ನವದೆಹಲಿ: 153 ವರ್ಷಗಳಷ್ಟು ಹಳೆಯದಾದ ದೇಶದ್ರೋಹ ಕಾಯಿದೆಯನ್ನು (Sedition Law) ಕೈ ಬಿಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ. ಆಡಳಿತದಲ್ಲಿರುವ ಪಕ್ಷಗಳು ಈ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂಬ ಆರೋಪ ಸರ್ವೇ ಸಾಮಾನ್ಯ. ಹಾಗಾಗಿ, ಕಾಯ್ದೆಯನ್ನು ರದ್ದು ಮಾಡುವ ಸಂಬಂಧ ಒತ್ತಡ ಹೆಚ್ಚಾಗಿತ್ತು. ಹೀಗಿದ್ದಾಗ್ಯೂ, ಭಾರತೀಯ ಕಾನೂನು ಆಯೋಗ(Law Commission of India)ವು ದೇಶದ್ರೋಹ ಕಾಯ್ದೆಯನ್ನು ರದ್ದು ಮಾಡದಂತೆ ಶಿಫಾರಸು ಮಾಡಿದೆ. ಒಂದೊಮ್ಮೆ ಈ ಕಾಯ್ದೆಯನ್ನು ರದ್ದು ಮಾಡಿದರೆ, ದೇಶದ ಏಕತೆ ಮತ್ತು ಭದ್ರತೆಯ ಮೇಲೆ ಗಂಭೀರ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಹೇಳಿದೆ. ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ರಿತು ರಾಜ್ ಅವಸ್ಥಿ ನೇತೃತ್ವದ ಆಯೋಗವು, ದೇಶದ್ರೋಹ ಕಾಯ್ದೆ ರದ್ದು ಮಾಡುವುದರ ಬದಲಿಗೆ, ಅದರ ಕೆಲವು ಸೆಕ್ಷನ್‌ಗಳನ್ನು ಪರಿಷ್ಕರಿಸುವ ಬಗ್ಗೆ ಒಲವು ತೋರಿಸಿದೆ.
ಕೇದಾರನಾಥ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ 1962ರಲ್ಲಿ ನೀಡಿದ ತೀರ್ಪಿನ ಅನುಗುಣವಾಗಿ ದೇಶದ್ರೋಹ ಕಾಯ್ದೆಯ 124ಎ ಸೆಕ್ಷನ್ ಅನ್ನು ತಿದ್ದುಪಡಿ ಮಾಡಬೇಕು. ಕೇದಾರನಾಥ್ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್, ಹಿಂಸಾಚಾರವನ್ನು ಪ್ರಚೋದಿಸುವ ವಿನಾಶಕಾರಿ ಪ್ರವೃತ್ತಿಯ ದೇಶದ್ರೋಹದ ಷರತ್ತನ್ನು ಆಹ್ವಾನಿಸಲು ಪೂರ್ವಾಪೇಕ್ಷಿತವಾಗಿದೆ ಎಂದು ಒತ್ತಿಹೇಳಿದೆ. ಆದರೆ, ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಲು ದಂಡದ ನಿಭಂದನೆಯನ್ನು ಒತ್ತಿ ಹೇಳುವುದಿಲ್ಲ. ಈ ತೀರ್ಪಿನ ಅನುಗುಣವಾಗಿ ದೇಶದ್ರೋಹ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕು ಎಂದು ಆಯೋಗವು ಶಿಫಾರಸು ಮಾಡಿದೆ.
ಈಗಿರುವ ದೇಶದ್ರೋಹ ಕಾಯ್ದೆಯ ಅನ್ವಯ ಅಪರಾಧಿಗೆ ಗರಿಷ್ಠ ಜೀವಾವಧಿ ಶಿಕ್ಷೆ ಅಥವಾ ಮೂರು ವರ್ಷಗಳ ಶಿಕ್ಷೆ ನೀಡಲು ಅವಕಾಶವಿದ್ದು, ಇದನ್ನು ತಿದ್ದುಪಡಿ ಮಾಡಬೇಕು. ಪರ್ಯಾಯ ಶಿಕ್ಷೆಯಾಗಿ ಗರಿಷ್ಠ 7 ವರ್ಷಗಳಿಗೆ ಜೈಲು ಶಿಕ್ಷೆ ವಿಧಿಸುವ ತಿದ್ದುಪಡಿ ಮಾಡಬೇಕು. ಆ ಮೂಲಕ ಕೋರ್ಟುಗಳಿಗೆ ಶಿಕ್ಷೆ ವಿಧಿಸಲು ಹೆಚ್ಚಿನ ಅವಕಾಶ ಕಲ್ಪಿಸದಂತಾಗುತ್ತದೆ. ಕೃತ್ಯದ ಪ್ರಮಾಣ ಮತ್ತು ಅದರ ಗಂಭೀರತೆಯನ್ನು ಪರಿಗಣಿಸಲು ಶಿಕ್ಷೆ ನೀಡಲು ಅನುಕೂಲವಾಗಲಿದೆ.
ಈ ಸುದ್ದಿಯನ್ನೂ ಓದಿ: Vistara Exclusive | ಬಿಜೆಪಿ ವಿರುದ್ಧ `ದೇಶದ್ರೋಹಿʼ ಅಸ್ತ್ರ: ದೇಶಾದ್ಯಂತ ಕಾಂಗ್ರೆಸ್ ಅಭಿಯಾನ
ಕಾಯ್ದೆಯ 124ಎ ಸೆಕ್ಷನ್‌ನ ಜಾಮೀನು ರಹಿತ ಬಂಧನದ ಅವಕಾಶವನ್ನು ಸರ್ಕಾರವು ಭಿನ್ನ ಧ್ವನಿಗಳನ್ನು ಹತ್ತಿಕ್ಕಲು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತರು ಮತ್ತು ನ್ಯಾಯಶಾಸ್ತ್ರಜ್ಞರು ಆರೋಪಿಸಿದ್ದಾರೆ. ಆದರೆ, 2022ರ ಮೇ 11ರಂದು ಸುಪ್ರೀಂ ಕೋರ್ಟ್‌ನ ಮುಂದುವರಿದ ಮಧ್ಯಂತರ ಆದೇಶದಿಂದಾಗಿ ತಡೆ ಹಿಡಿಯಲಾಗಿದೆ.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.