Site icon Vistara News

ಸುಪ್ರೀಂಕೋರ್ಟ್​​ನ ಹಾಲಿ ನ್ಯಾಯಮೂರ್ತಿ ಎಂ.ಆರ್ ಶಾ ಅವರಿಗೆ ಹೃದಯಾಘಾತ, ಹಿಮಾಚಲದಿಂದ ದೆಹಲಿಗೆ ಏರ್​ಲಿಫ್ಟ್

mr shah

ನವ ದೆಹಲಿ: ಸುಪ್ರೀಂಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಾದ ಎಂ..ಆರ್​ ಶಾ ಅವರಿಗೆ ಅವರು ಹಿಮಾಚಲ ಪ್ರದೇಶದಲ್ಲಿದ್ದಾಗ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ದೆಹಲಿಗೆ ಏರ್​​ಲಿಫ್ಟ್ ಮಾಡಲಾಗುತ್ತಿದೆ. ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಭಾರತದ ಮುಖ್ಯ ನ್ಯಾಯಮೂರ್ತಿ ಎನ್​.ವಿ ರಮಣ ರವರು ಗೃಹ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ನ್ಯಾಯಮೂರ್ತಿ ಶಾ ಅವರಿಗೆ ಚಿಕಿತ್ಸೆ ನೀಡುವ ಕುರಿತಾಗಿ ಸಂವಹನ ನಡೆಸುತ್ತಿದ್ದಾರೆ. ಸದ್ಯ ನ್ಯಾಯಮೂರ್ತಿ ಶಾ ಅವರ ಆರೋಗ್ಯ ಸ್ಥಿರವಾಗಿದ್ದು, ಈ ಬಗ್ಗೆ ಸ್ವತಃ ನ್ಯಾಯಮೂರ್ತಿ ಶಾರವರೇ ಮಾತನಾಡಿದರು ಎಂದು ನ್ಯಾಯಮೂರ್ತಿ ರಮಣ ತಿಳಿಸಿದ್ದಾರೆ. ʻʻದೇವರ ಕೃಪೆಯಿಂದ ನಾನು ಚೆನ್ನಾಗಿದ್ದೇನೆ. ಸ್ಥಿರವಾಗಿದ್ದೇನೆ, ಶೀಘ್ರದಲ್ಲೇ ದೆಹಲಿ ತಲುಪುತ್ತೇನೆ. ನನಗೆ ನನ್ನ ಕುಟುಂಬದ ಆರ್ಶಿವಾದವಿದೆ ನಾಳೆಯ ಹೊತ್ತಿಗೆ ನಾನು ಸರಿಯಾಗುತ್ತೇನೆʼʼ ಎಂದು ಶಾ ಅವರೇ ಹೇಳಿದ್ದಾರೆನ್ನಲಾಗಿದೆ.

ಗುಜರಾತ್‌ ಮೂಲದ ಶಾ ಅವರು ಪಟನಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ಅವರು ಗುಜರಾತ್‌ನಲ್ಲೂ ಸೇವೆ ಸಲ್ಲಿಸಿದ್ದಾರೆ. 2018ರ ನವೆಂಬರ್‌ 2ರಂದು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾಗಿ ನೇಮಕಗೊಂಡ ಇವರು 2023ರ ಮೇ 15ರಂದು ಸೇವೆಯಿಂದ ನಿವೃತ್ತರಾಗಲಿದ್ದಾರೆ.

ಇದನ್ನು ಓದಿ | ಕರ್ನಾಟಕ ಲೋಕಾಯುಕ್ತರಾಗಿ ನ್ಯಾ.ಬಿ.ಎಸ್‌. ಪಾಟೀಲ್‌ ನೇಮಕ

ಸುಪ್ರೀಂಕೋರ್ಟ್ ವಕೀಲ ಮತ್ತು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಕೂಡ ಟ್ವೀಟ್ ಮಾಡಿದ್ದು, ಗೌರವಾನ್ವಿತ ನ್ಯಾಯಮೂರ್ತಿ ಎಂ,ಆರ್ ಶಾ ಭಾರತದ ಸುಪ್ರೀಂ ಕೋರ್ಟ್​ ನ್ಯಾಯಾಧೀಶರು ಹಿಮಾಚಲ ಪ್ರದೇಶದಲ್ಲಿದ್ದಾಗ ಹೃದಯಾಘಾತ ಸಂಭವಿಸಿದೆ. ಅವರನ್ನು ದೆಹಲಿಗೆ ಕರೆತರುವ ಕೆಲಸ ಮಾಡಲಾಗುತ್ತಿದೆ. ಶೀಘ್ರವೇ ಅವರ ಆರೋಗ್ಯ ಚೇತರಿಸಿಕೊಳ್ಳಲಿ ಎಂದು ದೇವರನ್ನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಇದನ್ನು ಓದಿ| ಹೈಕೋರ್ಟ್‌ಗೆ ಬಂದ ಐಎಎಸ್‌ ಅಧಿಕಾರಿ ಉಡುಪು ನೋಡಿ ಜಡ್ಜ್‌ ಕೆಂಡಾಮಂಡಲ; ಒಂದೇ ಸಮ ಬೈಗುಳ

Exit mobile version