Salman Khan: 'ಟೈಗರ್‌ ಗಾಯಗೊಂಡಿದೆ', ಟೈಗರ್‌ 3 ಶೂಟಿಂಗ್‌ ವೇಳೆ ನಟ ಸಲ್ಮಾನ್‌ ಖಾನ್‌ಗೆ ಗಾಯ - Vistara News

ಪ್ರಮುಖ ಸುದ್ದಿ

Salman Khan: ‘ಟೈಗರ್‌ ಗಾಯಗೊಂಡಿದೆ’, ಟೈಗರ್‌ 3 ಶೂಟಿಂಗ್‌ ವೇಳೆ ನಟ ಸಲ್ಮಾನ್‌ ಖಾನ್‌ಗೆ ಗಾಯ

Salman Khan: ಸಾಲು ಸಾಲು ಸಿನಿಮಾಗಳ ಸೋಲಿನಿಂದ ಕಂಗೆಟ್ಟಿರುವ ಸಲ್ಮಾನ್‌ ಖಾನ್‌ ಅವರು ಟೈಗರ್‌ 3 ಸಿನಿಮಾ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇನ್ನು ಟೈಗರ್‌ 3 ಸಿನಿಮಾ ಶೂಟಿಂಗ್‌ ವೇಳೆಯೇ ಅವರಿಗೆ ಗಾಯವಾಗಿದ್ದು, ಅಭಿಮಾನಿಗಳು ಕಳವಳ ಹಾಗೂ ಕಾಳಜಿ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Salman Khan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: ಟೈಗರ್‌ 3 ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ (Salman Khan) ಅವರಿಗೆ ಗಾಯವಾಗಿದೆ. ಸಲ್ಮಾನ್‌ ಖಾನ್‌ ಎಡ ಭುಜಕ್ಕೆ ಗಾಯವಾಗಿದ್ದು, ಈ ಕುರಿತ ಫೋಟೊವನ್ನು ಸಲ್ಮಾನ್‌ ಖಾನ್‌ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಫೋಟೊ ಈಗ ವೈರಲ್ ಆಗಿದೆ.

ಫೋಟೊ ಹಂಚಿಕೊಳ್ಳುವ ಜತೆಗೆ ಸಲ್ಮಾನ್‌ ಖಾನ್‌ ಅವರು ಒಕ್ಕಣೆಯನ್ನೂ ಬರೆದಿದ್ದಾರೆ. “ಒಂದು ಕ್ಷಣಕ್ಕೆ ನೀವು ಜಗತ್ತನ್ನೇ ಹೊತ್ತುಕೊಂಡಂತೆ ಯೋಚನೆ ಮಾಡುತ್ತಿರುತ್ತೀರಿ. ಹಾಗೆಂದು ಎಲ್ಲರೂ ಭಾವಿಸಿರುತ್ತೇವೆ. ಆದರೆ, ಜಗತ್ತು ಬಿಡಿ, ಐದು ಕೆ.ಜಿಯ ಡಂಬೆಲ್‌ ಎತ್ತಿ ನೋಡಿ. ಟೈಗರ್‌ ಗಾಯಗೊಂಡಿದೆ” ಎಂದು ಸಲ್ಮಾನ್‌ ಖಾನ್‌ ಬರೆದುಕೊಂಡಿದ್ದಾರೆ. ಆ ಮೂಲಕ ಡಂಬೆಲ್‌ ಎತ್ತುವಾಗ ಗಾಯವಾಗಿದೆ ಎಂಬುದನ್ನು ತಿಳಿಸಿದ್ದಾರೆ.

ಸಲ್ಮಾನ್‌ ಖಾನ್‌ ಟ್ವೀಟ್

ಸಲ್ಮಾನ್‌ ಖಾನ್‌ ಅವರು ಇತ್ತೀಚೆಗೆ ನಟಿಸಿದ ರಾಧೆ, ಕಿಸಿ ಕಾ ಭಾಯ್‌, ಕಿಸಿ ಕಿ ಜಾನ್‌, ಅಂತಿಮ್‌-ದಿ ಫೈನಲ್‌ ಟ್ರುತ್‌ ಸೇರಿ ಹಲವು ಸಾಲು ಸಾಲು ಸಿನಿಮಾಗಳು ಫ್ಲಾಪ್‌ ಆಗಿವೆ. ಈಗ ಅವರು ಟೈಗರ್‌ 3 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ಕೋಲ್ಕೊತಾದಲ್ಲಿ ಸಿನಿಮಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈಗ ಬಹುನಿರೀಕ್ಷಿತ ಸಿನಿಮಾ ಶೂಟಿಂಗ್‌ ವೇಳೆಯೇ ಅವರು ಗಾಯಗೊಂಡಿದ್ದಾರೆ.

ಇನ್ನು ಸಲ್ಮಾನ್‌ ಖಾನ್‌ ಅವರು ಗಾಯಗೊಂಡಿರುವ ಫೋಟೊ ಶೇರ್‌ ಮಾಡುತ್ತಲೇ ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ. “ಲವ್‌ ಯು ಭಾಯ್‌, ಹುಷಾರಾಗಿರಿ. ಹೆಚ್ಚಿನ ಕಾಳಜಿ ತೆಗೆದುಕೊಳ್ಳಿ” ಎಂದು ಅಭಿಮಾನಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. “ಬೇಗ ಹುಷಾರಾಗಿ ಬನ್ನಿ, ನಿಮ್ಮ ಹೊಸ ಸಿನಿಮಾಗಾಗಿ ಕಾಯುತ್ತಿದ್ದೇವೆ” ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಹೀಗೆ, ಹಲವು ಅಭಿಮಾನಿಗಳು ಕಾಳಜಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Salman Khan: ಸಲ್ಮಾನ್‌ ಖಾನ್‌ ಸಹೋದರಿ ಅರ್ಪಿತಾ ಖಾನ್‌ ಡೈಮಂಡ್‌ ಕಿವಿಯೋಲೆ ಕಳವು, ಇವುಗಳ ಬೆಲೆ ಎಷ್ಟು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Bengaluru Karaga: ಐತಿಹಾಸಿಕ ಬೆಂಗಳೂರು ಕರಗಕ್ಕೆ ಅದ್ಧೂರಿ ಚಾಲನೆ; ಉತ್ಸವ ವೀಕ್ಷಿಸಲು ಹರಿದು ಬಂದ ಜನಸಾಗರ

Bengaluru Karaga: ಬೆಂಗಳೂರಿನ ನಗರ್ತಪೇಟೆಯಲ್ಲಿ ಧರ್ಮರಾಯಸ್ವಾಮಿ ರಥೋತ್ಸವ ಬಳಿಕ ರಾತ್ರಿ 2ಗಂಟೆಗೆ ಕರಗ ಶಕ್ತ್ಸೋತ್ಸವಕ್ಕೆ ಚಾಲನೆ ನೀಡಲಾಯಿತು.

VISTARANEWS.COM


on

Bengaluru karaga
Koo

ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವಕ್ಕೆ ಮಂಗಳವಾರ ರಾತ್ರಿ ಅದ್ಧೂರಿಯಾಗಿ ಚಾಲನೆ ದೊರಕಿತು. ನಗರ್ತಪೇಟೆಯಲ್ಲಿ ಧರ್ಮರಾಯಸ್ವಾಮಿ ರಥೋತ್ಸವ ಬಳಿಕ ರಾತ್ರಿ 2ಗಂಟೆಗೆ ಕರಗ ಶಕ್ತ್ಸೋತ್ಸವಕ್ಕೆ (Bengaluru Karaga) ಚಾಲನೆ ನೀಡಲಾಯಿತು. ವೈಭವದ ಕರಗ ಕಣ್ತುಂಬಿಕೊಳ್ಳಲು ವಿವಿಧೆಡೆಯಿಂದ ಸಾವಿರಾರು ಜನರು ಆಗಮಿಸಿದ್ದರು.

ಬೆಳಗ್ಗೆಯಿಂದಲ್ಲೇ ತಾಯಿಗೆ ಬಳೆ ಶಾಸ್ತ್ರ, ತಾಳಿ ಶಾಸ್ತ್ರ, ಹೂ ಶಾಸ್ತ್ರ ವಿಶೇಷ ಪೂಜೆ ಸಲ್ಲಿಸಲಾಗಿದೆ. ಮಂಗಳವಾರ ರಾತ್ರಿ 10.30ಕ್ಕೆ ಕಲ್ಯಾಣಿಗೆ ಹೋಗಿ ಪೂಜೆ ಸಲ್ಲಿಸಲಾಯಿತು. ಅಲ್ಲಿಂದ ವಾಪಸ್ ಬಂದು ಧರ್ಮರಾಯ ದೇವಸ್ಥಾನದಲ್ಲಿ ಪೂಜೆ ಮಾಡಲಾಯಿತು. ರಥೋತ್ಸವದ ಬಳಿಕ ಭಕ್ತರ ಗೋವಿಂದ… ಗೋವಿಂದ… ಎಂಬ ಘೋಷಣೆಗಳ ನಡುವೆ ಅರ್ಚಕ ಜ್ಞಾನೇಂದ್ರ ಅವರು ಕರಗ ಹೊತ್ತು ಸಾಗಿದರು.

ಮುಖ್ಯ ರಥ ಧರ್ಮರಾಯಸ್ವಾಮಿ ರಥದಲ್ಲಿ ಅರ್ಜುನ‌ ಮತ್ತು ದ್ರೌಪದಿ ದೇವಿ ವಿರಾಜಮಾನರಾಗಿದ್ದರು. ಚಿಕ್ಕ ರಥದಲ್ಲಿ ಗ್ರಾಮದೇವಿ ಮುತ್ಯಾಲಮ್ಮ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಪಾಂಡವರ ಮೂರ್ತಿಗಳು ಸೇರಿ ಒಟ್ಟು ಒಂಬತ್ತು ಮೂರ್ತಿಗಳಿಗೆ ವೀರಕುಮಾರರಿಂದ ಪೂಜೆ ಸಲ್ಲಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥಗಳು ಮುಂದೆ ಸಾಗುತ್ತಿದ್ದಂತೆ ದೇಗುಲದಿಂದ ದ್ರೌಪದಿ ದೇವಿ ಕರಗ ಹೊರಬಂದಿತು.

ಕರಗ ಸಾಗುವ ರಾಜಬೀದಿಗಳೆಲ್ಲಾ ಬಣ್ಣ ಬಣ್ಣದ ಲೈಟಿಂಗ್‌ಗಳಿಂದ ಕಂಗೊಳಿಸುತ್ತಿರುವಂತದ್ದವು. ಈ ಬಾರಿಯೂ ಮಸ್ತಾನ್ ಸಾಬ್ ದರ್ಗಾಗೆ ಕರಗ ಭೇಟಿ ನೀಡಲಿದೆ. ನಸುಕಿನ ಜಾವ 4 ಗಂಟೆ ಹೊತ್ತಿಗೆ ದರ್ಗಾಗೆ ಭೇಟಿ ನೀಡಲಿದೆ.

ಕರಗ ಮೆರವಣಿಗೆ ಮಾರ್ಗ

ನಗರ್ತಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಕರಗ ಮೆರವಣಿಗೆ ಆರಂಭವಾಗಿ ಕಬ್ಬನ್​ಪೇಟೆ, ಗಾಣಿಗರಪೇಟೆ, ಅವೆನ್ಯೂ ರಸ್ತೆ ಮೂಲಕ ಸಾಗಲಿದೆ. ನಂತರ ಕೆ.ಆರ್. ರಸ್ತೆಯಲ್ಲಿರುವ ಕೋಟೆ ಆಂಜನೇಯ ದೇಗುಲಕ್ಕೆ ತೆರಳಲಿದೆ.

ಬಳಿಕ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ರಸ್ತೆಯ ರಾಣಾಸಿಂಗ್​ಪೇಟೆ, ಅಕ್ಕಿಪೇಟೆ, ಅರಳಿಪೇಟೆ, ಒಟಿಸಿ ರಸ್ತೆ, ಮಸ್ತಾನ್ ಸಾಹೇಬ್ ದರ್ಗಾ, ಬಳೆಪೇಟೆ ಮುಖ್ಯ ರಸ್ತೆ, ಕೆ.ಜಿ.ರಸ್ತೆ, ಎಸ್​ಪಿ ರಸ್ತೆ ಮೂಲಕ ಸಾಗಿ ಅಣ್ಣಮ್ಮ ದೇಗುಲಕ್ಕೆ ಬಂದು ಅದೇ ಮಾರ್ಗದಲ್ಲಿ ವಾಪಸಾಗಲಿದೆ.

ಇದನ್ನೂ ಓದಿ | Bengaluru Karaga 2024: ಬೆಂಗಳೂರು ಕರಗ ಶಕ್ತ್ಸೋತ್ಸವಕ್ಕೆ ಕೌಂಟ್‌ ಡೌನ್‌; 8 ಲಕ್ಷ ಜನ ಭಾಗಿ!

ಕಿಲ್ಲಾರಿ ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಅವೆನ್ಯೂ ರಸ್ತೆ ಕ್ರಾಸ್, ಆರ್.ಟಿ.ರಸ್ತೆ, ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರಪೇಟೆ, ಸುಣಕಲ್ ಪೇಟೆ ಮೂಲಕ ಬುಧವಾರ ಬೆಳಗ್ಗೆ 7 ಗಂಟೆಗೆ ಧರ್ಮರಾಯಸ್ವಾಮಿ ದೇವಾಲಯ ಸೇರಲಿದೆ. ಬೆಳಗ್ಗೆ 8 ಗಂಟೆಗೆ ತಾಯಿಗೆ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಕರಗಕ್ಕೆ ತೆರೆ ಬೀಳಲಿದೆ.

Continue Reading

ದೇಶ

ವಿಸ್ತಾರ ಸಂಪಾದಕೀಯ: ರಕ್ಷಣಾ ರಫ್ತು ಕ್ಷೇತ್ರದಲ್ಲಿ ಬೆಳವಣಿಗೆ ನಮ್ಮ ಹೆಗ್ಗಳಿಕೆ

ರಫ್ತು ಮಾತ್ರವಲ್ಲ, ರಕ್ಷಣಾ ಸಾಮಗ್ರಿಗಳಲ್ಲಿ ಆತ್ಮನಿರ್ಭರತೆ ಕೂಡ ನಮ್ಮಿಂದ ಸಾಧ್ಯವಾಗುತ್ತಿದೆ. ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ತುಮಕೂರಿನ ಗುಬ್ಬಿಯಲ್ಲಿ ಪ್ರಧಾನಿ ಉದ್ಘಾಟಿಸಿರುವ ಹಿಂದೂಸ್ತಾನ್‌ ಏರೋನಾಟಿಕ್ಸ್ ಲಿಮಿಟೆಡ್‌ನ (ಎಚ್ಎಎಲ್) ನೂತನ ಹೆಲಿಕಾಪ್ಟರ್ ಉತ್ಪಾದನಾ ಘಟಕ. ಇದು ಏಷ್ಯಾದ ಅತಿದೊಡ್ಡ ಹೆಲಿಕಾಪ್ಟರ್‌ ಉತ್ಪಾದನಾ ಘಟಕ ಎಂಬ ಹೆಗ್ಗಳಿಕೆಯನ್ನು ಹೊಂದಿದೆ.

VISTARANEWS.COM


on

vistara Editorial ವಿಸ್ತಾರ ಸಂಪಾದಕೀಯ
Koo

ಫಿಲಿಪ್ಪೀನ್ಸ್‌ಗೆ (Philippines) ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳ (BrahMos missiles) ಭೂ ಆವೃತ್ತಿಯ ನಾಲ್ಕನೇ ʼಬ್ಯಾಟರಿ’ಯನ್ನು ಭಾರತ ಕಳುಹಿಸುತ್ತಿದೆ. ಬ್ರಹ್ಮೋಸ್ ಕ್ಷಿಪಣಿಗಳ ಮೂರು ‘ಬ್ಯಾಟರಿ’ಗಳನ್ನು ಈಗಾಗಲೇ ದ್ವೀಪ ರಾಷ್ಟ್ರಕ್ಕೆ ಹಸ್ತಾಂತರಿಸಲಾಗಿದೆ. ಪ್ರತಿ ಬ್ಯಾಟರಿಯೂ ನಾಲ್ಕು ಲಾಂಚರ್‌ಗಳನ್ನು ಒಳಗೊಂಡಿರುತ್ತದೆ. ಪ್ರತಿ ಲಾಂಚರ್‌ನಲ್ಲೂ 290 ಕಿಮೀ ವ್ಯಾಪ್ತಿಯ ಮೂರು ಕ್ಷಿಪಣಿಗಳಿರುತ್ತವೆ. ಈ ಕ್ಷಿಪಣಿ ಸೂಪರ್‌ಸಾನಿಕ್ ವೇಗವನ್ನು ಹೊಂದಿರುತ್ತದೆ. ಇದನ್ನು ಭೂಮಿ ಅಥವಾ ಹಡಗು ಆಧಾರಿತ ಬ್ಯಾಲಿಸ್ಟಿಕ್ ಮಿಸೈಲ್ ಡಿಫೆನ್ಸ್ (BMDs) ವ್ಯವಸ್ಥೆಗಳಿಂದಲೂ ಎದುರಿಸುವುದು ತುಂಬಾ ಕಷ್ಟ. 2022ರಲ್ಲಿ ಭಾರತ- ಫಿಲಿಪ್ಪೀನ್ಸ್‌ ಸಹಿ ಮಾಡಿದ USD 375 ಮಿಲಿಯನ್ ಒಪ್ಪಂದದ ಭಾಗವಿದು. ಸದ್ಯ ಭಾರತದ ಬ್ರಹ್ಮೋಸ್ ದಾಖಲೆ ಮಾರಾಟ ಕಂಡಿದೆ. ಮುಂದಿನ ದಿನಗಳಲ್ಲಿ ಭಾರತವು ಈ ಸೂಪರ್‌ಸಾನಿಕ್ ಕ್ಷಿಪಣಿಗಳ ಹೆಚ್ಚಿನ ಆರ್ಡರ್‌ಗಳನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ.

ಬ್ರಹ್ಮೋಸ್‌ನ ಫಿಲಿಪ್ಪೀನ್ಸ್ ಒಪ್ಪಂದದ ಮೂಲಕ, 2023-2024ರಲ್ಲಿ ಭಾರತದ ರಕ್ಷಣಾ ರಫ್ತು ₹21083 ಕೋಟಿಗಳನ್ನು ಮುಟ್ಟಿದೆ. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇ.32.5ರಷ್ಟು ರಫ್ತು ಬೃಹತ್ ಬೆಳವಣಿಗೆಯಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಕಾರ, 2026ರ ವೇಳೆಗೆ ರಕ್ಷಣಾ ರಫ್ತನ್ನು 40 ಸಾವಿರ ಕೋಟಿ ರೂ. ದಾಟಿಸುವ ಗುರಿ ಹೊಂದಲಾಗಿದೆ. ಅನೇಕ ಕಾರಣಗಳಿಂದಾಗಿ ಇದೊಂದು ಮೈಲುಗಲ್ಲು. ಬಾಹ್ಯಾಕಾಶ ಸಂಶೋಧನೆ ಹಾಗೂ ರಕ್ಷಣಾ ರಫ್ತುಗಳು ಭಾರತದ ಜಿಡಿಪಿ ಬೆಳವಣಿಗೆ, ವಿದೇಶಾಂಗ ನೀತಿಯ ವರ್ಧನೆ ಇತ್ಯಾದಿಗಳಲ್ಲಿ ಗರಿಷ್ಠತೆ ಸಾಧಿಸಲು ಕಾರಣವಾಗುತ್ತಿರುವ ಬೆಳವಣಿಗೆಗಳು. ಈ ಹಿಂದೆ ಪ್ರತಿಯೊಂದು ಶಸ್ತ್ರಕ್ಕೂ ಭಾರತ ವಿದೇಶಗಳನ್ನು ಅವಲಂಬಿಸಿತ್ತು. ಆದರೆ ಈಗ ರಕ್ಷಣಾ ಶಸ್ತ್ರಾಸ್ತ್ರಗಳ ಉತ್ಪಾದನೆಯಲ್ಲಿ ದಿನೇದಿನೆ ಸ್ವಾವಲಂಬನೆ ಸಾಧಿಸುತ್ತಿದೆ. ಶಸ್ತ್ರಾಸ್ತ್ರಗಳಿಂದ ಹಿಡಿದು ಯುದ್ಧ ನೌಕೆಗಳನ್ನೂ ಭಾರತದಲ್ಲೇ ತಯಾರಿಸಲಾಗುತ್ತಿದೆ. ಪಾಕಿಸ್ತಾನ ಹೊರತುಪಡಿಸಿ ಇತರ ಹಲವು ನೆರೆದೇಶಗಳಿಗೆ ಭಾರತ ಯಥೇಚ್ಛವಾಗಿ ಶಸ್ತ್ರಾಸ್ತ್ರ ರಫ್ತು ಮಾಡುತ್ತಿದೆ. ಮಿಲಿಟರಿ ಸಾಧನಗಳಿಗಾಗಿ ಭಾರತ ಪ್ರತಿವರ್ಷ ಸಾವಿರಾರು ಕೋಟಿ ರೂ. ಖರ್ಚು ಮಾಡುತ್ತಿದೆ. ಈ ನಿಟ್ಟಿನಲ್ಲಿ ಈಗಿನ ಶಸ್ತ್ರಾಸ್ತ್ರ ರಫ್ತು ದಾಖಲೆ ದೇಶದ ಪ್ರಗತಿ ಮತ್ತು ಸ್ವಾವಲಂಬನೆಯ ದೃಷ್ಟಿಯಿಂದ ಮಹತ್ವದ್ದಾಗಿದೆ.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ಚೀನಾವನ್ನೂ ಹಿಂದಿಕ್ಕಿದ ಭಾರತದ ಆರ್ಥಿಕತೆಯ ಬೆಳವಣಿಗೆ ಐತಿಹಾಸಿಕ

ಈಗಾಗಲೇ ಭಾರತ ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌ ಕ್ಷಿಪಣಿಗಳನ್ನು, ಮಾರಿಷಸ್‌ಗೆ ಹಗುರ ಯುದ್ಧ ವಿಮಾನಗಳನ್ನು, ವಿಯೆಟ್ನಾಂಗೆ ಅತಿವೇಗದ ರಕ್ಷಣಾ ಬೋಟ್‌ಗಳನ್ನು, ಆರ್ಮೇನಿಯಾಕ್ಕೆ ಆಯುಧಶೋಧಕ ರೇಡಾರ್‌ಗಳನ್ನು, ಇಟಲಿ, ಮಾಲ್ದೀವ್ಸ್‌, ಶ್ರೀಲಂಕಾ, ಮಲೇಷಿಯಾ ಮುಂತಾದ ಹಲವು ದೇಶಗಳಿಗೆ ಪಿನಾಕ ರಾಕೆಟ್‌ ಲಾಂಚರ್‌ಗಳನ್ನು ಹಾಗೂ ಇತರ ಹಲವು ತಂತ್ರಜ್ಞಾನಗಳನ್ನು ರಫ್ತು ಮಾಡುತ್ತಿದೆ. ರಕ್ಷಣಾ ಸಾಮಗ್ರಿಗಳ ರಫ್ತು ಜತಜತೆಗೇ ನೋಡಬೇಕಾದ ಇನ್ನೊಂದು ಸಂಗತಿ ಎಂದರೆ, ಇಸ್ರೋ ಸಂಸ್ಥೆಯು ಉಡಾಯಿಸುತ್ತಿರುವ ಉಪಗ್ರಹಗಳು. ಸ್ಥಳೀಯ ತಂತ್ರಜ್ಞಾನದ ಉಪಗ್ರಹ ವಾಹಕಗಳನ್ನು (ಎಸ್‌ಎಲ್‌ವಿ) ನಾವು ತಯಾರಿಸಿದ್ದು, ಅವುಗಳ ಮೂಲಕ ಅಕ್ಕಪಕ್ಕದ ದೇಶಗಳ ಉಪಗ್ರಹಗಳನ್ನೂ ಕಕ್ಷೆಗೆ ಉಡಾಯಿಸುವ ಉದ್ಯಮವನ್ನು ಯಶಸ್ವಿಯಾಗಿ ನಡೆಸುತ್ತಿದ್ದೇವೆ. ನಮ್ಮ ದೇಶದ ಇಂಥ ಸಾಧನೆಗೆ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ), ಎಚ್‌ಎಎಲ್‌, ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಮಹತ್ವದ ಕೊಡುಗೆ ನೀಡುತ್ತಿವೆ. ಡಿಆರ್‌ಡಿಒ ಅಭಿವೃದ್ಧಿಪಡಿಸುತ್ತಿರುವ ಡ್ರೋನ್‌ಗಳು ನಮ್ಮ ಗಡಿಯನ್ನು ಕಾಯುತ್ತಿರುವ ಯೋಧರಿಗೆ ಅತ್ಯುತ್ತಮ ಜತೆಗಾರರಾಗಿವೆ.

ರಫ್ತು ಮಾತ್ರವಲ್ಲ, ರಕ್ಷಣಾ ಸಾಮಗ್ರಿಗಳಲ್ಲಿ ಆತ್ಮನಿರ್ಭರತೆ ಕೂಡ ನಮ್ಮಿಂದ ಸಾಧ್ಯವಾಗುತ್ತಿದೆ. ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ತುಮಕೂರಿನ ಗುಬ್ಬಿಯಲ್ಲಿ ಪ್ರಧಾನಿ ಉದ್ಘಾಟಿಸಿರುವ ಹಿಂದೂಸ್ತಾನ್‌ ಏರೋನಾಟಿಕ್ಸ್ ಲಿಮಿಟೆಡ್‌ನ (ಎಚ್ಎಎಲ್) ನೂತನ ಹೆಲಿಕಾಪ್ಟರ್ ಉತ್ಪಾದನಾ ಘಟಕ. ಇದು ಏಷ್ಯಾದ ಅತಿದೊಡ್ಡ ಹೆಲಿಕಾಪ್ಟರ್‌ ಉತ್ಪಾದನಾ ಘಟಕ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದು, 3 ಟನ್‌ನಿಂದ 12 ಟನ್ ತೂಕದ ತನಕ ವಿವಿಧ ಶ್ರೇಣಿಗಳ ಹೆಲಿಕಾಪ್ಟರ್‌ಗಳನ್ನು ನಿರ್ಮಿಸುತ್ತದೆ. ಇಲ್ಲಿ ಉತ್ಪಾದನೆಗೊಳ್ಳಲಿರುವ ಹಗುರ ಹೆಲಿಕಾಪ್ಟರ್‌ಗಳು (ಎಲ್‌ಯುಎಚ್) ದೇಶದ ಮಿಲಿಟರಿ ಮತ್ತು ನಾಗರಿಕ ಅಗತ್ಯಗಳನ್ನು ಪೂರೈಸಲಿವೆ. ಇದರಿಂದ ಭಾರತದ ವಾಯುಪಡೆ ಹಾಗೂ ವಾಯುಸಾರಿಗೆ ಇನ್ನಷ್ಟು ಸಮೃದ್ಧವಾಗಲಿವೆ. ಇದು ಒಂದು ಉದಾಹರಣೆ ಮಾತ್ರ. ಇನ್ನೊಂದು ಉದಾಹರಣೆ ಎಂದರೆ ಇತ್ತೀಚೆಗೆ ಪ್ರಯೋಗಾರ್ಥ ಉಡಾಯಿಸಲಾದ ಅಣ್ವಸ್ತ್ರ ಸಿಡಿತಲೆಯನ್ನು 5000 ಕಿಲೋಮೀಟರ್‌ ದೂರ ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿರುವ ಅಗ್ನಿ-5 ಖಂಡಾಂತರ ಕ್ಷಿಪಣಿಯ ಅಭಿವೃದ್ಧಿ. ಈ ಕ್ಷಿಪಣಿ ಚೀನಾದ ಉತ್ತರ ತುದಿಯಿಂದ ಹಿಡಿದು ಯುರೋಪಿನ ಬಹುತೇಕ ಭಾಗಗಳಿಗೂ ಗುರಿ ಇಟ್ಟು ದಾಳಿ ಮಾಡುವ ಸಾಮರ್ಥ್ಯ ಹೊಂದಿರುವುದು ಭಾರತದ ರಕ್ಷಣಾ ದೃಷ್ಟಿಯಿಂದ ಮಹತ್ವದ್ದು. ಹಾಗೆಯೇ ಕಳೆದ ತಿಂಗಳು ಪರೀಕ್ಷಿಸಲಾದ ಮಿಷನ್‌ ದಿವ್ಯಾಸ್ತ್ರ. ಇದು ಏಕಕಾಲಕ್ಕೆ ಹಲವು ಸಿಡಿತಲೆಗಳನ್ನು ಉಡಾಯಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ತಂತ್ರಜ್ಞಾನ ಕಾಲದಲ್ಲೂ ಐಪಿಎಲ್​ ಅಂಪೈರ್ ಗಳ ಸೋಮಾರಿತನ ಆಕ್ಷೇಪಾರ್ಹ

ಇದೆಲ್ಲದರ ಹಿನ್ನೆಲೆಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಮತ್ತು ಆತ್ಮ ನಿರ್ಭರ ಭಾರತ ಅಭಿಯಾನ ಫಲ ಕೊಡಲಾರಂಭಿಸಿದೆ ಎನ್ನಬಹುದು. ಆದರೂ ಭಾರತ ತರಿಸಿಕೊಳ್ಳುತ್ತಿರುವ ಶಸ್ತ್ರಾಸ್ತ್ರಗಳ ಪ್ರಮಾಣ ಸಾಕಷ್ಟಿದೆ. ಅತಿ ಹೆಚ್ಚು ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಭಾರತವೂ ಒಂದು. ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಹೆಚ್ಚಿದಷ್ಟು ಆಮದು ಕಡಿಮೆಯಾಗಬಹುದು. ರಫ್ತು ಹೆಚ್ಚಾದಷ್ಟು ನಮ್ಮ ಗಣ್ಯತೆ, ಜಿಡಿಪಿ, ವಿದೇಶಾಂಗ ಸಾಮರ್ಥ್ಯವೂ ಅಧಿಕವಾಗುತ್ತದೆ.

Continue Reading

ಪ್ರಮುಖ ಸುದ್ದಿ

IPL 2024 : ಸ್ಟೊಯ್ನಿಸ್​​ ಶತಕ, ಚೆನ್ನೈ ವಿರುದ್ಧ 6 ವಿಕೆಟ್​ ಗೆಲವು ಸಾಧಿಸಿದ ಲಕ್ನೊ

IPL 2024 : ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 210 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಲಕ್ನೊ ತಂಡ ಇನ್ನೂ 3 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್ ಕಳೆದುಕೊಂಡು 213 ರನ್ ಬಾರಿಸಿ ಭರ್ಜರಿ ಗೆಲುವು ದಾಖಲಿಸಿತು.

VISTARANEWS.COM


on

IPL 2024
Koo

ಚೆನ್ನೈ: ಐಪಿಎಲ್​ 2024ನೇ (IPL 2024) 39ನೇ ಪಂದ್ಯದಲ್ಲಿ ತವರು ಅಭಿಮಾನಿಗಳ ಮುಂದೆಯೇ ಚೆನ್ನೈ ತಂಡವನ್ನು ಲಕ್ನೊ ಸೂಪರ್ ಜೈಂಟ್ಸ್ ತಂಡ 6 ವಿಕೆಟ್​ಗಳಿಂದ ಸೋಲಿಸಿದೆ. ಲಕ್ನೊ ತಂಡದ ಬ್ಯಾಟರ್​​ ಮಾರ್ಕಸ್​ ಸ್ಟೊಯ್ನಿಸ್​ 63 ಎಸೆತಕ್ಕೆ ಅಜೇಯ 124 ರನ್ (ಶತಕ) ಬಾರಿಸುವ ಮೂಲಕ ಗೆಲುವಿನ ರೂವಾರಿ ಎನಿಸಿಕೊಂಡರು. ಸಂಕಷ್ಟದಲ್ಲಿದ್ದ ಸಮಯದಲ್ಲಿ ತಂಡಕ್ಕೆ ಏಕಾಂಗಿಯಾಗಿ ಹೋರಾಟ ನಡೆಸಿದ ಸ್ಟೊಯ್ನಿಸ್ ಗೆಲುವು ತಂದುಕೊಟ್ಟರು. ಈ ಮೂಲಕ ಚೆನ್ನೈ ತಂಡದ ನಾಯಕ ಋತುರಾಜ್ ಗಾಯಕ್ವಾಡ್ ಅವರ (ಅಜೇಯ 108 ರನ್​) ಶತಕದ ಹೋರಾಟ ವ್ಯರ್ಥಗೊಂಡಿತು. ಇದು ಚೆನ್ನೈ ತಂಡಕ್ಕೆ ಆಡಿರುವ ಎಂಟು ಪಂದ್ಯಗಳಲ್ಲಿ ಐದನೇ ಸೋಲಾಗಿದ್ದು ಅಂಕಪಟ್ಟಿಯಲ್ಲಿ ಒಂದು ಸ್ಥಾನ ಕಳೆದುಕೊಂಡು 5ನೇ ಸ್ಥಾನಕ್ಕೆ ಜಾರಿದೆ. ಅತ್ತ ಲಕ್ನೊ ಸೂಪರ್ ಜೈಂಟ್ಸ್​ ತಂಡ 4ನೇ ಸ್ಥಾನಕ್ಕೇರಿದೆ. ಈ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ಆಡಿರುವ 8 ಪಂದ್ಯಗಳಲ್ಲಿ 5 ನೇ ಗೆಲುವಾಗಿದೆ. ಹೀಗಾಗಿ 10 ಅಂಕಗಳನ್ನು ಪಡೆದುಕೊಂಡಿದೆ.

ಇಲ್ಲಿನ ಎಂಎ ಚಿದಂಬರಂ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೊ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 210 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಲಕ್ನೊ ತಂಡ ಇನ್ನೂ 3 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್ ಕಳೆದುಕೊಂಡು 213 ರನ್ ಬಾರಿಸಿ ಭರ್ಜರಿ ಗೆಲುವು ದಾಖಲಿಸಿತು.

ದೊಡ್ಡ ಗುರಿಯನ್ನು ಬೆನ್ನಟ್ಟಲು ಹೊರಟ ಲಕ್ನೊ ತಂಡ ಕ್ವಿಂಟನ್ ಡಿ ಕಾಕ್ ಶೂನ್ಯಕ್ಕೆ ಔಟಾಗುವ ಮೂಲಕ ಆರಂಭಿಕ ಆಘಾತ ಎದುರಿಸಿತು. ನಾಯಕ ಕೆ. ಎಲ್ ರಾಹುಲ್ ಕೂಡ 16 ರನ್​ಗೆ ಸೀಮಿತಗೊಂಡರು. ಈ ವೇಳೆ ಆಡಲು ಇಳಿದ ಡಿ ಕಾಕ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ, ನಾಲ್ಕನೇ ಕ್ರಮಾಂಕದಲ್ಲಿ ಅವಕಾಶ ಪಡೆದ ದೇವದತ್​ ಪಡಿಕ್ಕಲ್​ ಪೇಚಾರಿ 19 ಎಸೆತಕ್ಕೆ 13 ರನ್ ಮಾಡಿ ಔಟಾದರು. ಇದು ಲಕ್ನೊ ತಂಡಕ್ಕೆ ಹಿನ್ನಡೆ ಉಂಟು ಮಾಡಿತು.

ನಿಕೋಲಸ್​- ಸ್ಟೊಯ್ನಿಸ್​ ಜತೆಯಾಟ

88 ರನ್​ಗೆ 3 ವಿಕೆಟ್​ ಕಳೆದುಕೊಂಡ ಲಕ್ನೊ ತಂಡ ಅಪಾಯಕ್ಕೆ ಸಿಲುಕಿತು. ಆದರೆ ಈ ವೇಳೆ ಆಡಲು ಬಂದ ನಿಕೋಲಸ್ ಪೂರನ್ ಹಾಗೂ ಸ್ಪೊಯ್ನಿಸ್​ 70 ರನ್​ಗಳ ಜತೆಯಾಟ ಆಡಿದರು. ಆದರೆ, 15 ಎಸೆತಕ್ಕೆ 34 ರನ್ ಬಾರಿಸಿದ ಪೂರನ್​ ಔಟಾದ ಬಳಿಕ ಮತ್ತೆ ತೊಂದರೆ ಎದುರಾಯಿತು. ಆದರೆ ಯಾವುದಕ್ಕೂ ಕ್ಯಾರೆ ಎನ್ನದ ಸ್ಟೊಯ್ನಿಸ್​ 56 ಎಸೆತಕ್ಕೆ ಶತಕ ಪೂರೈಸಿದರು. ಕೊನೇ ತನಕ ನಿಂತು ಆಡಿ ಗೆಲ್ಲಿಸಿದರು. ಕೊನೆಯಲ್ಲಿ ದೀಪಕ್ ಹೂಡಾ 6 ಎಸೆತಕ್ಕೆ 17 ರನ್ ಬಾರಿಸಿದರು.

ಇದನ್ನೂ ಓದಿ: Virat kohli : ಅಂಪೈರ್​ಗಳ ಕೈ ಕುಲುಕಲೂ ನಿರಾಕರಿಸಿದ್ದ ವಿರಾಟ್​ ಕೊಹ್ಲಿ; ವಿಡಿಯೊ ಇದೆ

ಋತುರಾಜ್ ಶತಕದ ಆಟ

ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡವೂ ಉತ್ತಮವಾಗಿ ಆಡಲಿಲ್ಲ. ಅಜಿಂಕ್ಯ ರಹಾನೆ1 ರನ್​ ಗೆ ನಿರ್ಗಮಿಸಿದರು. ಆದರೆ ಮತ್ತೊಂದು ತುದಿಯಲ್ಲಿ ಋತುರಾಜ್ ಗಾಯಕ್ವಾಡ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಬಳಿಕ ಡ್ಯಾರಿಲ್ ಮಿಚೆಲ್​ 11 ಹಾಗೂ ಜಡೇಜಾ 16 ರನ್​ ಬಾರಿಸಿ ಔಟಾದರು. ಆದರೆ, 27 ಎಸೆತಕ್ಕೆ 66 ರನ್ ಬಾರಿಸಿದ ಶಿವಂ ದುಬೆ ದೊಡ್ಡ ಮೊತ್ತ ಪೇರಿಸಲು ನೆರವಾದರು.

Continue Reading

ಕರ್ನಾಟಕ

Amit Shah: ಬೆಂಗಳೂರಲ್ಲಿ ಅಮಿತ್‌ ಶಾ ಹವಾ; ತೇಜಸ್ವಿ ಸೂರ್ಯ ಪರ ಭರ್ಜರಿ ರೋಡ್‌ ಶೋ

Amit Shah: ಬೆಂಗಳೂರಿನಲ್ಲಿ ಬೊಮ್ಮನಹಳ್ಳಿಯ ಸ್ವಾಮಿ ವಿವೇಕಾನಂದ ಸರ್ಕಲ್‌ನಿಂದ ಸೇಂಟ್ ಫ್ರಾನ್ಸಿಸ್ ಸ್ಕೂಲ್‌ವರೆಗೆ ಅಮಿತ್‌ ಶಾ ಅವರ ರೋಡ್ ಶೋ ನಡೆಯಿತು. ಸುಮಾರು ‌3 ಕಿಲೋಮೀಟರ್‌ ದೂರ ರೋಡ್‌ ಶೋ ನಡೆಯಿತು.

VISTARANEWS.COM


on

Amit Shah
Koo

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ಬಿಜೆಪಿ ಚುನಾವಣಾ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಮಂಗಳವಾರ ರಾತ್ರಿ ಭರ್ಜರಿ ರೋಡ್‌ ಶೋ ಮೂಲಕ ಪ್ರಚಾರ ನಡೆಸಿದರು.

ಬೊಮ್ಮನಹಳ್ಳಿಯ ಸ್ವಾಮಿ ವಿವೇಕಾನಂದ ಸರ್ಕಲ್‌ನಲ್ಲಿ ವಿವೇಕಾನಂದ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರೋಡ್‌ ಶೋಗೆ ಚಾಲನೆ ನೀಡಲಾಯಿತು. ವಿವೇಕಾನಂದ ಸರ್ಕಲ್‌ ಬಳಿಯಿಂದ ಸೇಂಟ್ ಫ್ರಾನ್ಸಿಸ್ ಸ್ಕೂಲ್‌ವರೆಗೆ ರೋಡ್ ಶೋ ನಡೆಯಿತು. ಸುಮಾರು ‌3 ಕಿಲೋಮೀಟರ್‌ ದೂರ ನಡೆದ ರೋಡ್‌ ಶೋ ವೀಕ್ಷಿಸಲು ಸಾವಿರಾರು ಜನರು ಆಗಮಿಸಿದ್ದರು. ರೋಡ್‌ ಶೋ ಹಿನ್ನೆಲೆ ಪ್ರಚಾರ ವಾಹನ ತೆರಳುವ ಮಾರ್ಗದಲ್ಲಿ ಬಿಗಿ ಪೊಲೀಸ್‌ ಭದ್ರತೆ ಏರ್ಪಡಿಸಲಾಗಿತ್ತು.

ಅಮಿತ್‌ ಶಾ ಅವರಿಗೆ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ವಿಪಕ್ಷ ನಾಯಕ ಅಶೋಕ್, ಶಾಸಕರಾದ ಸತೀಶ್ ರೆಡ್ಡಿ, ಸಿ.ಕೆ ರಾಮಮೂರ್ತಿ ಸಾಥ್‌ ನೀಡಿದರು.

ಇದನ್ನೂ ಓದಿ | HD Kumaraswamy: ಜನರ ಕಣ್ಣಿಗೆ ಮಣ್ಣೆರಚಬೇಡಿ; ಮಂಡ್ಯಕ್ಕೆ ಕಾವೇರಿ ಗ್ಯಾರಂಟಿ ಕೊಡಿ: ಕಾಂಗ್ರೆಸ್‌ಗೆ ಎಚ್‌ಡಿಕೆ ಸವಾಲು

ರೋಡ್‌ ಶೋ ಉದ್ದಕ್ಕೂ ಪ್ರಧಾನಿ ಮೋದಿ, ಅಮಿತ್‌ ಶಾ ಪರ ಕಾರ್ಯಕರ್ತರಿಂದ ಘೋಷಣೆಗಳು ಮೊಳಗಿದವು. ಎಲ್ಲೆಲ್ಲೂ ಕೇಸರಿಯ ಕಂಪು, ರಸ್ತೆಯುದ್ದಕ್ಕೂ ಬಿಜೆಪಿ ಪಕ್ಷದ ಬಾವುಟಗಳು ಕಂಡುಬಂದವು.

Continue Reading
Advertisement
Bengaluru karaga
ಕರ್ನಾಟಕ2 hours ago

Bengaluru Karaga: ಐತಿಹಾಸಿಕ ಬೆಂಗಳೂರು ಕರಗಕ್ಕೆ ಅದ್ಧೂರಿ ಚಾಲನೆ; ಉತ್ಸವ ವೀಕ್ಷಿಸಲು ಹರಿದು ಬಂದ ಜನಸಾಗರ

vistara Editorial ವಿಸ್ತಾರ ಸಂಪಾದಕೀಯ
ದೇಶ4 hours ago

ವಿಸ್ತಾರ ಸಂಪಾದಕೀಯ: ರಕ್ಷಣಾ ರಫ್ತು ಕ್ಷೇತ್ರದಲ್ಲಿ ಬೆಳವಣಿಗೆ ನಮ್ಮ ಹೆಗ್ಗಳಿಕೆ

IPL 2024
ಪ್ರಮುಖ ಸುದ್ದಿ4 hours ago

IPL 2024 : ಸ್ಟೊಯ್ನಿಸ್​​ ಶತಕ, ಚೆನ್ನೈ ವಿರುದ್ಧ 6 ವಿಕೆಟ್​ ಗೆಲವು ಸಾಧಿಸಿದ ಲಕ್ನೊ

Voters' Pledge
ಬೆಂಗಳೂರು5 hours ago

Voters Pledge: ಸಹಕಾರ ಸಂಘಗಳ ಕಾರ್ಯದರ್ಶಿಗಳು, ಸಿಬ್ಬಂದಿಗೆ ಮತದಾನ ಪ್ರತಿಜ್ಞಾವಿಧಿ ಬೋಧನೆ

Lok Sabha Election 2024
Lok Sabha Election 20245 hours ago

Lok Sabha Election 2024: ರಾಹುಲ್‌ ಗಾಂಧಿಯ ಡಿಎನ್‌ಎ ಪರೀಕ್ಷಿಸಬೇಕು; ವಿವಾದ ಹುಟ್ಟುಹಾಕಿದ ಶಾಸಕ ಅನ್ವರ್ ಹೇಳಿಕೆ

DCM DK Shivakumar Election campaign for Bangalore Rural Lok Sabha Constituency Congress candidate DK Suresh In Ramanagara
ರಾಮನಗರ5 hours ago

Lok Sabha Election 2024: ಕೇಂದ್ರ ಸರ್ಕಾರದಿಂದ ರಾಜ್ಯದ ಬಗ್ಗೆ ತಾರತಮ್ಯ ಧೋರಣೆ: ಡಿ.ಕೆ. ಸುರೇಶ್

Priyanka Gandhi
ಕರ್ನಾಟಕ5 hours ago

Priyanka Gandhi: ನಿರುದ್ಯೋಗಿಗಳಿಗೆ ಉದ್ಯೋಗ ನೀಡಿ ಮಂಗಳಸೂತ್ರ ಉಳಿಸೋದು ಗೊತ್ತಿಲ್ಲವೇ?; ಮೋದಿ ವಿರುದ್ಧ ಪ್ರಿಯಾಂಕ ಗಾಂಧಿ ವಾಗ್ದಾಳಿ

Lok Sabha Election 2024
Lok Sabha Election 20246 hours ago

Lok Sabha Election 2024: ಕಾಂಗ್ರೆಸ್‌ ಅಧಿಕಾರಕ್ಕೆ ಬಂದೆ ದೇಶದಲ್ಲಿ ಶರಿಯಾ ಕಾನೂನು ಜಾರಿ; ಯೋಗಿ ಆದಿತ್ಯನಾಥ್ ವಾಗ್ದಾಳಿ

Amit Shah
ಕರ್ನಾಟಕ6 hours ago

Amit Shah: ಬೆಂಗಳೂರಲ್ಲಿ ಅಮಿತ್‌ ಶಾ ಹವಾ; ತೇಜಸ್ವಿ ಸೂರ್ಯ ಪರ ಭರ್ಜರಿ ರೋಡ್‌ ಶೋ

Public Sector Banks
ಪ್ರಮುಖ ಸುದ್ದಿ7 hours ago

Public Sector Banks : ಸಾರ್ವಜನಿಕ ಬ್ಯಾಂಕ್​ಗಳು ಸಾಲ ಕಟ್ಟದವರಿಗೆ ಲುಕ್ ಔಟ್ ನೋಟಿಸ್​ ನೀಡುವಂತಿಲ್ಲ, ಕೋರ್ಟ್​​ ಆದೇಶ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ23 hours ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು1 day ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ1 day ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು2 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು2 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ2 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ3 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ3 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20244 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20244 days ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

ಟ್ರೆಂಡಿಂಗ್‌