Site icon Vistara News

Lok Sabha: ದುಷ್ಕರ್ಮಿಗಳು ಈ ಹಿಂದೆ ಆಯುಧಗಳೊಂದಿಗೆ ಸಂಸತ್ತಿಗೆ ನುಗ್ಗಿದ್ದರು! ಪ್ರಹ್ಲಾದ್‌ ಜೋಶಿ ಮಾಹಿತಿ

Action to release interim crop insurance for groundnut soybean growers says Minister Pralhad Joshi

ನವದೆಹಲಿ: ಬುಧವಾರ ನಡೆದ ಲೋಕಸಭೆ ಭದ್ರತಾ ಲೋಪ ಘಟನೆಯ (Security Breach in Lok Sabha) ಬಳಿಕ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ(parliamentary affairs minister pralhad joshi) ಅವರು, ಸಂಸತ್ತಿನಲ್ಲಿ ಭದ್ರತಾ ಲೋಪ ಪ್ರಕರಣಗಳು ನಡೆದ ಇತಿಹಾಸವಿದೆ. ಈ ಹಿಂದೆ ಕೆಲವರು ಆಯುಧಗಳೊಂದಿಗೆ ಸಂಸತ್ತಿಗೆ ಆಗಮಿಸಿದ್ದರು (Weapons) ಎಂದು ಉದಾಹರಣೆಗನ್ನು ನೀಡಿದರು.

ದಿಲ್ಲಿಯ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿ ಅವರು, ಬುಧವಾರ ನಡೆದ ಘಟನೆ ಖಂಡನೀಯ ಮತ್ತು ವಿಷಾದನೀಯ. ಘಟನೆಯ ಬಳಿಕ ಲೋಕಸಭೆ ಸ್ಪೀಕರ್ ಸಭಾ ನಾಯಕರ ಸಭೆ ನಡೆಸಿದರು. ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಿದರು. ಘಟನೆಯಿಂದ ಪಾಠ ಕಲಿತು ಮುಂದೆ ತೆಗೆದುಕೊಳ್ಳುವ ಕ್ರಮ ಬಗ್ಗೆ ಸಮಾಲೋಚನೆ ಮಾಡಲಾಯಿತು ಎಂದು ಹೇಳಿದರು.

ಸಂಸತ್ತಿನಲ್ಲಿ ಈ ಹಿಂದೆಯೂ ಇಂಥ ಘಟನೆಗಳಾಗಿವೆ. ನಮ್ಮ ಬಳಿ 1971ರಿಂದ ಇತ್ತೀಚಿನ ಸ್ಪಷ್ಟವಾದ ದಾಖಲೆಗಳಿವೆ. ವಿಸಿಟರ್ಸ್ ಗ್ಯಾಲರಿಯಿಂದ ಕರಪತ್ರಗಳನ್ನು ಎಸೆಯುವುದು, ಘೋಷಣೆ ಕೂಗುವುದು ಸಾಮಾನ್ಯವಾದ ಘಟನೆಗಳಾಗಿವೆ. ಕೆಲವು ಆಯುಧಗಳೊಂದಿಗೆ ಲೋಕಸಭೆಗೆ ಬಂದಿರುವ ಉದಾಹರಣೆಗಳಿವೆ. ಈ ರೀತಿಯ ಘಟನೆಗಳು ನಡೆದಾಗ ಅಂದಿನ ಸ್ಪೀಕರ್ ಅವರು ಯಾವ ರೀತಿಯ ಕ್ರಮಗಳನ್ನು ಕೈಗೊಂಡಿದ್ದಾರೋ ಅದನ್ನೆಲ್ಲ ಗಮನಿಸಿ ಇಂದಿನ ಸ್ಪೀಕರ್ ಓಂ ಬಿರ್ಲಾ ಅವರು ಕ್ರಮಕ್ಕೆ ಆದೇಶಿಸಿದ್ದಾರೆ ಎಂದು ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಬಧವಾರ ನಡೆದ ಘಟನೆಯ ಕುರಿತು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ. ಗೃಹ ಸಚಿವಾಲಯಕ್ಕೆ ಪತ್ರ ಬರೆದು ಉನ್ನತ ತನಿಖೆಗೆ ಸ್ಪೀಕರ್ ಆದೇಶಿಸಿದ್ದಾರೆ. ಸ್ಪೀಕರ್ ಅವರು ಸದನದ ಮುಖ್ಯಸ್ಥರು. ಅವರ ನಿರ್ಣಯವೇ ಅಂತಿಮ. ಭದ್ರತೆಯನ್ನು ಅವರೇ ಅಂತಿಮ ಮಾಡುತ್ತಾರೆ. ಇದರಲ್ಲಿ ಸರ್ಕಾರದ ಪಾತ್ರ ಇರುವುದಿಲ್ಲ. ತನಿಖೆಗೆ ನೀಡಿದ ಬಳಿಕ ಸದನ ಶುರುವಾಯಿತು. ಈ ವೇಳೆ ವಿರೋಧ ಪಕ್ಷಗಳ ಗಲಾಟೆ ಆರಂಭಿಸಿದವು. ಮತ್ತೆ ಸಭೆ ಕರೆದು ವಿಶ್ವಾಸಕ್ಕೆವತೆಗೆದುಕೊಳ್ಳುವ ಕೆಲಸ ಮಾಡಲಾಯಿತು. ಆದರೆ ಇಂದೂ ಮತ್ತೆ ಪ್ರತಿಪಕ್ಷಗಳು ಗಲಾಟೆ ಆರಂಭಿಸಿದವು. ತಪ್ಪಿಸ್ಥರರಿಗೆ ಶಿಕ್ಷೆ ಕೊಡಿಸುವ ಕೆಲಸ ಸರ್ಕಾರ ಮಾಡಲಿದೆ. ದೇಶದ ಭದ್ರತೆಯ ವಿಚಾರದಲ್ಲಿ ಸ್ಪೀಕರ್ ಆದೇಶದಂತೆ ಕೆಲಸ ಮಾಡಲಿದೆ ಎಂದು ಅವರು ತಿಳಿಸಿದರು.

ಮೋಯಿತ್ರಾ ಜತೆ ಪ್ರತಾಪ್ ಸಿಂಹ ಹೋಲಿಕೆ ಬೇಡ

ಪ್ರಶ್ನೆಗಾಗಿ ನಗದು ಪ್ರಕರಣದಲ್ಲಿ ಇತ್ತೀಚೆಗಷ್ಟೇ ಲೋಕಸಭೆಯಿಂದ ವಜಾ ಆದ ಮಹುವಾ ಮೋಯಿತ್ರಾ ಪ್ರಕರಣವೇ ಬೇರೆ. ಪ್ರತಾಪ್ ಸಿಂಹ ಅವರ ಪ್ರಕರಣವೇ ಬೇರೆ. ಈ ಎರಡೂ ಪ್ರಕರಣಗಳನ್ನು ಒಂದಕ್ಕೊಂದು ಹೋಲಿಕೆ ಮಾಡುವುದು ಸರಿಯಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಯಾವ ಹಿನ್ನಲೆಯಲ್ಲಿ ಪಾಸ್ ಕೊಟ್ಟಿದ್ದಾರೆಂಬ ಕುರಿತೂ ತನಿಖೆಯಾಗಲಿದೆ. ಯಾರನ್ನು ಯಾವ ಕಾರಣಕ್ಕೂ ರಕ್ಷಣೆ ಮಾಡುವ ಪ್ರಶ್ನೆ ಇಲ್ಲ. ಕ್ಷೇತ್ರದ ಜನರು ಬಂದಾಗ ಪಾಸ್ ಕೊಡುವುದು ಸಹಜ. ಪಾಸ್ ಕೊಟ್ಟ ವಿಚಾರವೂ ತನಿಖೆಗೆ ಒಳಪಡಲಿದೆ. ದಾಳಿಕೋರರು ಮೂರು ಸಲ ಪಾಸ್ ಪಡೆದಿರುವುದು ಗೊತ್ತಿಲ್ಲ. ಮೈಸೂರು ನವರು ಎನ್ನುವ ಕಾರಣಕ್ಕೆ ಪಾಸ್ ಕೊಟ್ಟೆ ಎಂದು ಪ್ರತಾಪ್ ಸಿಂಹ್ ಅವರು ನನ್ನ ಬಳಿ ಹೇಳಿದ್ದಾರೆ ಎಂದು ಪ್ರಹ್ಲಾದ್ ಜೋಶಿ ಮಾಧ್ಯಮಗಳಿಗೆ ತಿಳಿಸಿದರು.

ಈ ಸುದ್ದಿಯನ್ನೂ ಓದಿ:Security Breach in Lok Sabha: ಲೋಕಸಭೆ ದಾಳಿಯ ಹಿಂದಿತ್ತು 18 ತಿಂಗಳ ತಯಾರಿ! ಸಂಚು ರೂಪುಗೊಂಡಿದ್ದು ಹೇಗೆ?

Exit mobile version