ನವದೆಹಲಿ: ಲೋಕಸಭೆಯ ಭದ್ರತಾ ಲೋಪ (Security breach in Lok Sabha) ಪ್ರಕರಣದ ಇಬ್ಬರು ಆರೋಪಿಗಳನ್ನು ಸಂಸದರು ಹಿಗ್ಗಾ ಮುಗ್ಗಾ ಥಳಿಸುತ್ತಿರುವ (beaten by MPs) ವಿಡಿಯೋ ವೈರಲ್ ಆಗಿದೆ. ಲೋಕಸಭೆಗೆ ನುಗ್ಗಿದ್ದ ಇಬ್ಬರು ಯುವಕರು ವಿಸಿಟರ್ಸ್ ಗ್ಯಾಲರಿಯಿಂದ ಜಿಗಿದು, ಬಣ್ಣ ಸ್ಮೋಕ್ ಬಾಂಬ್ ಸಿಡಿಸಿ, ಆತಂಕದ ಪರಿಸ್ಥಿತಿಯನ್ನು ಸೃಷ್ಟಿಸಿದ್ದರು. ಈ ವೇಳೆ, ಕೋಲಾರ ಕ್ಷೇತ್ರದ ಬಿಜೆಪಿ ಶಾಸಕ ಮುನಿಸ್ವಾಮಿ (Kolar MP) ಸೇರಿದಂತೆ ಹಲವರು ಇಬ್ಬರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಇಬ್ಬರನ್ನು ಹಿಡಿದು ಥಳಿಸಿದ ಬಳಿಕ ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಲಾಯಿತು.
ಲೋಕಸಭೆ ಒಳನುಗ್ಗುವವನ ಬಳಿಯೇ ಇದ್ದ ಜೆಡಿಯು ಸದಸ್ಯ ರಾಮ್‌ಪ್ರೀತ್ ಮಂಡಲ್, ಆರ್‌ಎಲ್‌ಪಿ ನಾಯಕ ಹನುಮಾನ್ ಬೇನಿವಾಲ್ ಮತ್ತು ಇತರ ಸಂಸದರು ವ್ಯಕ್ತಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಒಳನುಗ್ಗಿದವರನ್ನು ಸಾಗರ್ ಶರ್ಮಾ ಮತ್ತು ಮನೋರಂಜನ್ ಎಂದು ಗುರುತಿಸಲಾಗಿದೆ. ಶರ್ಮಾ ಅವರು ಮೈಸೂರು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಅವರ ಅತಿಥಿಯಾಗಿ ಸಂದರ್ಶಕರ ಗ್ಯಾಲರಿಗೆ ಬಂದಿದ್ದರು.
संसद परिसर में घुसे प्रदर्शनकारी की जमकर कुटाई करते तमाम दलों के माननीय सांसद गण.#Parliament #ParliamentAttack #ParliamentofIndia #ParliamentAttack2001 pic.twitter.com/OA7IE0s0Nm
— Shivam Pratap Singh (@journalistspsc) December 13, 2023
ಲೋಕಸಭೆಯಲ್ಲಿ ಈ ಗದ್ದಲ ನಡೆಯುತ್ತಿದ್ದರೆ, ಸಂಸತ್ತಿನ ಹೊರಗೆ ಯುವಕ ಮತ್ತು ಯುವತಿಯು ಡಬ್ಬಿಗಳಿಂದ ಬಣ್ಣದ ಅನಿಲವನ್ನು ಎರಚಿದರು ಮತ್ತು ಸಂಸತ್ತಿನ ಆವರಣದ ಹೊರಗೆ ಘೋಷಣೆಗಳನ್ನು ಕೂಗಿದರು. ಆರೋಪಿಗಳನ್ನು ಅನ್ಮೋಲ್ ಮತ್ತು ನೀಲಂ ಎಂದು ಗುರುತಿಸಲಾಗಿದೆ. ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ದುಷ್ಕರ್ಮಿಯನ್ನು ಮೊದಲು ಹಿಡಿದದ್ದು ಸಂಸದ ಮುನಿಸ್ವಾಮಿ ಆ್ಯಂಡ್ ಟೀಮ್
ಬಿಗಿ ಭದ್ರತೆಯ ಸಂಸತ್ ಭವನಕ್ಕೆ ದಾಳಿ (Attack on parliament) ಮಾಡಿದ ಇಬ್ಬರು ದುಷ್ಕರ್ಮಿಗಳ ಪೈಕಿ ಒಬ್ಬನನ್ನು ಸೆರೆ ಹಿಡಿದು ಭದ್ರತಾ ಸಿಬ್ಬಂದಿಯ ಕೈಗೆ ಒಪ್ಪಿಸಿದ್ದು ಕೋಲಾರ ಸಂಸದ ಮುನಿಸ್ವಾಮಿ ಮತ್ತು ಇತರರು ಎಂದು ತಿಳಿದುಬಂದಿದೆ. ಬುಧವಾರ ಮಧ್ಯಾಹ್ನ ಲೋಕಸಭಾ ಅಧಿವೇಶನ ನಡೆಯುತ್ತಿದ್ದ ವೇಳೆ ವೀಕ್ಷಕರ ಗ್ಯಾಲರಿಯಿಂದ (Security breach in Loksabha) ಜಿಗಿದ ಸಾಗರ್ ಶರ್ಮಾ (Sagar Sharma) ಮೇಜಿನಿಂದ ಮೇಜಿಗೆ ಹಾರುತ್ತಿದ್ದಂತೆಯೇ ಕೋಲಾರ ಸಂಸದ ಮುನಿಸ್ವಾಮಿ (Kolara MP Muniswami) ಮತ್ತು ಇತರರು ಹಿಡಿದುಕೊಂಡರು ಎನ್ನಲಾಗಿದೆ.
ನಾವು ನಮ್ಮ ಜಾಗದಲ್ಲಿ ಕುಳಿತುಕೊಂಡಿದ್ದಾಗ ಒಬ್ಬ ವ್ಯಕ್ತಿ ಸುಮಾರು 10 ಮೀಟರ್ ಎತ್ತರದ ಪ್ರೇಕ್ಷಕರ ಗ್ಯಾಲರಿಯಿಂದ ಕೆಳಗೆ ಜಿಗಿದು ಮೇಜಿನಿಂದ ಮೇಜಿಗೆ ಹಾರಿ ಸಾಗುತ್ತಿದ್ದ. ಆಗ ನಾನು ಸೇರಿದಂತೆ ಕೆಲವರು ಸೇರಿ ಹಿಡಿದು ಭದ್ರತಾ ಸಿಬ್ಬಂದಿ ಕೈಗೆ ಒಪ್ಪಿಸಿದೆವು. ನಾವು ಹಿಡಿದ ಮೇಲೆಯೇ ಅವನು ತನ್ನ ಕಾಲಿನಲ್ಲಿದ್ದ ಕಲರ್ ಬಾಂಬ್ ಅನ್ನು ಸ್ಫೋಟಿಸಿದ್ದಾನೆ ಎಂದು ಮುನಿಸ್ವಾಮಿ ತಿಳಿಸಿದ್ದಾರೆ.
ನಮಗೆ ಏನಾಗುತ್ತಿದೆ ಎಂದು ತಿಳಿಯಲಿಲ್ಲ. ಆದರೆ ಒಮ್ಮೆಗೇ ಜಾಗೃತರಾಗಿ ನಾವು ಆತನನ್ನು ಹಿಡಿದುಕೊಂಡೆವು. ನಮ್ಮ ಜತೆಗೆ ಸಂಸದರಾದ ಡಿ.ವಿ. ಸದಾನಂದ ಗೌಡರು, ನಳಿನ್ ಕುಮಾರ್ ಕಟೀಲ್ ಕೂಡಾ ಇದ್ದರು ಎಂದು ಅವರು ತಿಳಿಸಿದ್ದಾರೆ.
ನಳಿನ್ ಕುಮಾರ್ ಕಟೀಲ್ ಹೇಳಿದ್ದೇನು?
ಈ ಘಟನೆ ನಡೆದ ಜಾಗದಲ್ಲೇ ಸಂಸದ ನಳಿನ್ ಕುಮಾರ್ ಕಟೀಲ್ ಕೂಡಾ ಇದ್ದರು. ʻʻಒಮ್ಮೆಗೇ ಏನಾಯಿತು ಎಂದು ತಿಳಿಯದಾಯಿತು. ಬಳಿಕ ದುಷ್ಕರ್ಮಿಯನ್ನು ಹಿಡಿಯಲಾಯಿತು. ಬಾಂಬ್ ಸ್ಫೋಟವಾದಾಗ ನಮಗೆ ಒಮ್ಮೆಗೆ ಭಯವಾಯಿತು. ಕೆಲವರಿಗೆ ಉಸಿರುಗಟ್ಟಿದ ಹಾಗಾಯಿತು. ನಾವು ಹಿರಿಯ ಸಂಸದರನ್ನು ಹೊರಗೆ ಕಳುಹಿಸಿದೆವುʼʼ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಇದು ಪಕ್ಕಾ ಭದ್ರತಾ ವೈಫಲ್ಯ ಎಂದ ಡಿವಿಎಸ್
ಸಾಗರ್ ಶರ್ಮಾ ದಾಟಿಕೊಂಡು ಓಡಿದ ಜಾಗದಲ್ಲೇ ಇದ್ದ ಡಿ.ವಿ ಸದಾನಂದ ಗೌಡರ ಪ್ರಕಾರ ಇದು ಪಕ್ಕಾ ಭದ್ರತಾ ವೈಫಲ್ಯ. ಒಮ್ಮೆಗೆ ಸಂಸತ್ ಭವನ ಪ್ರವೇಶಿಸಬೇಕಾದರೆ ಹಲವು ಸುತ್ತಿನ ವಿಚಾರಣೆ ತಪಾಸಣೆ ಎದುರಿಸಬೇಕು. ಹಾಗಿದ್ದರೂ ಆತ ಇಲ್ಲಿಗೆ ಹೇಗೆ ಬಂದ ಎನ್ನುವುದೇ ಪ್ರಶ್ನೆ. ಇಲ್ಲಿ ಬರಬೇಕಾದರೆ ಸಂಸದರೇ ಪಾಸ್ ಕೊಡಬೇಕು. ಬೇರೆ ಯಾವ ದಾರಿಯೂ ಇಲ್ಲ. ಹಾಗಿರುವಾಗ ಇದೊಂದು ಭಯಾನಕ ಘಟನೆ ಎಂದು ಅವರು ಹೇಳಿದ್ದಾರೆ.
22 ವರ್ಷಗಳ ಬಳಿಕ ಅದೇ ದಿನ ದಾಳಿ
2001ರಲ್ಲಿ ಸಂಸದ್ ಭವನಕ್ಕೆ ನಡೆದ ದಾಳಿ ಭಾರಿ ಸುದ್ದಿ ಮಾಡಿತ್ತು. 2001ರ ಡಿಸೆಂಬರ್ 13ರಂದು ಐದು ಉಗ್ರರು ಭದ್ರತಾ ಸಿಬ್ಬಂದಿಗಳನ್ನು ಹೊಡೆದು ಹಾಕಿ ಒಳ ನುಗ್ಗಿದ್ದರು. ಆಗ ಎಂಟು ಭದ್ರತಾ ಸಿಬ್ಬಂದಿಗಳು ಮೃತಪಟ್ಟಿದ್ದರು. ಅವರು ಸಂಸತ್ ಭವನ ಪ್ರವೇಶಿಸುವ ಮೊದಲೇ ಕೊಂದು ಹಾಕಲಾಗಿತ್ತು.
ಈ ಸುದ್ದಿಯನ್ನೂ ಓದಿ: Security breach in Loksabha : ಲೋಕಸಭೆಗೆ ನುಗ್ಗಿದವರಲ್ಲಿ ಒಬ್ಬ ಮೈಸೂರಿನ ಮನೋರಂಜನ್; ಯಾರಿವನು?