ಲಕ್ನೋ: 80 ಲೋಕಸಭೆ ಕ್ಷೇತ್ರಗಳನ್ನು ಹೊಂದಿರುವ (Lok Sabha Election) ಉತ್ತರ ಪ್ರದೇಶದಲ್ಲಿ (Uttar Pradesh) ಕಾಂಗ್ರೆಸ್ ಮತ್ತು ಸಮಾಜವಾದಿ ಪಾರ್ಟಿ (Congress-SP) ಕ್ಷೇತ್ರ ಹಂಚಿಕೆಯನ್ನು ಪೂರ್ಣಗೊಳಿಸಿವೆ (Seat Sharing) ಎಂದು ಸಮಾಜವಾದಿ ಪಕ್ಷದ ನಾಯಕ ರಾಮ್ ಗೋಪಾಲ್ ಯಾದವ್ ಅವರು ಹೇಳಿದ್ದಾರೆ. ಈಗಾಗಲೇ 16 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿರುವ ಸಮಾಜವಾದಿ ಪಕ್ಷವು ಒಂದೆರಡು ದಿನಗಳಲ್ಲಿ ಇನ್ನಷ್ಟು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಿದೆ ಎಂದು ಹೇಳಿದರು. ಆದರೆ, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷವು ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ ಎಂಬುದನ್ನು ಅವರು ತಿಳಿಸಿಲ್ಲ.
ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷದ (BSP) ಜತೆಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲಿದೆಯೇ ಎಂಬ ಪ್ರಶ್ನೆಗೆ ನೇರ ಉತ್ತರ ನೀಡದ ರಾಮ್ ಗೋಪಾಲ್ ಯಾದವ್ ಅವರು, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಸೀಟು ಷೇರಿಂಗ್ ಪೂರ್ಣಗೊಳಿಸಿವೆ ಎಂದು ಹೇಳಿದರು.
ನಾವು ಈಗಾಗಲೇ 16 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದೇವೆ. ಮುಂದಿನ ಒಂದೆರಡು ದಿನಗಳಲ್ಲಿ ಇನ್ನಷ್ಟು ಅಭ್ಯರ್ಥಿಗಳನ್ನು ಘೋಷಣೆ ಮಾಡಲಿದ್ದೇವೆ. ಕಾಂಗ್ರೆಸ್ ಮತ್ತು ಎಸ್ಪಿ ಉತ್ತರ ಪ್ರದೇಶದಲ್ಲಿ ಸೀಟ್ ಷೇರಿಂಗ್ ಸಂಬಂಧ ಅಂತಿಮ ಒಪ್ಪಂದ ಮಾಡಿಕೊಂಡಿವೆ ಎಂದು ತಿಳಿಸಿದರು.
ಏತನ್ಮಧ್ಯೆ, ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ನಿರ್ಧರಿಸುವಲ್ಲಿ ಯಾವುದೇ ವಿಳಂಬ ಮಾಡಬಾರದು ಎಂದು ಎಸ್‌ಪಿ ನಾಯಕಿ ಡಿಂಪಲ್ ಯಾದವ್ ಹೇಳಿದರು ಮತ್ತು ಮುಂಬರುವ ಚುನಾವಣೆಗಳು “ಸಂವಿಧಾನವನ್ನು ಉಳಿಸುವ” ಬಗ್ಗೆ ಒತ್ತಿ ಹೇಳಿದರು. ಇದೊಂದು ಮಹತ್ವದ ಚುನಾವಣೆಯಾಗಿದೆ. ಇದು ಸಂವಿಧಾನ ಉಳಿಸುವ ಚುನಾವಣೆಯಾಗಿದೆ. ಹಾಗಾಗಿ, ಚುನಾವಣೆ ಸಿದ್ಧತೆಯಲ್ಲಿ ಯಾವುದೇ ವಿಳಂಬ ಮಾಡಬಾರದು ಎಂದು ಅವರು ತಿಳಿಸಿದರು.
ಚುನಾವಣೆಯಲ್ಲಿ ಕೆಳ ಹಂತದಿಂದಲೇ ಆಡಬೇಕಾಗುತ್ತದೆ. ಸೂಕ್ತ ಸಮಯದಲ್ಲಿ ಅಭ್ಯರ್ಥಿಗಳ ಘೋಷಣೆ ಸಾಧ್ಯವಾದರೆ, ಬಿಜೆಪಿಯ ವಿರುದ್ಧ ಹೋರಾಟ ನಡೆಸಬಹುದು ಎಂದು ಹೇಳಿದರು. ಸಮಾಜವಾದಿ-ಕಾಂಗ್ರೆಸ್ ಮೈತ್ರಿಕೂಟದಲ್ಲಿ ಬಿಎಸ್‌ಪಿ ಸೇರ್ಪಡೆಯಾಗಲಿದೆಯೇ ಎಂಬ ಪ್ರಶ್ನೆಗೆ, ಈ ಕುರಿತು ಪಕ್ಷದ ಉನ್ನತ ನಾಯಕತ್ವ ನಿರ್ಧರಿಸಲಿದೆ ಎಂದು ಹೇಳಿದೆ.
ಮಂಗಳವಾರ ಸಮಾಜವಾದಿ ಪಕ್ಷವು 16 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿತ್ತು. ಹಾಲಿ ಸಂಸದೆ ಡಿಂಪಲ್ ಯಾದವ್ ಅವರಿಗೆ ಮೈನಪುರಿ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ, ಹಾಗೆಯೇ ಷಫಿಕುರ್ ರೆಹಮಾನ್ ಬಾರ್ಕ್ ಅವರು ಸಂಭಲ್ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
ಈ ಸುದ್ದಿಯನ್ನೂ ಓದಿ: Shiv Pratap Yadav: ಸಮಾಜವಾದಿ ಪಕ್ಷದ ಶಾಸಕ ಶಿವ ಪ್ರತಾಪ್ ನಿಧನ; ಯೋಗಿ ಸಂತಾಪ