ನವದೆಹಲಿ: ಅರ್ಹ ಎಲ್ಲ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವುದೇ ನಿಜವಾದ ಜಾತ್ಯತೀತ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಜ್ಯಸಭೆಯಲ್ಲಿ ಹೇಳಿದರು. ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸಿದ ಅವರು, ತಂತ್ರಜ್ಞಾನದ ಶಕ್ತಿಯೊಂದಿಗೆ ಕೆಲಸ ಸಂಸ್ಕೃತಿಯನ್ನು ನಾವು ಬದಲಿಸಿದ್ದೇವೆ. ನಮ್ಮ ಗಮನವು ವೇಗವನ್ನು ಹೆಚ್ಚಿಸುವುದು ಮತ್ತು ಗುಣಮಟವನ್ನು ಉನ್ನತಕರಿಸುವುದಾಗಿದೆ ಹೇಳಿದರು(PM Modi Speech in Rajya Sabha).
ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಗಳಿಂದ 3 ಕೋಟಿ ಬುಡಕಟ್ಟು ಜನರಿಗೆ ಲಾಭವಾಗಿದೆ. ನಾವು ದೇಶದಲ್ಲಿ 110 ಮಹತ್ವಾಕಾಂಕ್ಷೆಯ ಜಿಲ್ಲೆಗಳನ್ನು ಗುರುತಿಸಿದ್ದೇವೆ. ನಿರಂತರ ಗಮನ ಮತ್ತು ಕಾರ್ಯಕ್ಷಮತೆಯ ವಿಮರ್ಶೆಗಳಿಂದಾಗಿ ಈ ಜಿಲ್ಲೆಗಳಲ್ಲಿ ಶಿಕ್ಷಣ, ಮೂಲಸೌಕರ್ಯ ಮತ್ತು ಆರೋಗ್ಯ ಕ್ಷೇತ್ರಗಳನ್ನು ಗಣನೀಯವಾಗಿ ಸುಧಾರಿಸುತ್ತಿದ್ದೇವೆ. ನಮ್ಮ ಈ ಪ್ರಯತ್ನದಿಂದಾಗಿ 3 ಕೋಟಿಗೂ ಹೆಚ್ಚು ಬುಡಕಟ್ಟು ಜನಾಂಗದವರಿಗೆ ಲಾಭವಾಗಿದೆ ಎಂದು ಮೋದಿ ರಾಜ್ಯಸಭೆಯಲ್ಲಿ ತಿಳಿಸಿದರು.
ಇದನ್ನೂ ಓದಿ: Pm Modi Rajya Sabha Speech Live: ಮಲ್ಲಿಕಾರ್ಜುನ್ ಖರ್ಗೆ ಖಾತೆ ಬಂದ್ ಆಗಿದೆ ಎಂದ ಪ್ರಧಾನಿ ಮೋದಿ
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ನಮ್ಮೆಲ್ಲ ಯೋಜನೆಗಳು ಎಲ್ಲರಿಗೂ ಲಾಭವಾಗಬೇಕೆಂದು ಬಯಸುತ್ತೇವೆ. ಆಜಾದಿ ಕಾ ಅಮೃತ್ ಕಾಲ್ ಸಮಯದಲ್ಲಿ ಎಲ್ಲರಿಗೂ ಪ್ರಯೋಜನವಾಗುವಂತೆ ಯೋಜನೆಗಳಲ್ಲಿ ಸಂತೃಪ್ತ ಮಟ್ಟವನ್ನು ಸಾಧಿಸಲು ನಾವು ನಿರ್ಧರಿಸಿದ್ದೇವೆ. ಇದು ನಿಜವಾದ ಜಾತ್ಯತೀತ. ಎಲ್ಲಾ ಯೋಜನೆಗಳಲ್ಲಿ ಶೇ.100 ರಷ್ಟು ಶುದ್ಧತ್ವವನ್ನು ಸಾಧಿಸಲು ನಾವು ಪ್ರತಿಜ್ಞೆ ಮಾಡುತ್ತೇವೆ ಮತ್ತು ಎಲ್ಲಾ ರೀತಿಯ ತುಷ್ಟೀಕರಣವನ್ನು ಕೊನೆಗೊಳಿಸುತ್ತೇವೆ ಎಂದು ಪ್ರಧಾನಿ ಹೇಳಿದರು.