗಿದ್ದರು ಎಂಬ ಕಾರಣದಿಂದಾಗಿ ಪ್ರಕರಣವು ಮತ್ತಷ್ಟು ಗಂಭೀರವಾಗಿದೆ.

“ರಷ್ಯಾ ಸಂಸದ ಸೇರಿ ನಾಲ್ವರು ಒಡಿಶಾದ ರಾಯಗಡಕ್ಕೆ ಪ್ರವಾಸಕ್ಕೆಂದು ಆಗಮಿಸಿದ್ದರು. ಅವರು ಸ್ಥಳೀಯ ಹೋಟೆಲ್‌ನಲ್ಲಿ ತಂಗಿದ್ದರು. ಕೆಲ ದಿನದ ಹಿಂದೆ ನಾಲ್ವರಲ್ಲಿ ಒಬ್ಬರು ಮೃತಪಟ್ಟಿದ್ದು, ಹೃದಯ ಸಂಬಂಧಿ ಕಾಯಿಲೆಯಿಂದ ಅವರು ಮೃತಪಟ್ಟಿರುವ ಸಾಧ್ಯತೆ ಇದೆ. ಆದರೆ, ಅಸಹಜ ಸ್ಥಿತಿಯಲ್ಲಿ ಮತ್ತೊಬ್ಬರ ಶವ ಪತ್ತೆಯಾಗಿದೆ. ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ” ಎಂದು ಡಿಜಿಪಿ ಸುನೀಲ್‌ ಕುಮಾರ್‌ ಬನ್ಸಾಲ್‌ ಮಾಹಿತಿ ನೀಡಿದ್ದಾರೆ.

ರಷ್ಯಾ ಸಂಸದ, ಅವರ ಆಪ್ತರು ತಂಗಿದ್ದ ರಾಯಗಡ ಜಿಲ್ಲೆಯ ಹೋಟೆಲ್‌.

“ಕೋಲ್ಕೊತಾದಲ್ಲಿರುವ ರಷ್ಯಾ ಕಾನ್ಸುಲೇಟ್‌ಅನ್ನು ಸಂಪರ್ಕಿಸಿದ್ದು, ಈ ಕುರಿತು ಮಾಹಿತಿ ನೀಡಲಾಗಿದೆ. ಎಲ್ಲ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದೆ” ಎಂದು ಬನ್ಸಾಲ್‌ ತಿಳಿಸಿದಾರೆ. ಕಳೆದ ಭಾನುವಾರ ರಷ್ಯಾ ಸಂಸದ ಪಾವೆಲ್‌ ಅವರು ಹೋಟೆಲ್‌ನ ಮೂರನೇ ಮಹಡಿಯಿಂದ ಮೃತಪಟ್ಟಿದ್ದು, ಕುಟುಂಬಸ್ಥರ ಅನುಮತಿ ಪಡೆದು ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಪಾವೆಲ್‌ ಅವರು ತಮ್ಮ 65ನೇ ಜನ್ಮದಿನ ಆಚರಿಸಲು ಒಡಿಶಾ ಪ್ರವಾಸ ಕೈಗೊಂಡಿದ್ದರು. ಇವರೆಲ್ಲರೂ ವ್ಲಾಡಿಮಿರ್‌ ಪುಟಿನ್‌ ಅವರ ಟೀಕಾಕಾರರಾಗಿದ್ದರು. ಹಾಗೆಯೇ, ಉಕ್ರೇನ್‌ ಮೇಲೆ ರಷ್ಯಾ ಮಾಡಿರುವ ಆಕ್ರಮಣವನ್ನು ಖಂಡಿಸುತ್ತಿದ್ದರು. ಹಾಗಾಗಿ, ಇವರ ಸಾವಿನ ಕುರಿತು ಹಲವು ಶಂಕೆ ವ್ಯಕ್ತವಾಗಿವೆ. ಇವರು ಡಿಸೆಂಬರ್‌ 21ರಂದು ರಾಯಗಡ ಹೋಟೆಲ್‌ಗೆ ಆಗಮಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ | Officer death | ಮೈಸೂರಲ್ಲಿ ಕ್ರೆಡಲ್ ಅಧಿಕಾರಿ ನಿಗೂಢ ಸಾವು: ಮಲಗಿದಲ್ಲೇ ಮೃತ್ಯು, ಗೊತ್ತಾಗಿದ್ದು ಒಂದೂವರೆ ದಿನದ ಬಳಿಕ!

Exit mobile version