Site icon Vistara News

Salman Khan | ತಂಗಿ ಮನೆಯಲ್ಲಿ ಗಣೇಶ ಹಬ್ಬ ಆಚರಿಸಿದ ನಟ ಸಲ್ಮಾನ್ ಖಾನ್

Salman Khan

ಮುಂಬೈ: ಬಾಲಿವುಡ್ ಸ್ಟಾರ್‌ಗಳಿಗೆ ಗಣೇಶ ಹಬ್ಬ ಎಂದರೆ ವಿಶೇಷ ಪ್ರೀತಿ. ವಿನಾಯಕನನ್ನು ಪ್ರತಿಷ್ಠಾಪಿಸಿ ಸಂಭ್ರಮ ಪಡಲು ಯಾವುದೇ ಧರ್ಮ, ಜಾತಿ, ಸ್ಟೇಟಸ್ ಅಡ್ಡ ಬರುವುದಿಲ್ಲ ಎಂಬುದಕ್ಕೆ ಬಾಲಿವುಡ್ ಸ್ಟಾರ್‌ಗಳ ಗಣೇಶ ಹಬ್ಬದ ಸಡಗರವನ್ನು ಉದಾಹರಣೆಯಾಗಿ ನೀಡಬಹುದು. ಹಿಂದಿ ಚಿತ್ರರಂಗದ ಸುಲ್ತಾನ್ ಎಂದು ಖ್ಯಾತರಾಗಿರುವ ಸಲ್ಮಾನ್ ಖಾನ್(Salman Khan), ಗಣೇಶನಿಗೆ ಆರತಿ ಮಾಡುವ ಮೂಲಕ ಪ್ರತಿವರ್ಷದಂತೆ ಈ ವರ್ಷವೂ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.

ಮುಂಬಯಿನ ತಮ್ಮ ಸಹೋದರಿ ಅರ್ಪಿತಾ ಖಾನ್ ಮನೆಗೆ ಬಂದ ಸಲ್ಮಾನ್ ಖಾನ್, ಗಣೇಶನಿಗೆ ಆರತಿ ಮಾಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ, ಫೋಟೋಗಳನ್ನು ಸಲ್ಮಾನ್ ಖಾನ್ ತಮ್ಮ ಇನ್‌ಸ್ಟಾಗ್ರಾಮ್‌ದಲ್ಲಿ ಷೇರ್ ಮಾಡಿಕೊಂಡಿದ್ದಾರೆ. ಈ ವೇಳೆ, ಬಿಳಿ ಶರ್ಟ್, ಬ್ಲೂ ಡೆನಿಮ್‌ ಜೀನ್ಸ್ ಧರಿಸಿದ್ದರು.

ಇನ್‌ಸ್ಟಾದಲ್ಲಿ ಷೇರ್ ಮಾಡಲಾಗಿರುವ ವಿಡಿಯೋದಲ್ಲಿ, ಸಲ್ಮಾನ್ ಖಾನ್ ಯಾವ ರೀತಿಯಲ್ಲಿ ಗಣೇಶನಿಗೆ ಆರತಿ ಮಾಡಿದರು ಎಂಬುದನ್ನು ಸೆರೆ ಹಿಡಿಯಲಾಗಿದೆ. ಅರ್ಪಿತಾ ಖಾನ್ ಮತ್ತು ಅವರ ಪತಿ ಆಯುಷ್ ಶರ್ಮಾ ಹಾಗೂ ಮಗ ಆಹಿಲ್ ಶರ್ಮಾ ಒಟ್ಟಿಗೆ ಆರತಿ ಮಾಡಿರುವುದನ್ನೂ ಇದರಲ್ಲಿ ಕಾಣಬಹುದು. ಈ ಸಂದರ್ಭದಲ್ಲಿ ಪ್ಲೇ ಆಗುತ್ತಿದ್ದ ಮ್ಯೂಸಿಕ್‌ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿರುವುದನ್ನೂ ಕಾಣಬಹುದಾಗಿದೆ.

ಮತ್ತೊಬ್ಬ ನಟ ರಿತೇಶ್ ದೇಶಮುಖ್ ಅವರೂ ಆರತಿ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಸಲ್ಮಾನ್ ಖಾನ್ ಅವರ ತಾಯಿ ಸಲ್ಮಾ ಸೋಪಾದಲ್ಲಿ ಕುಳಿತುಕೊಂಡಿದ್ದರೆ, ಮನೆಗೆ ಬಂದ ಅತಿಥಿಗಳು ಸಂಗಿತಕ್ಕೆ ತಕ್ಕಂತೆ ಚಪ್ಪಾಳೆ ತಟ್ಟತ್ತಾ ಖುಷಿಯಲ್ಲಿದ್ದರು. ತಾವು ಷೇರ್ ಮಾಡಿಕೊಂಡ ವಿಡಿಯೋಗೆ ಸಲ್ಮಾನ್ ಖಾನ್ ಅವರು, ಗಣಪತಿ ಬಪ್ಪಾ ಮೋರಯಾ ಎಂದು ಬರೆದುಕೊಂಡಿದ್ದಾರೆ.

ಪ್ರಖ್ಯಾತ ನಟರಾಗಿರುವ ಸಲ್ಮಾನ್ ಖಾನ್ ಅವರು ಪ್ರತಿ ವರ್ಷವೂ ಗಣೇಶ ಹಬ್ಬವನ್ನು ಆಚರಿಸುತ್ತಾರೆ. ಈ ವರ್ಷವೂ ಅವರು ಗಣೇಶ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡು, ಭಕ್ತಿ ಭಾವ ಪ್ರದರ್ಶಿಸಿದರು. ಸಲ್ಮಾನ್ ಖಾನ್ ಅವರ ತಾಯಿ ಸಲ್ಮಾ(ಸುಶೀಲಾ ಚರಕ್) ಕೂಡ ಹಿಂದೂವಾಗಿದ್ದರು ಎಂಬುದನ್ನು ಇಲ್ಲಿ ಗಮನಿಸಬಹುದು. ಸಲ್ಮಾನ್ ಖಾನ್ ಕುಟುಂಬವು ಪ್ರತಿ ವರ್ಷವೂ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿದೆ.

ಇದನ್ನೂ ಓದಿ | Ganesh Chaturthi | 13 ವರ್ಷಗಳಿಂದ ಭಾವೈಕ್ಯ ಸಾರುತ್ತಿರುವ ಗ್ಯಾರೇಜ್‌ ಗಣೇಶ!

Exit mobile version