Site icon Vistara News

Salman Khan : ತಮ್ಮ ಅರ್ಬಾಜ್ ರಿಂದ ದೂರವಾದ ಮಲೈಕಾಗೆ ಕ್ರಿಸ್ಮಸ್​ ಗಿಫ್ಟ್​ ಕಳುಹಿಸಿದ ಸಲ್ಮಾನ್​ ಖಾನ್​

Malaika arora

ಮುಂಬಯಿ: ಕ್ರಿಸ್ಮಸ್ ಮುನ್ನಾದಿನದಂದು ಸಲ್ಮಾನ್ ಖಾನ್ (Salman Khan) ಮತ್ತು ಅವರ ಬ್ರಾಂಡ್ ಬೀಯಿಂಗ್ ಹ್ಯೂಮನ್ ಅವರಿಂದ ವಿಶೇಷ ಉಡುಗೊರೆಯನ್ನು ಸ್ವೀಕರಿಸಿದ್ದೇನೆ ಎಂದು ಬಾಲಿವುಡ್ ನಟಿ ಮಲೈಕಾ ಅರೋರಾ ಬಹಿರಂಗಪಡಿಸಿದ್ದಾರೆ. ಮಲೈಕಾ ನಟ ಸಲ್ಮಾನ್ ಸಹೋದರ ಅರ್ಬಾಜ್​ ಖಾನ್​ ಮಾಜಿ ಪತ್ನಿ. ಅವರಿಬ್ಬರೂ 2016ರಲ್ಲಿ ಪತ್ಯೇಕಗೊಂಡಿದ್ದಾರೆ. ಆದಾಗ್ಯೂ ಅವರಿಗೆ ಕ್ರಿಸ್ಮಸ್ ಸಂದರ್ಭದಲ್ಲಿ ಗಿಫ್ಟ್ ಕಳುಹಿಸುವ ಹವ್ಯಾಸವನ್ನು ಸಲ್ಮಾನ್​ ಖಾನ್​ ನಿಲ್ಲಿಸಿಲ್ಲ.

ಸಲ್ಮಾನ್ ಮತ್ತು ಅವರ ತಂಡದಿಂದ ಸಿಹಿತಿಂಡಿಗಳಿಂದ ತುಂಬಿದ ಪೆಟ್ಟಿಗೆ ಮತ್ತು ಶುಭಾಶಯಗಳನ್ನು ಕಳುಹಿಸಲಾಗಿದೆ. ಅದರ ವಿಡಿಯೊವನ್ನು ಮಲೈಕಾ ಹಂಚಿಕೊಂಡಿದ್ದಾರೆ. ಪೆಟ್ಟಿಗೆಯಲ್ಲಿ ಒಂದೆರಡು ಬಟ್ಟೆಗಳು, ಹಾಟ್​ ಚಾಕೊಲೇಟ್ , ಸಾಂತಾ ಟೋಪಿ ಮತ್ತಿತರ ವಸ್ತುಗಳು ಇದ್ದವು.

ಪೆಟ್ಟಿಗೆಯಲ್ಲಿರುವ ಟಿಪ್ಪಣಿ ಹೀಗಿತ್ತು, “ನಿಮಗೆ ಆತ್ಮೀಯ ಮೆರ್ರಿ ಕ್ರಿಸ್ಮಸ್​, ಅದೇ ರೀತಿ ಸಂತೋಷದ ಹೊಸ ವರ್ಷದ ಶುಭಾಶಯಗಳು! ನಿಮ್ಮ ಅಚಲ ಸ್ನೇಹ ಮತ್ತು ಬೆಂಬಲಕ್ಕಾಗಿ ನಮ್ಮ ಮೆಚ್ಚುಗೆಯ ಸಂಕೇತವಾಗಿ, ನಾವು ಈ ಸಣ್ಣ ಉಡುಗೊರೆ ಹ್ಯಾಂಪರ್ ಅನ್ನು ಸಿದ್ಧಪಡಿಸಿದ್ದೇವೆ. ಅದು ನಿಮ್ಮ ಮುಖದಲ್ಲಿ ನಗುವನ್ನು ತರಲಿ. “ಪ್ರೀತಿ ಮತ್ತು ಕೃತಜ್ಞತೆಯೊಂದಿಗೆ, ಸಲ್ಮಾನ್ ಖಾನ್ ಮತ್ತು ಬೀಯಿಂಗ್ ಹ್ಯೂಮನ್ ಕ್ಲಾಥಿಂಗ್” ಎಂಬ ಸಂದೇಶವಿದೆ.

ಇದುವರೆಗೆ ಪುರುಷರ ವಸ್ತ್ರಗಳನ್ನು ಮಾತ್ರ ಮಾರುತ್ತಿದ್ದ ಬೀಯಿಂಗ್ ಹ್ಯೂಮನ್ ಹೊಸ ಮಹಿಳೆಯರ ಹೊಸ ಸಂಗ್ರಹವನ್ನು ಪ್ರಾರಂಭಿಸಲಿದೆ ಎಂದು ಸಲ್ಮಾನ್ ಕೆಲವು ವಾರಗಳ ಹಿಂದೆ ಘೋಷಿಸಿದ್ದರು.

ಅರ್ಬಾಜ್ ಖಾನ್ ಮಲೈಕಾ ಅರೋರಾ ಅವರನ್ನು ಮದುವೆಯಾಗಿ 19 ವರ್ಷಗಳಾಗಿವೆ. ಈ ಜೋಡಿ 1998 ರಲ್ಲಿ ವಿವಾಹವಾದರು. ಮಾರ್ಚ್ 2016 ರಲ್ಲಿ ತಮ್ಮ ಪ್ರತ್ಯೇಕತೆವಾಗುವುದನ್ನೂ ಘೋಷಿಸಿದ್ದರು. ಮೇ 2017 ರಲ್ಲಿ ಅಧಿಕೃತವಾಗಿ ವಿಚ್ಛೇದನ ಪಡೆದರು. ಅವರಿಗೆ ಅರ್ಹಾನ್ ಎಂಬ ಮಗನಿದ್ದಾನೆ.

ವಿಚ್ಛೇದನದ ನಂತರ ತಮ್ಮ ಸಂಬಂಧದ ಬಗ್ಗೆ ಮಾತನಾಡಿದ ಮಲೈಕಾ, ಸಂಬಂಧ ಯಾವಾಗಲೂ ಕಠಿಣವಾಗಿರುತ್ತದೆ. ನೀವು ಯಾವಾಗಲೂ ಬಹಳಷ್ಟು ವಿಷಯಗಳ ಬಗ್ಗೆ ಒಂದೇ ತೆರನಾಗಿರುವುದಿಲ್ಲ ವಿಶೇಷವಾಗಿ ನೀವು ನಿಮ್ಮ ಪ್ರತ್ಯೇಕ ಮಾರ್ಗಗಳಲ್ಲಿ ಹೋದಾಗ ಅಭಿಪ್ರಾಯ ಬೇಧಗಳು ಇರುತ್ತವೆ ಎಂದು ಹೇಳಿದ್ದರು. ಆದಾಗ್ಯೂ, ಅವರು ತಮ್ಮ ಮಾಜಿ ಪತಿಯನ್ನು ಶ್ಲಾಘಿಸಿದ್ದರು.

ಇದನ್ನೂ ಓದಿ : Dunki Box Office: ಎರಡನೇ ದಿನ ಕಡಿಮೆ ಗಳಿಕೆ ಕಂಡ ‘ಡಂಕಿ’ ಸಿನಿಮಾ!

ಅರ್ಬಾಜ್ ಮತ್ತು ನಾನು ಇಬ್ಬರೂ ಇಂದು ಮುಕ್ತರು. ನಾವು ಸಹಬಾಳ್ವೆ ನಡೆಸಬಹುದು. ನಮ್ಮ ಪ್ರೀತಿಯನ್ನು ಕಳೆದುಕೊಳ್ಳುವುದಿಲ್ಲ. ನಮ್ಮ ಮಗುವಿನ ಕಡೆಗೆ ಗಮನವನ್ನು ನೀಡಬಹುದು ಎಂದು ಮಲೈಕಾ ಹೇಳಿದ್ದರು.

ಮೇಕಪ್​ ಕಲಾವಿದೆ ಜತೆ ಎರಡನೇ ಮದುವೆಯಾದ ಅರ್ಬಾಜ್ ಖಾನ್​

ನಟ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಮತ್ತು ಮೇಕಪ್ ಕಲಾವಿದೆ ಶುರಾ ಖಾನ್ ಡಿಸೆಂಬರ್ 24 ರಂದು ವಿವಾಹವಾಗಿದ್ದಾರೆ. ನಟಿ ರವೀನಾ ಟಂಡನ್ ಅವರು ನವವಿವಾಹಿತ ದಂಪತಿಗಳಿಗೆ ಅಭಿನಂದನೆ ಸಲ್ಲಿಸಲು ವಿಶೇಷ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಸಲ್ಮಾನ್ ಖಾನ್ ಸಹೋದರನ ಮದುವೆ ವಿಚಾರ ಬಹಿರಂಗಗೊಂಡಿದೆ. ಮುಂಬೈನಲ್ಲಿರುವ ಅರ್ಬಾಜ್ ಖಾನ್ ಸಹೋದರಿ ಅರ್ಪಿತಾ ಖಾನ್ ಶರ್ಮಾ ಅವರ ನಿವಾಸದಲ್ಲಿ ಅವರ ವಿವಾಹ ನಡೆಯಿತು ಎಂದು ಹೇಳಲಾಗಿದೆ.

ಅರ್ಬಾಜ್ ಖಾನ್ ಮತ್ತು ಶುರಾ ಅವರ ವಿವಾಹ ಸಮಾರಂಬ ಖಾಸಗಿಯಾಗಿ ನಡೆದಿದೆ. ಸಹೋದರರಾದ ಸಲ್ಮಾನ್ ಖಾನ್ ಮತ್ತು ಸೊಹೈಲ್ ಖಾನ್, ಪೋಷಕರಾದ ಸಲೀಮ್ ಖಾನ್ ಮತ್ತು ಸಲ್ಮಾ ಖಾನ್ ಮತ್ತು ಮಗ ಅರ್ಹಾನ್ ಖಾನ್ ಸೇರಿದಂತೆ ಇಡೀ ಕುಟುಂಬದ ಸದಸ್ಯರು ಹಾಜರಿದ್ದರು. ವಧು ಶೂರಾ ಖಾನ್ ಅವರೊಂದಿಗೆ ನಿಕಟ ಸಂಬಂಧವನ್ನು ಹೊಂದಿರುವ ಉತ್ತಮ ಸ್ನೇಹಿತೆ ರವೀನಾ ಟಂಡನ್ ಮತ್ತು ಅವರ ಮಗಳು ರಾಶಾ ಟಂಡನ್ ಸಮಾರಂಭದಲ್ಲಿ ಭಾಗವಹಿಸಿದ್ದರು. ಫರಾಹ್ ಖಾನ್ ಮತ್ತು ರಿತೇಶ್ ದೇಶ್ ಮುಖ್ ಕೂಡ ಮದವೆಗೆ ಹೋಗಿ ಶುಭಾಶಯ ತಿಳಿಸಿದ್ದಾರೆ.

Exit mobile version