Site icon Vistara News

PM Modi France Visit: ಮ್ಯಾಕ್ರನ್‌ಗೆ ಶ್ರೀಗಂಧ ಸಿತಾರ, ಪತ್ನಿಗೆ ರೇಷ್ಮೆ ಸೀರೆ ಗಿಫ್ಟ್‌ ನೀಡಿದ ಮೋದಿ; ಪಡೆದಿದ್ದೇನು?

Modi Gifts Macron A Sandalwood Sitar

Sandalwood Sitar to Silk: Here’s what PM Modi gifted to French President Macron And his wife

ಪ್ಯಾರಿಸ್‌: ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ದೇಶಕ್ಕೆ ಹೋಗಲಿ, ಆ ರಾಷ್ಟ್ರದ ಅಧ್ಯಕ್ಷ, ಪ್ರಧಾನಿಗೆ ಭಾರತದ ಸಂಸ್ಕೃತಿ, ಸಂಪ್ರದಾಯ ಸಾರುವ ಉಡುಗೊರೆ ನೀಡುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ಮೋದಿ ಅವರು ಫ್ರಾನ್ಸ್‌ಗೆ ಭೇಟಿ ನೀಡಿದಾಗ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್‌ ಹಾಗೂ ಅವರ ಪತ್ನಿಗೆ ವಿಶೇಷ ಉಡುಗೊರೆಗಳನ್ನು (PM Modi France Visit) ನೀಡಿದ್ದಾರೆ. ಅದರಲ್ಲೂ, ಶ್ರೀಗಂಧದ ಸಿತಾರ, ತೆಲಂಗಾಣದ ರೇಷ್ಮೆ ಸೀರೆಗಳು ಗಮನ ಸೆಳೆದಿವೆ.

ಭಾರತದ ಜವಳಿ, ಕಲೆ, ಸಂಗೀತವನ್ನು ಸಾರುವ ಉಡುಗೊರೆಗಳನ್ನು ಮೋದಿ ನೀಡಿದ್ದಾರೆ. ಶುದ್ಧವಾದ ಶ್ರೀಗಂಧದಿಂದ ತಯಾರಿಸಿದ ಸಂಗೀತ ವಾದನ ಸಿತಾರ, ವಿದ್ಯೆಯ ಸಾಕಾರಮೂರ್ತಿಯಾದ ಸರಸ್ವತಿ ಪ್ರತಿಮೆ, ಕಾಶ್ಮೀರದ ಕಾರ್ಪೆಟ್‌, ಮಾರ್ಬಲ್‌ ಹಾಗೂ ಗಣೇಶನ ವಿಗ್ರಹಗಳನ್ನು ಮೋದಿ ಅವರು ಇಮ್ಯಾನುಯೆಲ್‌ ಮ್ಯಾಕ್ರನ್‌ ಅವರಿಗೆ ನೀಡಿದ್ದಾರೆ. ಮ್ಯಾಕ್ರನ್‌ ಅವರ ಪತ್ನಿಗೆ ತೆಲಂಗಾಣದ ಖ್ಯಾತ ಪೋಚಂಪಳ್ಳಿ ಇಕಟ್‌ ರೇಷ್ಮೆ ಸೀರೆ ಉಡುಗೊರೆ ನೀಡಿದ್ದಾರೆ.

ಮೋದಿ ಪಡೆದ ಉಡುಗೊರೆಗಳೇನು?

ಇಮ್ಯಾನುಯೆಲ್‌ ಮ್ಯಾಕ್ರನ್‌ ಅವರು ಕೂಡ ನರೇಂದ್ರ ಮೋದಿ ಅವರಿಗೆ ವಿಶೇಷವಾದ ಉಡುಗೊರೆಗಳನ್ನು ನೀಡಿದ್ದಾರೆ. ಶತಮಾನದ ಹಿಂದೆ ಪರ್ಸಿಯನ್‌ ವ್ಯಕ್ತಿಯೊಬ್ಬರು ಸಿಖ್‌ ವ್ಯಕ್ತಿಗೆ ಹೂವು ನೀಡುತ್ತಿರುವ ಫೋಟೊ, ಮಾರ್ಸೆಲ್‌ ಪ್ರೌಸ್ಟ್‌ ಅವರ ಕವನಗಳ ಸಂಗ್ರಹ, ಫ್ರಾನ್ಸ್‌ ಲೇಖಕರು ಸಾಹಿತ್ಯಕ್ಕೆ ನೀಡಿದ ಕೊಡುಗೆಗಳ ಸಂಗ್ರಹ ಸೇರಿ ಹಲವು ಉಡುಗೊರೆಗಳನ್ನು ಮೋದಿ ಸ್ವೀಕರಿಸಿದ್ದಾರೆ.

ಇದನ್ನೂ ಓದಿ: PM Modi France Visit: ‘ಮೇಕ್ ಇನ್ ಇಂಡಿಯಾ’ದಲ್ಲಿ ಫ್ರಾನ್ಸ್ ಭಾರತದ ಸಹಜ ಗೆಳೆಯ ಎಂದ ಪ್ರಧಾನಿ ಮೋದಿ

ಮೋದಿ ಅವರು ಕಳೆದ ಬಾರಿ ಅಮೆರಿಕಕ್ಕೆ ಭೇಟಿ ನೀಡಿದ್ದಾಗ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರಿಗೆ ವಿಶೇಷ ಪೆಟ್ಟಿಗೆ ಸೇರಿ ಹಲವು ಉಡುಗೊರೆ ನೀಡಿದ್ದರು. ಅದರಲ್ಲೂ, ಪೆಟ್ಟಿಗೆ ತಯಾರಿಸಲು ಕರ್ನಾಟಕದ ಮೈಸೂರಿನ ಗಂಧದ ಮರವನ್ನು ಬಳಸಿದ್ದು, ಜೈಪುರದಲ್ಲಿ ಇದನ್ನು ತಯಾರಿಸಲಾಗಿದೆ. ಪೆಟ್ಟಿಗೆಯಲ್ಲಿ ಪೂಜಾ ಸಾಮಗ್ರಿಗಳು, ಬೆಳ್ಳಿಯಲ್ಲಿ ತಯಾರಿಸಿದ ಗಣೇಶನ ಮೂರ್ತಿ ಹಾಗೂ ಕೋಲ್ಕೊತಾದಲ್ಲಿ ತಯಾರಿಸಿದ ಹಣತೆ, ತಾಮ್ರದ ಪತ್ರಗಳು ಇದ್ದವು.

Exit mobile version