ರಿಯಾದ್: ಸೌದಿ ಅರೇಬಿಯಾ ಈ ವರ್ಷ ಹಜ್ ಯಾತ್ರೆಗೆ ತೆರಳುವ ಯಾತ್ರಿಕರ ಸಂಖ್ಯೆ ಮತ್ತು ವಯೋಮಿತಿಯ ಮಿತಿಯನ್ನು ರದ್ದುಪಡಿಸಿದೆ.
ಸೌದಿ ಅರೇಬಿಯಾದ ಸಚಿವರಾದ ಉಮರ್ ತಾಫಿಕ್ ರಬಿಯಾ ಈ ವಿಷಯ ತಿಳಿಸಿದ್ದಾರೆ ಎಂದು ಅರಬ್ ನ್ಯೂಸ್ ವರದಿ ತಿಳಿಸಿದೆ.
ಹಜ್ ಎಕ್ಸ್ಪೋ 2023ರಲ್ಲಿ ಮಾತನಾಡಿದ ಅವರು, ಹಜ್ ಯಾತ್ರೆಗೆ ಈ ವರ್ಷ ಬರುವ ಯಾತ್ರಿಕರ ಸಂಖ್ಯೆ ಕೋವಿಡ್ ಪೂರ್ವ ಮಟ್ಟಕ್ಕೆ ಏರಿಕೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
2019ರಲ್ಲಿ 25 ಲಕ್ಷ ಜನರು ಹಜ್ ಯಾತ್ರೆ ಕೈಗೊಂಡಿದ್ದರು. ಆದರೆ ಮುಂದಿನ ಎರಡು ವರ್ಷ ಕೋವಿಡ್ ಬಿಕ್ಕಟ್ಟಿನ ಪರಿಣಾಮ ಯಾತ್ರಿಕರ ಸಂಖ್ಯೆ ತಗ್ಗಿತ್ತು.