Site icon Vistara News

ಕಾಂಗ್ರೆಸ್‌ಗೆ ಮತ್ತೊಂದು ಆಘಾತ! ಖರ್ಗೆಗೆ ‘ಕೈ’ ಕೊಟ್ಟು ಹೊಸ ಪಕ್ಷ ಸ್ಥಾಪಿಸಲಿದ್ದಾರೆ ಯುವ ನಾಯಕ

Padayatra by Sachin Pilot

ನವದೆಹಲಿ: ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ರಾಜಸ್ಥಾನದ ಕಾಂಗ್ರೆಸ್‌ನಲ್ಲಿನ ಬಿರುಕು (Rajasthan Congress Crisis) ಮತ್ತುಷ್ಟು ಹೆಚ್ಚಾಗಿದೆ. ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ (CM Ashok Gehlot) ಜತೆಗೆ ಮುನಿದುಕೊಂಡಿರುವ ಯುವ ನಾಯಕ ಸಚಿನ್ ಪೈಲಟ್ (Sachin Pilot) ಅವರು, ಪಕ್ಷ ತೊರೆಯುವುದು ಬಹುತೇಕ ಖಚಿತವಾಗಿದೆ. ಚುನಾವಣೆ ಎರಡ್ಮೂರು ತಿಂಗಳು ಇರುವಾಗಲೇ ತಮ್ಮದೇ ಆದ ಪ್ರಗತಿಶೀಲ ಕಾಂಗ್ರೆಸ್ (Pragatisheel Congress) ಪಕ್ಷವನ್ನು ಸ್ಥಾಪಿಸಲು ಮುಂದಾಗಿದ್ದಾರೆಂದು ತಿಳಿದು ಬಂದಿದೆ.

ಸಚಿನ್ ಪೈಲಟ್ ಅವರಿಗೆ ಪ್ರಶಾಂತ್ ಕಿಶೋರ್ ನೇತೃತ್ವದ ರಾಜಕೀಯ ಸಲಹಾ ಸಂಸ್ಥೆ ತಜ್ಞ ಸಂಸ್ಥೆ ಐ ಪ್ಯಾಕ್ ನೆರವು ನೀಡುತ್ತಿದೆ ಎನ್ನಲಾಗುತ್ತಿದೆ. ಏಪ್ರಿಲ್ 11ರಂದು ಸಚಿನ್ ಪೈಲಟ್ ಅವರು ಕೈಗೊಂಡಿದ್ದ ಒಂದು ದಿನದ ಸತ್ಯಾಗ್ರಹ ಪ್ಲ್ಯಾನ್ ಕೂಡ ಇದೇ ಸಂಸ್ಥೆಯದ್ದು ಎಂದು ಹೇಳಲಾಗುತ್ತಿದೆ. ವಸಂಧುರಾ ರಾಜೇ ಅವರು ಮುಖ್ಯಮಂತ್ರಿಯಾಗಿದ್ದಾಗ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಒತ್ತಾಯಿಸಿ ಸಚಿನ್ ಪೈಲಟ್ ಸತ್ಯಾಗ್ರಹ ನಡೆಸಿದ್ದರು. ಅಜ್ಮೇರ್‌ನಿಂದ ಜೈಪುರದವರೆಗಿನ ಪಾದಯಾತ್ರೆ ಪ್ಲ್ಯಾನ್ ಕೂಡ ಐಪ್ಯಾಕ್‌ನದ್ದೇ ಎಂದು ಹೇಳಲಾಗುತ್ತಿದೆ.

ಅದಾಗಲೇ ಕಾಂಗ್ರೆಸ್ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿರುವ ಸಚಿನ್ ಪೈಲಟ್ ಅವರು, ಜೂನ್ 11ರಂದು ಪ್ರಮುಖ ಘೋಷಣೆ ಮಾಡುವ ಸಾಧ್ಯತೆ ಇದೆ. ಜೂನ್ 11 ಅವರ ತಂದೆ ರಾಜೇಶ್ ಪೈಟಲ್ ಅವರ ಪುಣ್ಯ ತಿಥಿಯೂ ಹೌದು. ಅಂದು ಯಾತ್ರೆಯನ್ನು ಕೈಗೊಳ್ಳಲಿರುವ ಸಚಿನ್ ಪೈಲಟ್ ಅವರು ಹೊಸ ಪಕ್ಷ ಪ್ರಗತಿಶೀಲ ಕಾಂಗ್ರೆಸ್ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Sachin Pilot: ಜನ್ ಸಂಘರ್ಷ ಪಾದಯಾತ್ರೆ ಅಂತ್ಯ, ಭ್ರಷ್ಟಾಚಾರ ಕೇಸುಗಳ ತನಿಖೆಗೆ 15 ದಿನಗಳ ಗಡುವು ವಿಧಿಸಿದ ಸಚಿನ್ ಪೈಲಟ್

ರಾಜಸ್ಥಾನ ಕಾಂಗ್ರೆಸ್ ಪಕ್ಷದ ಬಿರುಕು ಮುಚ್ಚುವ ಪ್ರಯತ್ನವನ್ನು ಹೈಕಮಾಂಡ್ ಮಾಡುತ್ತಲೇ ಇದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಅವರು ಇತ್ತೀಚೆಗಷ್ಟೇ ಸಿಎಂ ಅಶೋಕ್ ಹೆಗ್ಲೋಟ್ ಮತ್ತು ಸಚಿನ್ ಪೈಲಟ್ ಜತೆಗೆ ಮಾತುಕತೆ ನಡೆಸಿ, ಸಮಸ್ಯೆಗಳನ್ನು ಬಗೆಹರಿಸಿದ್ದಾರೆಂದು ಹೇಳಲಾಗುತ್ತಿತ್ತು. ಆದರೆ, ಈಗ ನಡೆಯುತ್ತಿರುವ ಬೆಳವಣಿಗೆಗಳು ಗಮನಿಸಿದರೆ, ಪೈಲಟ್ ಮತ್ತು ಗೆಹ್ಲೋಟ್ ನಡುವಿನ ಮುಸುಕಿನ ಗುದ್ದಾಟ ಜೋರಾಗಿಯೇ ನಡೆಯುತ್ತಿದೆ.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version