Site icon Vistara News

Modi Security Breach | ಮೋದಿ ಗುಜರಾತ್‌ ರ‍್ಯಾಲಿ ವೇಳೆ ಡ್ರೋನ್‌ ಹಾರಾಟ, ಮೂವರ ಬಂಧನ, ಭದ್ರತಾ ವೈಫಲ್ಯ ವರದಿ

Security Breach At Modi Rally In Gujarat

ಗಾಂಧಿನಗರ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಬಾವ್ಲಾದಲ್ಲಿ ರ‍್ಯಾಲಿ ನಡೆಸಿದ್ದು, ಇದೇ ವೇಳೆ ಡ್ರೋನ್‌ ಒಂದು (Modi Security Breach) ಪತ್ತೆಯಾಗಿದೆ. ಕೂಡಲೇ ರಾಷ್ಟ್ರೀಯ ಭದ್ರತಾ ದಳ (NSG) ಸಿಬ್ಬಂದಿಯು ಡ್ರೋನ್‌ಅನ್ನು ಹೊಡೆದುರುಳಿಸಿದ್ದು, ಭದ್ರತಾ ವೈಫಲ್ಯ ಉಂಟಾಗಿದೆ ಎಂದು ತಿಳಿದುಬಂದಿದೆ.

ಬಂಧಿತ ಆರೋಪಿಗಳು.

ನರೇಂದ್ರ ಮೋದಿ ಅವರು ಭಾಷಣ ಮಾಡುತ್ತಿದ್ದ ವೇದಿಕೆ ಕಡೆಗೆ ಡ್ರೋನ್‌ ಸಾಗುತ್ತಿದ್ದು, ಇದೇ ವೇಳೆ ಎನ್‌ಎಸ್‌ಜಿ ಸಿಬ್ಬಂದಿಯು ಹೊಡೆದುರುಳಿಸಿದ್ದಾರೆ. ಆದಾಗ್ಯೂ, ಡ್ರೋನ್‌ನಲ್ಲಿ ಯಾವುದೇ ಶಸ್ತ್ರಾಸ್ತ್ರಗಳನ್ನು ಅಳವಡಿಸಿರಲಿಲ್ಲ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರನ್ನು ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಕಳೆದ ಜನವರಿಯಲ್ಲಿ ಪಂಜಾಬ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತೆ ಒದಗಿಸುವಲ್ಲಿ ಏರುಪೇರಾಗಿತ್ತು. ಫಿರೋಜ್‌ಪುರದಲ್ಲಿ ಮೋದಿ ಅವರು ರಸ್ತೆ ಮಾರ್ಗದ ಮೂಲಕ ಸಾಗುವಾಗ ಸೇತುವೆ ಅಡ್ಡಗಟ್ಟಿ ರೈತರು ಪ್ರತಿಭಟನೆ ನಡೆಸಿದ್ದರು. ಇದರ ತನಿಖೆಗಾಗಿ ಸುಪ್ರೀಂ ಕೋರ್ಟ್‌ ಈಗಾಗಲೇ ಸಮಿತಿ ರಚಿಸಿದೆ.

NSG ಹೊಡೆದುರುಳಿಸಿದ ಡ್ರೋನ್.

ವಿಡಿಯೊ ಮಾಡುತ್ತಿದ್ದ ಆರೋಪಿಗಳು

ಬಂಧಿತ ಆರೋಪಿಗಳನ್ನು ನಿಕುಲ್‌ ರಮೇಶ್‌ಭಾಯಿ, ರಾಕೇಶ್‌ ಕಲುಭಾಯಿ ಹಾಗೂ ರಾಜೇಶ್‌ ಕುಮಾರ್‌ ಪ್ರಜಾಪ್ರತಿ ಎಂದು ಗುರುತಿಸಲಾಗಿದ್ದು, ಇವರು ಡ್ರೋನ್‌ ಮೂಲಕ ಮೋದಿ ಭಾಷಣ ವಿಡಿಯೊ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ‘ಹಾರಾಟ ನಿರ್ಬಂಧಿತ ವಲಯ’ದಲ್ಲಿ (No Fly Zone) ಡ್ರೋನ್‌ ಹಾರಿಸಿದ ಕಾರಣ ಇವರನ್ನು ಬಂಧಿಸಿ, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಪ್ರಕಟಣೆ ತಿಳಿಸಿದ್ದಾರೆ.

ಇದನ್ನೂ ಓದಿ | Gujarat Election | ಬಿಜೆಪಿ, ಕಾಂಗ್ರೆಸ್ ಭರ್ಜರಿ ಪ್ರಚಾರ; ಮೋದಿ-ರಾಹುಲ್ ಟೀಕಾ ಪ್ರಹಾರ

Exit mobile version