Site icon Vistara News

Air India: ವಿಮಾನದಲ್ಲಿ ಮಹಿಳೆಗೆ ಕುಟುಕಿದ ಚೇಳು; ಇದು ಅಪರೂಪದ ಪ್ರಕರಣ ಎಂದ ಏರ್​ ಇಂಡಿಯಾ

Air India Pilot Refuses To Fly

Air India Pilot Refuses to Fly Plane After Emergency Landing in Jaipur, 350 Passengers Stranded

ಮುಂಬಯಿ: ಇತ್ತೀಚೆಗೆ ವಿಮಾನದಲ್ಲಿ ಕುಡುಕರ ಹಾವಳಿ, ಅವರು ಸೃಷ್ಟಿಸಿದ ಅವಾಂತರ-ಅವ್ಯವಸ್ಥೆ ಬಗ್ಗೆ ಹಲವು ಸುದ್ದಿಗಳನ್ನು ಓದಿದ್ದೇವೆ. ಅದೆಲ್ಲದರ ಹೊರತಾಗಿ ಈಗೊಂದು ವಿಚಿತ್ರ ಘಟನೆ ಏರ್​ ಇಂಡಿಯಾ (Air India) ವಿಮಾನದಿಂದ ವರದಿಯಾಗಿದೆ. ನಾಗ್ಪುರದಿಂದ ಮುಂಬಯಿಗೆ ತೆರಳುತ್ತಿದ್ದ ಏರ್​ ಇಂಡಿಯಾ ವಿಮಾನದಲ್ಲಿ (Nagpur to Mumbai Air India) ಮಹಿಳಾ ಪ್ರಯಾಣಿಕರೊಬ್ಬರಿಗೆ ಚೇಳು ಕುಟುಕಿದೆ. ಈ ಘಟನೆ ಏಪ್ರಿಲ್​ 23ರಂದು ನಡೆದಿದ್ದಾಗಿ ಏರ್​ ಇಂಡಿಯಾ ಸಂಸ್ಥೆ ಹೇಳಿದೆ. ಹಾಗೇ, ಪ್ರಯಾಣಿಕಳಿಗೆ ಏನೂ ತೊಂದರೆಯಾಗಿಲ್ಲ. ಚಿಕಿತ್ಸೆಯ ಬಳಿಕ ಅವರು ಸುಧಾರಿಸಿಕೊಂಡಿದ್ದಾರೆ ಎಂದೂ ತಿಳಿಸಿದೆ.

ವಿಮಾನದಲ್ಲಿ ಜೀವಂತ ಹಕ್ಕಿಗಳು, ಇಲಿಗಳು ಸಿಗುವುದು ಸಾಮಾನ್ಯವಾಗಿಬಿಟ್ಟಿದೆ. ಆದರೆ ಹೀಗೆ ಚೇಳು ಸಿಗುವುದೆಲ್ಲ ತೀರ ವಿರಳ. ಪ್ರಯಾಣಿಕರೊಬ್ಬರಿಗೆ ವಿಮಾನದಲ್ಲಿ ಚೇಳು ಕುಟುಕಿದ್ದು ಅತ್ಯಂತ ಅಪರೂಪದ ಮತ್ತು ದುರದೃಷ್ಟಕರ ಘಟನೆ ಎಂದು ಏರ್​ ಇಂಡಿಯಾ ವಕ್ತಾರರು ತಿಳಿಸಿದ್ದಾಗಿ ಎಎನ್​ಐ ಮಾಧ್ಯಮ ವರದಿ ಮಾಡಿದೆ. ಆ ಮಹಿಳೆಗೆ ಏನೋ ಕಚ್ಚಿದ್ದು ಗೊತ್ತಾಯಿತು. ನೋಡಿದರೆ ಅದೊಂದು ಚೇಳಾಗಿತ್ತು. ಅಲ್ಲೇ, ವಿಮಾನದಲ್ಲೇ ಆಕೆಗೆ ಪ್ರಥಮ ಚಿಕಿತ್ಸೆ ನೀಡಲಾಯಿತು. ಹಾಗೇ, ಮುಂಬಯಿ ಏರ್​ಪೋರ್ಟ್​ನಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಬಳಿಕ ಅವರು ಡಿಸ್​ಚಾರ್ಜ್ ಆಗಿದ್ದಾರೆ. ಆ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ನೀಡಿ, ಅವರು ಡಿಸ್​ಚಾರ್ಜ್ ಆಗುವವರೆಗೂ ನಮ್ಮ ಏರ್​ ಇಂಡಿಯಾದ ಅಧಿಕಾರಿಯೊಬ್ಬರು ಜತೆಗೇ ಇದ್ದರು ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Air India : ಏರ್‌ ಇಂಡಿಯಾದಿಂದ 1,000ಕ್ಕೂ ಹೆಚ್ಚು ಪೈಲಟ್‌ಗಳ ನೇಮಕ

ಏರ್​ ಇಂಡಿಯಾ ವಿಮಾನದಲ್ಲಿ ಹೀಗೆ ಪ್ರಯಾಣಿಕಳಿಗೆ ಚೇಳು ಕಚ್ಚಿದ ಬೆನ್ನಲ್ಲೇ ಸಂಸ್ಥೆಯ ಎಂಜಿನಿಯರ್​​ಗಳ ತಂಡವೊಂದು ಇಡೀ ವಿಮಾನವನ್ನು ಪರಿಶೀಲನೆ ಮಾಡಿದೆ. ಅಷ್ಟೇ ಅಲ್ಲ, ವಿಮಾನದಲ್ಲಿ ಧೂಮೀಕರಣ ಪ್ರಕ್ರಿಯೆ ನಡೆಸಲಾಯಿತು. ಇನ್ನೊಮ್ಮೆ ಇಂಥ ಘಟನೆ ಆಗದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಈಗ ಮಹಿಳಾ ಪ್ರಯಾಣಿಕಳಿಗೆ ಆದ ನೋವು ಮತ್ತು ಅನನುಕೂಲತೆಗಾಗಿ ವಿಷಾದಿಸುತ್ತೇವೆ ಎಂದು ಏರ್​ ಇಂಡಿಯಾ ಹೇಳಿದೆ.

ಕಳೆದ ವರ್ಷ ಅಕ್ಟೋಬರ್​ನಲ್ಲಿ ಫ್ಲೋರಿಡಾದ ಟಾಂಪಾ ಸಿಟಿಯಿಂದ ನ್ಯೂಜೆರ್ಸಿಯ ನೆವಾರ್ಕ್​ ಲಿಬರ್ಟಿ ಇಂಟರ್​ನ್ಯಾಷನಲ್​ ಏರ್​ಪೋರ್ಟ್​​ಗೆ ಬಂದು ಲ್ಯಾಂಡ್ ಆದ ಯುನೈಟೆಡ್​ ಫ್ಲೈಟ್​ 2038ರ ‘ಬ್ಯುಸಿನೆಸ್​ ಕ್ಲಾಸ್’​ ವಿಭಾಗದಲ್ಲಿ ಹಾವು ಕಾಣಿಸಿಕೊಂಡು ಪ್ರಯಾಣಿಕರು ಗಾಬರಿಗೊಳ್ಳುವಂತಾಗಿತ್ತು. ಬಳಿಕ ಏರ್​ಪೋರ್ಟ್​​ನ ವನ್ಯಜೀವಿ ಕಾರ್ಯಾಚರಣೆ ಸಿಬ್ಬಂದಿ ಮತ್ತು ಬಂದರು ಪ್ರಾಧಿಕಾರ ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ವಿಮಾನದ ಒಳಹೊಕ್ಕು, ಹಾವನ್ನು ಹಿಡಿದು, ಸಮೀಪದ ಅರಣ್ಯಕ್ಕೆ ಬಿಟ್ಟಿದ್ದರು. ಅದೃಷ್ಟಕ್ಕೆ ಅದು ಯಾರಿಗೂ ಕಚ್ಚಿರಲಿಲ್ಲ.

Exit mobile version