Site icon Vistara News

Medicine with Barcode | ಭಾರತದಲ್ಲಿ ಬಾರ್‌ಕೋಡ್ ಸಹಿತ ಔಷಧ ಮಾರಾಟ ಕಡ್ಡಾಯ

Medicine with Barcode

ನವದೆಹಲಿ: ಬಾರ್ ಕೋಡ್ ಇಲ್ಲದೇ ಯಾವುದೇ ಔಷಧವನ್ನು ಮಾರಾಟ ಮಾಡುವಂತಿಲ್ಲ. ಈ ಬಗ್ಗೆ ಆದೇಶ ಹೊರಡಿಸಿರುವ ಕೇಂದ್ರ ಸರ್ಕಾರವು, ದೇಶದಲ್ಲಿ ಔಷಧಗಳನ್ನು ಬಾರ್ ಕೋಡ್ ಸಹಿತ (Medicine with Barcode) ಮಾರಾಟ ಮಾಡಬೇಕು. ಬಾರ್ ಕೋಡ್ ಅಳವಡಿಕೆಯಿಂದ ಔಷಧದ ಅಧಿಕೃತತೆ ಮತ್ತು ಅದನ್ನು ಪತ್ತೆ ಹಚ್ಚಲು ನೆರವಾಗುತ್ತದೆ ಎಂದು ತಿಳಿಸಿದೆ. ಈ ನಿರ್ಧಾರವು 2023ರ ಆಗಸ್ಟ್ 1ರಿಂದ ಜಾರಿಗೆ ಬರಲಿದೆ. ಬಾರ್ ಕೋಡ್ ಅಳವಡಿಕೆಯನ್ನು ಔಷಧಗಳ ಆಧಾರ್ ಕಾರ್ಡ್ ಎಂದೇ ಗುರುತಿಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯು ತಿಳಿಸಿದೆ.

ವಿಶಿಷ್ಟ ಕ್ಯೂಆರ್ ಕೋಡ್ ಆಗಿರುವ ಬಾರ್‌ಕೋಡ್‌ನಲ್ಲಿ ಉತ್ಪನ್ನ ಗುರುತಿಸುವ ಕೋಡ್, ಔಷಧಿಯ ಸೂಕ್ತ ಮತ್ತು ಸಾಮಾನ್ಯ ಹೆಸರು, ಉತ್ಪಾದಕರ ಹೆಸರು ಮತ್ತು ವಿಳಾಸ, ಬ್ಯಾಚ್ ನಂಬರ್, ಉತ್ಪಾದನಾ ದಿನಾಂಕ, ಎಕ್ಸ್‌ಪೈರಿ ಡೇಟ್, ಉತ್ಪಾದನಾ ಪರವಾನಗಿ ನಂಬರ್ ಸೇರಿದಂತೆ ಇತರ ಮಾಹಿತಿ ಇರುತ್ತದೆ.

ಈ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಕೆಮಿಸ್ಟ್ ಅಂಗಡಿಗಳಲ್ಲಿ ಪ್ರಚಾರ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಅಲ್ಲೆಗ್ರಾ, ಡೊಲೊ, ಆಗ್ಮೆಂಟಿನ್, ಸ್ಯಾರಿಡಾನ್, ಕ್ಯಾಲ್ಪೋಲ್ ಮತ್ತು ಥೈರೊನಾರ್ಮ್‌ನಂತಹ ಟಾಪ್-ಸೆಲ್ಲಿಂಗ್ ಔಷಧಗಳು ಮಾರುಕಟ್ಟೆಯಲ್ಲಿ ಬಾರ್‌ಕೋಡ್‌ಗಳೊಂದಿಗೆ ಹೊಸ ಪ್ಯಾಕ್‌ಗಳನ್ನು ಹೊರತರುವ 300 ಬ್ರಾಂಡ್‌ಗಳಲ್ಲಿ ಸೇರಿವೆ.

ಇದನ್ನೂ ಓದಿ | Dengue vaccine | ಶೀಘ್ರವೇ ಡೆಂಗೆ ಲಸಿಕೆ! ಅನುಮತಿ ಕೋರಿದ ಔಷಧ ಕಂಪನಿಗಳು

Exit mobile version