ನವದೆಹಲಿ: ಇಬ್ಬರು ಯುವಕರು ಬುಧವಾರ ಲೋಕಸಭೆಗೆ ನುಗ್ಗಿ ಕಲರ್ ಸ್ಮೋಕ್ ಬಾಂಬ್ ಸಿಡಿಸಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ(Security Breach in Lok Sabha). ಲೋಕಸಭೆಗೆ ನುಗ್ಗಿದ ಇಬ್ಬರು ಮತ್ತು ಸಂಸತ್ತಿನ ಹೊರೆಗೆ ನಡೆಸುತ್ತಿದ್ದ ಇಬ್ಬರನ್ನು ಸೇರಿ, ಒಟ್ಟು ನಾಲ್ವರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಲೋಕಸಭೆಗೆ ನುಗ್ಗಿದ ಇಬ್ಬರು ಯುವಕರು ತಮ್ಮ ಬಳಿಕ ಬಣ್ಣದ ಗ್ಯಾಸ್ ಡಬ್ಬಿಗಳನ್ನು (Colour Gas Canisters?) ಎಸೆದು ಆತಂಕವನ್ನು ಸೃಷ್ಟಿಸಿದ್ದರು.
ಇಬ್ಬರನ್ನು ಸದನದ ಒಳಗೂ, ಇಬ್ಬರನ್ನು ಪಾರ್ಲಿಮೆಂಟ್‌ನ ಹೊರಗೂ ಬಂಧಿಸಲಾಗಿದೆ. ಇಬ್ಬರು ಶೂಗಳ ಒಳಗೆ ಗ್ಯಾಸ್ ಕ್ಯಾನಿಸ್ಟರ್‌ಗಳನ್ನು(ಡಬ್ಬ) ಇಟ್ಟುಕೊಂಡು ಒಳಗೆ ಕೊಂಡೊಯ್ದಿದ್ದು ಹಳದಿ ಅನಿಲವನ್ನು ಸ್ಪ್ರೇ ಮಾಡಿದ್ದಾರೆ. ಜೊತೆಗೆ ʼತಾನಾಶಾಹಿ ನಹೀ ಚಲೇಗೀʼ (ಸರ್ವಾಧಿಕಾರವನ್ನು ಸಹಿಸುವುದಿಲ್ಲ) ಎಂಬ ಸ್ಲೋಗನ್ ಕೂಗಿದ್ದಾರೆ. ಇವರಲ್ಲಿ ಒಬ್ಬಾತ ಡಿ.ಮನೋರಂಜನ್ ಎಂದು ಗುರುತಿಸಲಾಗಿದೆ. ಮನೋರಂಜನ್ ಮೈಸೂರಿನವನು ಹಾಗೂ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಎಂದು ಗೊತ್ತಾಗಿದೆ. ಇನ್ನೊಬ್ಬಾತ ಸಾಗರ್ ಶರ್ಮಾ ಎಂಬ ಹೆಸರಿನವನು. ಲೋಕಸಭೆ ಭದ್ರತಾ ಲೋಪ ಘಟನೆ ಭಳಿಕ ಗ್ಯಾಸ್ ಕ್ಯಾನಿಸ್ಟರ್‌ಗಳೆಂದರೇನು ಎಂಬ ಕುತೂಹಲ ಮೂಡಿದೆ. ತಿಳಿದುಕೊಳ್ಳೋಣ ಬನ್ನಿ
ಯಾವವು ಈ ಬಣ್ಣದ ಗ್ಯಾಸ್ ಡಬ್ಬಗಳು?
ಹೊಗೆ ಡಬ್ಬಗಳು ಅಥವಾ ಹೊಗೆ ಬಾಂಬ್‌ಗಳು ಹೆಚ್ಚಿನ ದೇಶಗಳಲ್ಲಿ ಕಾನೂನುಬದ್ಧವಾಗಿವೆ ಮತ್ತು ಬಹುತೇಕ ಎಲ್ಲಾ ಚಿಲ್ಲರೆ ಮಾರುಕಟ್ಟೆಗಳಲ್ಲಿ ದೊರೆಯುತ್ತವೆ. ಉದ್ದೇಶವನ್ನು ಅವಲಂಬಿಸಿ ಅವುಗಳ ಬಳಕೆಯು ಬದಲಾಗುತ್ತದೆ. ಈ ಕ್ಯಾನ್‌ಗಳನ್ನು ಮಿಲಿಟರಿ ಸಿಬ್ಬಂದಿ ಮತ್ತು ನಾಗರಿಕರು ಕ್ರೀಡಾ ಕಾರ್ಯಕ್ರಮ ಅಥವಾ ಫೋಟೋಶೂಟ್‌ನಲ್ಲಿ ಬಳಸುತ್ತಾರೆ.
ಹೊಗೆ ಗ್ರೆನೇಡ್‌ಗಳಿಂದ ಹೊರಸೂಸುವ ದಪ್ಪ ಹೊಗೆಯಿಂದ ರೂಪುಗೊಂಡ ಹೊಗೆ ಪರದೆಗಳನ್ನು ಮಿಲಿಟರಿ ಮತ್ತು ಕಾನೂನು ಜಾರಿ ಕಾರ್ಯಾಚರಣೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ದಟ್ಟವಾದ ಹೊಗೆ ಮೋಡಗಳು, ಸೈನ್ಯದ ಚಲನೆಯನ್ನು ಅಸ್ಪಷ್ಟಗೊಳಿಸುತ್ತವೆ ಮತ್ತು ಶತ್ರುಗಳ ಕಣ್ಣುಗಳಿಗೆ ಅಗೋಚರವಾಗುವಂತೆ ಮಾಡುತ್ತವೆ. ಮಿಲಿಟರಿ ಕಾರ್ಯಾಚರಣೆಯ ಸಮಯದಲ್ಲಿ ನಿರ್ಣಾಯಕ ರಕ್ಷಣೆಯನ್ನು ಒದಗಿಸುತ್ತವೆ. ವಾಯುದಾಳಿಗಳು ಸೇರಿ ಇತರಾ ಸೇನಾ ಕಾರ್ಯಾಚರಣೆಯಲ್ಲಿ ಹೊಗೆ ಕ್ಯಾನ್‌ಗಳನ್ನು ಬಳಸಲಾಗುತ್ತದೆ.
ಫೋಟೋಗ್ರಫಿ ವೇಳೆ ವಿಶೇಷ ಪರಿಣಾಮಗಳನ್ನು, ಭ್ರಮೆಗಳನ್ನು ಸೃಷ್ಟಿಸಲು ಹೊಗೆ ಕ್ಯಾನ್‌ಗಳು ಸಾಮಾನ್ಯವಾಗಿ ಬಳಸಲಾಗುತ್ತದೆ. ಅದೇ ರೀತಿ, ಕ್ರೀಡೆಗಳಲ್ಲಿ, ವಿಶೇಷವಾಗಿ ಫುಟ್‌ಬಾಲ್, ಹೊಗೆ ಡಬ್ಬಿಗಳನ್ನು ಅಭಿಮಾನಿಗಳು ತಮ್ಮ ಕ್ಲಬ್‌ಗಳ ಬಣ್ಣಗಳನ್ನು ಪ್ರದರ್ಶಿಸಲು ಬಳಸುತ್ತಾರೆ. ಯುರೋಪಿಯನ್ ಫುಟ್‌ಬಾಲ್‌ನಲ್ಲಿ, ಫ್ಯಾನ್ ಕ್ಲಬ್‌ಗಳು ಅಥವಾ ‘ಅಲ್ಟ್ರಾ’ಗಳು ಎದುರಾಳಿ ತಂಡಗಳಿಗೆ ಬೆದರಿಸುವ ವಾತಾವರಣವನ್ನು ಸೃಷ್ಟಿಸಲು ಹೊಗೆ ಕ್ಯಾನ್‌ಗಳು ಮತ್ತು ಪೈರೋಗಳನ್ನು ಬಳಸುತ್ತವೆ.
ಈ ಸುದ್ದಿಯನ್ನೂ ಓದಿ: Security Breach in Lok Sabha: ಪ್ರತಾಪ್ ಸಿಂಹಗೆ ಬುದ್ಧಿ ಹೇಳಿ ಎಂದ ಡಿಕೆಶಿ; ತಿರುಗಿಬಿದ್ದ ಬಿಜೆಪಿ