Site icon Vistara News

Viral Video: ಸುಖಪುರುಷ ಈ ಮುಖ್ಯ ಶಿಕ್ಷಕ; ಶಾಲೆಯಲ್ಲಿ ನಿದ್ದೆ, ಮಕ್ಕಳ ಬ್ಯಾಗ್​ ತಲೆದಿಂಬು

A Man Sleeping

ಮಧ್ಯಪ್ರದೇಶದ ಛತ್ತರ್​​ಪುರದ (Madhya Pradesh News) ಸರ್ಕಾರಿ ಶಾಲೆ ಮುಖ್ಯಶಿಕ್ಷಕನೊಬ್ಬನ ವಿಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ (Viral Video). ಹಾಗೇ, ಅವರು ಕೂಡ ವಿಪರೀತ ಟೀಕೆಗೆ ಗುರಿಯಾಗುತ್ತಿದ್ದಾರೆ. ಕೆಲಸ ಕಳೆದುಕೊಳ್ಳುವ ಭಯವೂ ಈಗ ಅವರಿಗೆ ಶುರುವಾಗಿದೆ. ಮತ್ತೇನಲ್ಲ, ಮಕ್ಕಳನ್ನೆಲ್ಲ ಹೊರಗೆ ಆಟವಾಡಲು, ಶಾಲಾ ಅಂಗಳವನ್ನು ಸ್ವಚ್ಛಗೊಳಿಸಲು ಬಿಟ್ಟು, ಶಿಕ್ಷಕ ಆರಾಮಾಗಿ ಮಲಗಿದ್ದಾರೆ. ಅದೂ ವಿದ್ಯಾರ್ಥಿಗಳ ಶಾಲಾ ಬ್ಯಾಗ್​​ಗಳನ್ನೇ ತಲೆದಿಂಬು ಮಾಡಿಕೊಂಡು ನಿದ್ದೆ ಹೊಡೆಯುತ್ತಿದ್ದಾರೆ.

ಈ ವಿಡಿಯೊ ಚಿತ್ರೀಕರಣವಾಗಿದ್ದು ಮಧ್ಯಪ್ರದೇಶದ ಲವಕುಶನಗರದ ಬಜೌರಾ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ. ಮುಖ್ಯ ಶಿಕ್ಷಕನ ಹೆಸರು ರಾಜೇಶ್​ ಕುಮಾರ್​ ಅಡ್ಜಾರಿಯಾ. ಇವರು ಸಂಪೂರ್ಣ ನಿದ್ದೆಗೆ ಜಾರಿದ್ದಾರೆ. ಮಕ್ಕಳು ಅವರ ಪಾಡಿಗೆ ಅವರಿದ್ದಾರೆ. ಒಂದಷ್ಟು ಹೆಣ್ಣುಮಕ್ಕಳು ಅಲ್ಲೇ ಶಾಲೆ ಎದುರು ಕಸ ಗುಡಿಸುತ್ತಿದ್ದಾರೆ. ವಿಡಿಯೊ ವೈರಲ್ ಆಗುತ್ತಿದ್ದಂತೆ ಜಿಲ್ಲಾ ಶೈಕ್ಷಣಿಕ ಅಧಿಕಾರಿ ಅದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ತನಿಖೆಗೆ ಆದೇಶ ನೀಡಿದ್ದಾರೆ.

ಇದನ್ನೂ ಓದಿ: Viral Video : ಅಪ್ಪ-ಮಗಳ ನೃತ್ಯಕ್ಕೆ ಮನಸೋಲದವರಿಲ್ಲ; ಹೇಗಿದೆ ನೋಡಿ ಈ ವೈರಲ್ ವಿಡಿಯೊ

ವಿಡಿಯೊ ಬಗ್ಗೆ ಇಂಡಿಯಾ ಟುಡೆ ಮಾಧ್ಯಮದೊಂದಿಗೆ ಮಾತನಾಡಿದ ಜಿಲ್ಲಾ ಶೈಕ್ಷಣಿಕ ಅಧಿಕಾರಿ ಎಂ.ಕೆ.ಕೌಟರಿ ‘ಲವಕುಶನಗರ ಸರ್ಕಾರಿ ಶಾಲೆಯಲ್ಲಿ ಹೆಡ್​ಮಾಸ್ಟರ್​ ನಿದ್ದೆ ಮಾಡುತ್ತಿರುವ ವಿಡಿಯೊವನ್ನು ನೋಡಿದ್ದೇವೆ. ಈ ವಿಷಯವನ್ನು ತನಿಖೆ ಮಾಡಲು, ಆ ಮುಖ್ಯಶಿಕ್ಷಕನನ್ನು ವಿಚಾರಣೆ ಮಾಡಲು ನಾನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಇದೊಂದು ಗಂಭೀರವಾದ ವಿಷಯ. ಈಗಾಗಲೇ ಮುಖ್ಯಶಿಕ್ಷಕನಿಗೆ ನೋಟಿಸ್ ಕೂಡ ಕೊಟ್ಟಿದ್ದೇವೆ. ಶೀಘ್ರದಲ್ಲಿ ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದ್ದಾರೆ.

Exit mobile version