Site icon Vistara News

Indian Science Congress 2023 | ಭಾರತವನ್ನು ವಿಜ್ಞಾನವು ಆತ್ಮನಿರ್ಭರ ಮಾಡಬೇಕು: ಪ್ರಧಾನಿ ಮೋದಿ ಕರೆ

PM Narendra Modi @ Indian Science Congress 2023

ನಾಗ್ಪುರ್: ಭಾರತವನ್ನು ವಿಜ್ಞಾನವು ಆತ್ಮನಿರ್ಭರ ರಾಷ್ಟ್ರವಾಗಿ ಮಾಡಬೇಕು. ವಿಜ್ಞಾನದ ಪ್ರಯತ್ನಗಳು ಯಾವಾಗ ಪ್ರಯೋಗಾಲಯದಿಂದ ಜನರಿಗೆ ತಲುಪುತ್ತವೆಯೋ ಆಗಲೇ ಅವು ಫಲ ನೀಡುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಭಿಪ್ರಾಯಪಟ್ಟರು(Indian Science Congress 2023).

ಮಹಾರಾಷ್ಟ್ರದ ನಾಗ್ಪುರ ವಿಶ್ವವಿದ್ಯಾಲಯದಲ್ಲಿ ಆರಂಭವಾಗಲಿರುವ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶದಲ್ಲಿ ವರ್ಚುವಲ್ ಆಗಿ ಮಾತನಾಡಿ ಪ್ರಧಾನಿ ಮೋದಿ ಅವರು, 2023 ವರ್ಷವನ್ನು ಅಂತಾರಾಷ್ಟ್ರೀಯವಾಗಿ ಸಿರಿಧಾನ್ಯಗಳ ವರ್ಷವಾಗಿ ಆಚರಿಸಲಾಗುತ್ತಿದೆ. ವಿಜ್ಞಾನವನ್ನು ಬಳಸಿಕೊಂಡು, ಭಾರತದ ಸಿರಿಧಾನ್ಯಗಳ ಬಳಕೆಯ ಮಹತ್ವವನ್ನು ಹೆಚ್ಚಿಸುವ ಪ್ರಯತ್ನ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದರು.

ದೇಶಕ್ಕೆ ಸೇವೆ ಸಲ್ಲಿಸುವ ಸಂಕಲ್ಪವನ್ನು ವಿಜ್ಞಾನದ ಉತ್ಸಾಹದೊಂದಿಗೆ ಸಂಯೋಜಿಸಿದಾಗ ಫಲಿತಾಂಶಗಳು ಅಸಾಧಾರಣವಾಗಿರುತ್ತವೆ. ಹೆಚ್ಚುತ್ತಿರುವ ಇಂಧನ ಬೇಡಿಕೆಯ ಮೇಲೆ ದೇಶವು ಸಾಕಷ್ಟು ಅವಲಂಬಿತವಾಗಿದೆ. ವಿಜ್ಞಾನ ಸಮುದಾಯವು, ಈ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಂಡು ಇಡೀ ದೇಶಕ್ಕೆ ಲಾಭವಾಗುವಂಥ ಆವಿಷ್ಕಾರ ಮಾಡಬೇಕು ಎಂದು ಮೋದಿ ಅವರು ಹೇಳಿದರು.

ಜಗತ್ತಿನ ಒಟ್ಟು ಜನಸಂಖ್ಯೆಯಲ್ಲಿ ಭಾರತವೇ ಶೇ.17ರಿಂದ 18ರಷ್ಟು ಜನಸಂಖ್ಯೆಯನ್ನು ಹೊಂದಿದೆ. ಇಷ್ಟು ದೊಡ್ಡ ಪ್ರಮಾಣದ ಜನರ ಏಳ್ಗೆಯು, ಜಾಗತಿಕ ಸಾಧನೆಯಾಗಿಯೂ ಮಾರ್ಪಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. 108ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶವು ನಾಗ್ಪುರದ ರಾಷ್ಟ್ರಸಂತ ತುಕಡೋಜಿ ಮಹಾರಾಜ ನಾಗ್ಪುರ ವಿಶ್ವವಿದ್ಯಾಲಯದಲ್ಲಿ ಇಂದಿನಿಂದ ಐದು ದಿನಗಳ ಕಾಲ ನಡೆಯಲಿದೆ.

ಇದನ್ನೂ ಓದಿ | Ozone day | ಸದ್ಯದ ತುರ್ತು ಹೊಣೆ, ಓಝೋನ್ ರಕ್ಷಣೆ

Exit mobile version