Site icon Vistara News

Savitribai Phule Death Anniversary : ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಬಗ್ಗೆ ತಿಳಿಯಲೇಬೇಕಾದ ಸಂಗತಿಗಳಿವು

#image_title

ನವದೆಹಲಿ: ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರು ಸಮಾಜದಲ್ಲಿ ಸಾಕಷ್ಟು ಬದಲಾವಣೆ ತಂದವರು. ಸಮಾಜ ಸುಧಾರಕಿಯಾಗಿ, ಕವಯಿತ್ರಿಯಾಗಿಯೂ ಗುರುತಿಸಿಕೊಂಡಿದ್ದ ಅವರ 1897ರ ಮಾರ್ಚ್‌ 10ರಂದು ಪ್ಲೇಗ್‌ ರೋಗದಿಂದಾಗಿ ನಿಧನರಾದವರು. ಅವರ ಪುಣ್ಯತಿಥಿಯ (Savitribai Phule Death Anniversary) ದಿನವಾದ ಇಂದು ಅವರ ಜೀವನದ ಬಗ್ಗೆ ಕೆಲವು ಮಾಹಿತಿಗಳು ಇಲ್ಲಿವೆ.

ಇದನ್ನೂ ಓದಿ: ʼಸಾವಿತ್ರಿಬಾಯಿ ಫುಲೆʼಗೆ ಸರ್ಕಾರ ತೆರಿಗೆ ವಿನಾಯಿತಿ ಘೋಷಿಸಲಿ: ತಾರಾ ಅನುರಾಧಾ ಮನವಿ

  1. ಸಾವಿತ್ರಿಬಾಯಿ ಅವರು 1831ರ ಜನವರಿ 3ರಂದು ಮಹಾರಾಷ್ಟ್ರದ ನೈಗಾಂವ್‌ ಗ್ರಾಮದಲ್ಲಿ ಜನಿಸಿದರು. ಖಂಡೋಜಿ ನೆವೇಶೆ ಪಾಟೀಲ್‌ ಮತ್ತು ಲಕ್ಷ್ಮಿ ಅವರ ಹಿರಿಯ ಮಗಳವರು. ಸಾವಿತ್ರಿಬಾಯಿ ಅವರು 9ನೇ ವಯಸ್ಸಿನಲ್ಲಿ ಮಹಾರಾಷ್ಟ್ರದ ಶ್ರೇಷ್ಠ ಸಮಾಜ ಸುಧಾರಕರಲ್ಲಿ ಒಬ್ಬರಾದ 13 ವರ್ಷದ ಜ್ಯೋತಿರಾವ್‌ ಫುಲೆ ಅವರನ್ನು ವಿವಾಹವಾದರು.
  2. ಮದುವೆಯಾದ ತಕ್ಷಣ ಓದು, ಬರಹ ಕಲಿತ ಸಾವಿತ್ರಿಬಾಯಿ ಅವರು ಪುಣೆಯ ಮಹರ್ವಾಡದಲ್ಲಿ ಸಹುಣಬಾಯಿ ಅವರೊಂದಿಗೆ ಸೇರಿಕೊಂಡು ಹೆಣ್ಣು ಮಕ್ಕಳಿಗೆ ಶಿಕ್ಷಣ ಕಲಿಸಲು ಆರಂಭಿಸಿದರು. ಅವರ ಪತಿ ಜ್ಯೋತಿರಾವ್‌ ಅವರಿಗೆ ಮಾರ್ಗದರ್ಶಕರಾಗಿದ್ದರು.
  3. ಸಾವಿತ್ರಿಬಾಯಿ ಅವರು 1848ರಲ್ಲಿ ಭಿಡೆ ವಾಡಾದಲ್ಲಿ ಬಾಲಕಿಯರಿಗಾಗಿ ಭಾರತದ ಮೊದಲ ಶಾಲೆಯನ್ನು ಆರಂಭಿಸಿದರು. ಅವರ ಶಾಲೆಯಲ್ಲಿ ಗಣಿತ, ವಿಜ್ಞಾನ ಮತ್ತು ಸಾಮಾಜಿಕ ಅಧ್ಯಯನದ ವಿಷಯವನ್ನು ಹೇಳಿಕೊಡಲಾಗುತ್ತಿತ್ತು. 1851ರ ಹೊತ್ತಿಗೆ ಸಾವಿತ್ರಿಬಾಯಿ ಮತ್ತು ಜ್ಯೋತಿರಾವ್‌ ಫುಲೆ ಅವರು ಪುಣೆಯಲ್ಲಿ 150 ವಿದ್ಯಾರ್ಥಿನಿಯರ ಸಾಮರ್ಥ್ಯದ ಒಟ್ಟು ಮೂರು ಶಾಲೆಗಳನ್ನು ನಡೆಸಲಾರಂಭಿಸಿದ್ದರು.
  4. ಮಹಿಳಾ ಸಬಲೀಕರಣಕ್ಕೆ ಅಡ್ಡಿಯಾಗುವ ವರದಕ್ಷಿಣೆ ಮತ್ತು ಇತರ ಸಾಮಾಜಿಕ ಅನಿಷ್ಟಗಳ ವಿರುದ್ಧವೂ ಸಾವಿತ್ರಿಬಾಯಿ ಫುಲೆ ಹೋರಾಡಿದರು.
  5. ಅಸ್ಪೃಶ್ಯರೆಂದು ಪರಿಗಣಿಸಲ್ಪಟ್ಟ ಮಾಂಗ್, ಮಹಾರ್ ಸೇರಿದಂತೆ ಅನೇಕ ಕೆಳ ಜಾತಿಗಳ ಮಹಿಳೆಯರು ಮತ್ತು ಮಕ್ಕಳಿಗೆ ಸಾವಿತ್ರಿಬಾಯಿ ಅವರು ಶಿಕ್ಷಣ ನೀಡಲು ಪ್ರಾರಂಭಿಸಿದರು. ಗಂಡ-ಹೆಂಡತಿ ಇಬ್ಬರೂ ಸೇರಿಕೊಂಡು ವಿವಿಧ ಜಾತಿಯ ಮಕ್ಕಳಿಗಾಗಿ ಒಟ್ಟು 18 ಶಾಲೆಗಳನ್ನು ತೆರೆದರು. ಎರಡು ಶೈಕ್ಷಣಿಕ ಟ್ರಸ್ಟ್‌ಗಳನ್ನು ಸ್ಥಾಪಿಸಿದರು.
  6. ಸಾವಿತ್ರಿಬಾಯಿ ಅವರು ಶಿಕ್ಷಣಕ್ಕೆ ನೀಡಿದ ಕೊಡುಗೆಯನ್ನು 1852ರಲ್ಲಿ ಬ್ರಿಟಿಷ್‌ ಸರ್ಕಾರ ಗೌರವಿಸಿತು. ಸಾವಿತ್ರಿಬಾಯಿ ಅವರನ್ನು ಅತ್ಯುತ್ತಮ ಶಿಕ್ಷಕಿ ಎಂದು ಸನ್ಮಾನಿಸಿತು. 1855ರಲ್ಲಿ ಸಾವಿತ್ರಿಬಾಯಿ ಮತ್ತು ಅವರ ಪತಿ ಕಾರ್ಮಿಕರು ಹಾಗೂ ರೈತರಿಗಾಗಿ ರಾತ್ರಿ ಶಾಲೆಯನ್ನು ಆರಂಭಿಸಿದರು.
  7. ದಂಪತಿಯು 1863ರಲ್ಲಿ ಭಾರತದಲ್ಲಿ ಮೊದಲನೇ ಬಾರಿಗೆ ಶಿಶುಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ʼಬಾಲಹತ್ಯಾ ಪ್ರತಿಬಂಧಕ್‌ ಗೃಹʼವನ್ನು ಪ್ರಾರಂಭಿಸಿದರು. ಈ ಗೃಹದಲ್ಲಿ ಗರ್ಭಿಣಿ ಬ್ರಾಹ್ಮಣ ವಿಧವೆಯರು, ಅತ್ಯಾಚಾರ ಸಂತ್ರಸ್ತ್ರರಿಗೆ ಹೆರಿಗೆಗೆ ಸಹಾಯ ಮಾಡುವುದಕ್ಕೆ ಮಾಡಲಾಯಿತು.
  8. ಸಾವಿತ್ರಿಬಾಯಿ ಅವರು 1854ರಲ್ಲಿ ಕಾವ್ಯಾ ಫುಲೆ ಮತ್ತು 1892ರಲ್ಲಿ ಬವನ್‌ ಕಾಶಿ ಸುಬೋಧ ರತ್ನಾಕರ್‌ ಎನ್ನುವ ಎರಡು ಪುಸ್ತಕಗಳನ್ನು ಬರೆದರು. ಇವೆರೆಡು ಸಾವಿತ್ರಿಬಾಯಿ ಅವರ ಕವನ ಸಂಕಲನಗಳಾಗಿವೆ.
  9. ಆಗಿನ ಕಾಲದಲಿ ವಿಧವೆಯರನ್ನು ತಲೆ ಬೋಳಿಸುವ ಪದ್ಧತಿಯಿತ್ತು. ಆ ಪದ್ಧತಿಯನ್ನು ವಿರೋಧಿಸಲು ಸಾವಿತ್ರಿಬಾಯಿ ಅವರು ಮುಂಬೈ ಮತ್ತು ಪುಣೆಯಲ್ಲಿ ಮುಷ್ಕರವನ್ನು ಆಯೋಜಿಸಿದರು.
  10. ಸಾವಿತ್ರಿಬಾಯಿ ದಂಪತಿಗೆ ಮಕ್ಕಳಾಗಲಿಲ್ಲ. ಹಾಗಾಗಿ ಅವರು ಯಶವಂತರಾವ್‌ ಹೆಸರಿನ ಬಾಲಕನನ್ನು ದತ್ತು ತೆಗೆದುಕೊಂಡು ಸಾಕಿದರು.
Exit mobile version