ಮುಂಬೈ: ಎಲ್ಗಾರ್ ಪರಿಷತ್ (Elgar Parishad)- ಮಾವೋವಾದಿ ಲಿಂಕ್ ಪ್ರಕರಣದಲ್ಲಿ ಜೈಲಿನಲ್ಲಿದ್ದ ಸಾಮಾಜಿಕ ಕಾರ್ಯಕರ್ತ ಹಾಗೂ ವಿದ್ವಾಂಸ ಆನಂದ್ ತೆಲ್ತುಂಬಡೆ(Anand Teltumbde)ಗೆ ಬಾಂಬೆ ಹೈಕೋರ್ಟ್ ಶುಕ್ರವಾರ ಜಾಮೀನು ನೀಡಿದೆ. ಹೀಗಿದ್ದೂ ಆನಂದ್ ತೆಲ್ತುಂಬಡೆ ಅವರು ಈ ಕೂಡಲೇ ಜೈಲಿನಿಂದ ಬಿಡುಗಡೆಯಾಗಲಾರರು.
ತೆಲ್ತುಂಬಡೆ ಅವರಿಗೆ ಜಾಮೀನು ನೀಡಿರುವ ಬಾಂಬೆ ಹೈಕೋರ್ಟ್, ಒಂದು ವಾರದವರೆಗೆ ತನ್ನ ಆದೇಶಕ್ಕೆ ತಡೆಯಾಜ್ಞೆ ಕೂಡ ನೀಡಿದೆ. ಇದರಿಂದಾಗಿ, ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಸುಪ್ರೀಂ ಕೋರ್ಟ್‌ಗೆ ಆದೇಶವನ್ನು ಪ್ರಶ್ನಿಸಿ ಮೊರೆ ಹೋಗಬಹುದಾಗಿದೆ. ಹಾಗಾಗಿ, ಇನ್ನೂ ಒಂದು ವಾರ ಕಾಲ ತೆಲ್ತುಂಬಡೆ ಅವರು ಜೈಲಿನಲ್ಲೇ ಉಳಿಯಲಿದ್ದಾರೆ.
ಬಾಂಬೆ ಹೈಕೋರ್ಟ್‌ನ ಎ ಎಸ್ ಗಡ್ಕರಿ ಮತ್ತು ಎಂ ಎನ್ ಜಾಧವ್ ಅವರಿದ್ದ ದ್ವಿ ಸದಸ್ಯ ಪೀಠವು ಜಾಮೀನು ನೀಡಿದೆ. 73 ವರ್ಷ ತೆಲ್ತುಂಬಡೆ ಅವರು ಜಾಮೀನಿಗಾಗಿ ಅರ್ಜಿ ಹಾಕಿದ್ದರು. ತೆಲ್ತುಂಬಡೆ 2020ರಿಂದಲೂ ಜೈಲಿನಲ್ಲಿದ್ದಾರೆ.
ಇದನ್ನೂ ಓದಿ | ವರವರ ರಾವ್ ಶಾಶ್ವತ ಜಾಮೀನು ತಿರಸ್ಕಾರ: ಜೈಲು ಸ್ಥಿತಿ ಸುಧಾರಿಸಲು ಸೂಚಿಸಿದ ಬಾಂಬೆ ಹೈಕೋರ್ಟ್