Site icon Vistara News

Salman Khan: 3 ದಶಕದ ಬಾಡಿಗಾರ್ಡ್‌ ಶೇರಾಗೆ ಜನ್ಮದಿನದ ಶುಭ ಕೋರಿದ ಸಲ್ಮಾನ್‌ ಖಾನ್

Salman Khan

Salman Khan

ಮುಂಬೈ: ಕಳೆದ 30 ವರ್ಷದಿಂದ ತಮ್ಮ ಬಾಡಿಗಾರ್ಡ್‌ ಆಗಿರುವ ಶೇರಾ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ (Salman Khan) ಅವರು ಶುಭಾಶಯ ತಿಳಿಸಿದ್ದಾರೆ. ಜನ್ಮದಿನದ ಶುಭಾಶಯ ತಿಳಿಸಿ ಸಲ್ಮಾನ್‌ ಖಾನ್‌ ಅವರು ಇನ್‌ಸ್ಟಾಗ್ರಾಂನಲ್ಲಿ ಶೇರಾ ಜತೆಗಿನ ಫೋಟೊ ಹಂಚಿಕೊಳ್ಳುತ್ತಲೇ ಸಾವಿರಾರು ಅಭಿಮಾನಿಗಳು ಕೂಡ ಶೇರಾ ಅವರಿಗೆ ಶುಭಾಶಯ ತಿಳಿಸಿದ್ದಾರೆ.

ಶೇರಾ ಜತೆಗಿನ ಫೋಟೊ ಹಂಚಿಕೊಂಡ ಸಲ್ಮಾನ್‌ ಖಾನ್, “ಜನ್ಮದಿನದ ಶುಭಾಶಯಗಳು ಶೇರಾ. ದೇವರ ಆಶೀರ್ವಾದ ಎಂದಿಗೂ ನಿಮ್ಮ ಮೇಲಿರಲಿ. ಜೀವನದಲ್ಲಿ ಖುಷಿಯಾಗಿರಿ” ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಶೇರಾ, “ಮಾಲೀಕರೇ ಧನ್ಯವಾದ. ಹಲವು ವರ್ಷಗಳಿಂದ ನೀವು ನೀಡುತ್ತಿರುವ ಪ್ರೀತಿ, ಆಶೀರ್ವಾದಕ್ಕೆ ಧನ್ಯವಾದ” ಎಂದು ಹೇಳಿದ್ದಾರೆ.

ಸಲ್ಮಾನ್‌ ಖಾನ್‌ ಅವರು ಶೇರಾ ಅವರಿಗೆ ವಿಶ್ ಮಾಡುತ್ತಲೇ ನಟನ ಮಾಜಿ ಪ್ರೇಯಸಿ ಸಂಗೀತಾ ಬಿಜಲಾನಿ ಅವರು ಕೂಡ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರಿಗೆ 30ಕ್ಕೂ ಅಧಿಕ ವರ್ಷದಿಂದ ಶೇರಾ ಅವರು ಬಾಡಿಗಾರ್ಡ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಲ್ಮಾನ್‌ ಖಾನ್‌ ಹಾಗೂ ಶೇರಾ ಮಧ್ಯೆ ಅವಿನಾಭಾವ ಸಂಬಂಧವಿದೆ. ಸಲ್ಮಾನ್‌ ಖಾನ್‌ ಅವರು 2011ರಲ್ಲಿ ಬಾಡಿಗಾರ್ಡ್‌ ಸಿನಿಮಾದಲ್ಲಿ ನಟಿಸಿ, ಅದು ಯಶಸ್ವಿಯಾದ ಬಳಿಕ ಸಿನಿಮಾವನ್ನು ಶೇರಾ ಅವರಿಗೆ ಡೆಡಿಕೇಟ್‌ ಮಾಡಿದ್ದರು. ಶೇರಾ ಅವರು ಕೂಡ ಸಲ್ಮಾನ್‌ ಖಾನ್‌ ಮೇಲೆ ಅಪಾರ ಪ್ರೀತಿ, ಗೌರವ ಇಟ್ಟುಕೊಂಡಿದ್ದಾರೆ. “ನನ್ನ ಕೊನೆಯ ಉಸಿರಿರುವವರೆಗೆ ಸಲ್ಮಾನ್‌ ಖಾನ್‌ ಅವರಿಗೆ ಬಾಡಿಗಾರ್ಡ್‌ ಆಗಿ ಇರುತ್ತೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Salman Khan: ‘ಟೈಗರ್‌ ಗಾಯಗೊಂಡಿದೆ’, ಟೈಗರ್‌ 3 ಶೂಟಿಂಗ್‌ ವೇಳೆ ನಟ ಸಲ್ಮಾನ್‌ ಖಾನ್‌ಗೆ ಗಾಯ

Exit mobile version