ರಾಯ್‌ಪುರ: “ದೇಶದಲ್ಲಿ 2024ರ ಲೋಕಸಭೆ ಚುನಾವಣೆ ವೇಳೆಗೆ ನಕ್ಸಲರನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗುವುದು” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಣೆ ಮಾಡಿದ ಬೆನ್ನಲ್ಲೇ, ಛತ್ತೀಸ್‌ಗಢ, ಜಾರ್ಖಂಡ್ ಹಾಗೂ ತೆಲಂಗಾಣದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಭದ್ರತಾ ಸಿಬ್ಬಂದಿಯು ಬೃಹತ್ ಕಾರ್ಯಾಚರಣೆ (Anti Naxal Operation) ಕೈಗೊಂಡಿದೆ.
ಬೆಟಾಲಿಯನ್ ಆಫ್ ಪೀಪಲ್ಸ್ ಲಿಬರೇಷನ್ ಗೊರಿಲ್ಲಾ ಆರ್ಮಿ (ಪಿಎಲ್‌ಜಿಎ)ದ ನಕ್ಸಲರು ಹಾಗೂ ಇದರ ಮುಖ್ಯಸ್ಥ ಹಿದ್ಮಾನನ್ನು ಹತ್ಯೆ ಮಾಡುವ ದಿಸೆಯಲ್ಲಿ ಭದ್ರತಾ ಸಿಬ್ಬಂದಿಯು ಮೂರು ರಾಜ್ಯಗಳ ಗಡಿಗಳಲ್ಲಿ ಜನವರಿ 11ರಿಂದ ಬೃಹತ್ ಕಾರ್ಯಾಚರಣೆ ಕೈಗೊಂಡಿದ್ದಾರೆ. ಇದು ನಕ್ಸಲರ ಮೇಲೆ ಕೈಗೊಳ್ಳುತ್ತಿರುವ ಸರ್ಜಿಕಲ್ ಸ್ಟ್ರೈಕ್ ಎಂದೇ ವಿಶ್ಲೇಷಿಸಲಾಗುತ್ತಿದೆ.
ಕೋಬ್ರಾ, ಛತ್ತೀಸ್‌ಗಢ ಪೊಲೀಸರು, ತೆಲಂಗಾಣ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಛತ್ತೀಸ್‌ಗಢ, ತೆಲಂಗಾಣ ಹಾಗೂ ಒಡಿಶಾದಲ್ಲಿರುವ ಪ್ರಮುಖ ನೆಲೆಗಳ ಮೇಲೆ ದಾಳಿ ಮಾಡುವುದು ಇವರ ಗುರಿಯಾಗಿದೆ. ಇತ್ತೀಚೆಗೆ ಸಿಆರ್‌ಪಿಎಫ್ ಸಿಬ್ಬಂದಿಯನ್ನು ಗುರಿಯಾಗಿಸಿ ಮಾವೋವಾದಿಗಳು ದಾಳಿ ಮಾಡುತ್ತಿರುವುದು ಹೆಚ್ಚಾದ ಕಾರಣ ಬೃಹತ್ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | Naxalism Free Country | 2024ರ ವೇಳೆಗೆ ದೇಶ ನಕ್ಸಲ್‌ಮುಕ್ತ, ಅಮಿತ್ ಶಾ ಶಪಥ