Site icon Vistara News

Seema Haider: ಮತ್ತೆ ಸುದ್ದಿಯಾದ ಸೀಮಾ ಹೈದರ್‌; ಇದು ಗಡಿಯಾಚೆಗಿನ ಪ್ರೇಮ ಕಥೆಯೋ ಅಥವಾ ಪಾಕ್‌ ಗೂಢಚಾರಿಕೆಯೋ?

Seema Haider

Seema Haider's First Husband From Pakistan Sends Her, Partner Sachin Rs 3 Crore Notice

ನವದೆಹಲಿ:ಆನ್‌ಲೈನ್‌ ಪಬ್‌ ಜಿ ಗೇಮ್‌ ಆಡುವಾಗ ಪರಿಚಯವಾದ ಗ್ರೇಟರ್‌ ನೊಯ್ಡಾದ ಸಚಿನ್‌ ಮೀನಾ (Sachin Meena) ಎಂಬ ಯುವಕನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದು, ಸಚಿನ್‌ ಮೀನಾ ಜತೆ ಇರುವ ಸೀಮಾ ಹೈದರ್‌(Seema Haider) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಸೀಮಾ ಹೈದರ್‌ ಮೊದಲ ಪತಿ ಗುಲಾಂ ಹೈದರ್‌ (Ghulam Haider) ಸೀಮಾ ಬಗ್ಗೆ ಆಘಾತಕಾರಿ ಸಂಗತಿಯೊಂದನ್ನು ಬಹಿರಂಗ ಪಡಿಸಿದ್ದು, ಇದೀಗ ಬಹಳ ಚರ್ಚೆ ಆಗುತ್ತಿದೆ.

ಸೀಮಾ ಪತಿ ಹೇಳಿದ್ದೇನು?

ಸೀಮಾ ಪ್ರೀತಿ ಪ್ರೇಮಕ್ಕಾಗಿ ಭಾರತಕ್ಕೆ ಬಂದಿಲ್ಲ. ಆಕೆಯ ಉದ್ದೇಶ ಬೇರೆಯದ್ದೇ ಇದೆ. ಆಕೆ ಮತ್ತು ಆಕೆ ಕುಟುಂಬಸ್ಥರು ಆಗಾಗ ಪಾಕಿಸ್ತಾನಕ್ಕೆ ಭೇಟಿ ಕೊಡುತ್ತಿರುತ್ತಾರೆ. ಅಲ್ಲದೇ ಅವರು ಪಾಕ್‌ ಸೇನೆ ಜೊತೆ ನಂಟು ಹೊಂದಿದ್ದಾರೆ ಎಂದು ಗುಲಾಂ ಹೇಳಿಕೆಯೊಂದನ್ನು ಕೊಟ್ಟಿದ್ದಾನೆ. ಸೀಮಾ ಆಗಾಗ ಪಾಕಿಸ್ತಾನ ಸೇನಾ ತರಬೇತಿ ಕೇಂದ್ರಕ್ಕೆ ಭೇಟಿ ನೀಡುತ್ತಿರುತ್ತಾಳೆ. ಆಕೆ ಚಿಕ್ಕಪ್ಪ ಗುಲಾಮ್‌ ಅಕ್ಬರ್‌ ಕೂಡ ಪಾಕ್‌ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆತನನ್ನು ಆಗಾಗ ಭೇಟಿ ಆಗುತ್ತಿರುತ್ತಾಳೆ. ಇದನ್ನೆಲ್ಲಾ ನೋಡಿದರೆ ಆಕೆ ಭಾರತಕ್ಕೆ ಹೋಗಿರುವುದು ಗೂಢಾಚಾರಿಣಿಯಾಗೋ ಎಂಬ ಅನುಮಾನ ಹುಟ್ಟಿಕೊಳ್ಳುತ್ತದೆ ಎಂದು ಗುಲಾಮ್‌ ಹೇಳಿದ್ದಾನೆ. ಗುಮಾಮ್‌ ಹೇಳಿಕೆಯನ್ನು ಆತನ ವಕೀಲ ಮೊಮಿನ್‌ ಮಾಲಿಕ್‌ ಎಂದು ಬಹಿರಂಗಪಡಿಸಿದ್ದಾರೆ.

ತಂತ್ರಜ್ಞಾನದ ಬಗ್ಗೆ ಸೀಮಾಗೆ ಅತೀವ ಜ್ಞಾನ

ಸೀಮಾಗೆ ತಂತ್ರಜ್ಞಾನದ ಬಳಕೆ ಬಗ್ಗೆ ಅತೀವ ಜ್ಞಾನ ಇದೆ. ಮೊಬೈಲ್‌ ಫೋನ್‌ ಅನ್ನು ಜೋಡಿಸುವುದು, ಟಿಕ್‌ ಟಾಕ್‌ ಬ್ಯಾನ್‌ ಆದ ಮೇಲೂ ಅದನ್ನು ಬಳಸುವುದು ಹೀಗೆ ತಂತ್ರಜ್ಞಾನದ ಬಗ್ಗೆ ಬಹಳಷ್ಟು ತಿಳಿದುಕೊಂಡಿದ್ದಳು. ಆದರೆ ಆಕೆಗೆ ಪಬ್‌ಜಿ ಆಟ ಬಗ್ಗೆ ತಿಳಿದಿರಲಿಲ್ಲ. ಹೀಗಾಗಿ ಪಬ್‌ ಜಿ ಮೂಲಕ ಸಚಿನ್‌ ಪರಿಚಯ ಆಗಿದೆ ಎಂಬ ಆಕೆಯ ಹೇಳಿಕೆ ಸುಳ್ಳು ಎಂದು ಗುಲಾಮ್‌ ಹೈದರ್‌ ಹೇಳಿದ್ದಾನೆ.

2020ರಲ್ಲಿ ಸೀಮಾ ಹೈದರ್‌ ಹಾಗೂ ಸಚಿನ್‌ ಮೀನಾ ಪಬ್ಜಿ ಆನ್‌ಲೈನ್‌ ಗೇಮ್‌ ಮೂಲಕ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿದೆ. ಕೊನೆಗೆ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದು, ಸೀಮಾ ಹೈದರ್‌ ಅವರು ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿದ್ದ ತಮ್ಮ ಮನೆ ಮಾರಿ, ಅಕ್ರಮವಾಗಿ 2023ರಲ್ಲಿ ಭಾರತವನ್ನು ಪ್ರವೇಶಿಸಿದ್ದಾರೆ. ಅಕ್ರಮವಾಗಿ ಭಾರತ ಪ್ರವೇಶಿಸಿದ ಸೀಮಾ ಹೈದರ್‌ ಅವರಿಗೆ ಆಶ್ರಯ ನೀಡಿದ ಕಾರಣ ಸೀಮಾ ಹೈದರ್‌, ಆಕೆಯ ನಾಲ್ಕು ಮಕ್ಕಳು, ಸಚಿನ್‌ ಮೀನಾ ಹಾಗೂ ಆತನ ತಂದೆಯನ್ನು ಬಂಧಿಸಿ, ಬಿಡುಗಡೆ ಮಾಡಲಾಗಿದೆ. ಸೀಮಾ ಹೈದರ್‌ ಪಾಕಿಸ್ತಾನದ ಗೂಢಚಾರಿ ಇರಬಹುದು ಎಂಬ ಶಂಕೆಯಿಂದ ಎಟಿಎಸ್‌ ವಿಚಾರಣೆ ಕೂಡ ನಡೆಸಿದೆ.

ಇದನ್ನೂ ಓದಿ: Mobile Phone Recharges: ಮೊಬೈಲ್‌ ಗ್ರಾಹಕರಿಗೆ ಬಿಗ್‌ ಶಾಕ್‌! ಮತ್ತೆ ರಿಚಾರ್ಜ್‌ ಮೊತ್ತ ಏರಿಕೆ

ತೀವ್ರ ವಿಚಾರಣೆ ಬಳಿಕ ಸೀಮಾ ಹೈದರ್‌ ಹಾಗೂ ಸಚಿನ್‌ ಮೀನಾ ಅವರು ಒಟ್ಟಿಗೆ ವಾಸಿಸಲು ಅನುಮತಿ ನೀಡಲಾಗಿದೆ. ಸೀಮಾ ಹೈದರ್‌ ಹಾಗೂ ಸಚಿನ್‌ ಮೀನಾ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್‌ ಮೂಲಕವೇ ದೇಶದ ಗಮನ ಸೆಳೆದಿದ್ದಾರೆ. ಇವರ ಪ್ರೇಮ ಪ್ರಕರಣವು ದೇಶಾದ್ಯಂತ ಸುದ್ದಿಯಾಗುವ ಜತೆಗೆ, ಇವರ ವಿಡಿಯೊಗಳು ಕೂಡ ವೈರಲ್‌ ಆಗುತ್ತಿವೆ.

Exit mobile version