Site icon Vistara News

Bilkis Bano | ಅತ್ಯಾಚಾರಿಗಳ ಬಿಡುಗಡೆ, ಡಿ.13ರಂದು ಬಿಲ್ಕಿಸ್‌ ಬಾನೊ ಅರ್ಜಿ ವಿಚಾರಣೆ ನಡೆಸಲಿರುವ ಸುಪ್ರೀಂ

Bilkis Bano Case

What Is Bilkis Bano Case? How She Won In Supreme Court?

ನವದೆಹಲಿ: ೨೦೦2ರ ಗೋದ್ರಾ ಹತ್ಯಾಕಾಂಡದ ವೇಳೆ ಬಿಲ್ಕಿಸ್‌ ಬಾನೊ (Bilkis Bano) ಮೇಲೆ ಅತ್ಯಾಚಾರ ಎಸಗಿದ ೧೧ ಅಪರಾಧಿಗಳ ಬಿಡುಗಡೆ ಪ್ರಶ್ನಿಸಿ ಸಂತ್ರಸ್ತೆ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಡಿಸೆಂಬರ್‌ ೧೩ರಂದು ವಿಚಾರಣೆ ನಡೆಸಲಿದೆ. ನ್ಯಾಯಮೂರ್ತಿಗಳಾದ ಅಜಯ್‌ ರಸ್ತೋಗಿ ಹಾಗೂ ಬೆಲಾ ತ್ರಿವೇದಿ ಅವರ ವಿಭಾಗೀಯ ಪೀಠವು ಬಿಲ್ಕಿಸ್‌ ಬಾನೊ ಅರ್ಜಿ ವಿಚಾರಣೆ ನಡೆಸಲಿದೆ.

ಬಿಲ್ಕಿಸ್‌ ಬಾನೊ ಮೇಲೆ ಅತ್ಯಾಚಾರ, ಅವರ ಮಗಳು ಸೇರಿ ಏಳು ಕುಟುಂಬಸ್ಥರ ಹತ್ಯೆ ಪ್ರಕರಣದ ೧೧ ಅಪರಾಧಿಗಳನ್ನು ಗುಜರಾತ್‌ ಸರ್ಕಾರವು ೧೯೯೨ರ ನೀತಿ ಅನ್ವಯ ಕಳೆದ ಆಗಸ್ಟ್‌ನಲ್ಲಿ ಬಿಡುಗಡೆ ಮಾಡಿದೆ. ಗುಜರಾತ್‌ ಸರ್ಕಾರದ ತೀರ್ಮಾನದ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ.

ಗುಜರಾತ್‌ ಸರ್ಕಾರದ ಕ್ರಮ ಪ್ರಶ್ನಿಸಿ ಬಿಲ್ಕಿಸ್‌ ಬಾನೊ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದು, ಇವರ ಪರ ವಕೀಲೆ ಶೋಭಾ ಗುಪ್ತಾ ಅವರು ನವೆಂಬರ್‌ ೩೦ರಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಅವರ ಎದುರು ಅರ್ಜಿ ಪ್ರಸ್ತಾಪಿಸಿದ್ದಾರೆ. ಈಗ ನ್ಯಾಯಾಲಯವು ವಿಚಾರಣೆಗೆ ದಿನಾಂಕ ನಿಗದಿ ಮಾಡಿದೆ.

ಇದನ್ನೂ ಓದಿ | Gujarat Election 2022 | ಬಿಲ್ಕಿಸ್‌ ಬಾನೊ ಅತ್ಯಾಚಾರಿಗಳನ್ನು ‘ಸಂಸ್ಕಾರಿಗಳು’ ಎಂದ ವ್ಯಕ್ತಿಗೆ ಬಿಜೆಪಿ ಟಿಕೆಟ್

Exit mobile version