Site icon Vistara News

ಸ್ವದೇಶಿ ರಕ್ಷಣಾ ಉತ್ಪಾದನೆಗೆ ಒತ್ತು; 45 ಸಾವಿರ ಕೋಟಿ ರೂ. ಶಸ್ತ್ರಾಸ್ತ್ರಗಳ ಖರೀದಿಗೆ ಒಪ್ಪಿಗೆ

self-reliance in the defence manufacturing sector and approved RS 45,000 crore

ನವದೆಹಲಿ: ರಕ್ಷಣಾ ಪರಿಕರಗಳ ಉತ್ಪಾದನೆಯಲ್ಲಿ ಆತ್ಮ ನಿರ್ಭರ ಸಾಧಿಸುವುದಕ್ಕಾಗಿ (self-reliance in the defence manufacturing) ಭಾರತವು ಹೊಸ ಉಪಕ್ರಮಕ್ಕೆ ಮುಂದಾಗಿದೆ. ಯುದ್ಧ ವಿಮಾನಗಳು(Fighter planes), ಕ್ಷಿಪಣಿಗಳು(Missiles), ಲಘು ಶಸ್ತ್ರಸಜ್ಜಿತ ವಿವಿಧೋದ್ದೇಶ ವಾಹನಗಳು, ಸಮಗ್ರ ಕಣ್ಗಾವಲು ಮತ್ತು ಗುರಿ ವ್ಯವಸ್ಥೆ, ಸಶಸ್ತ್ರ ಪಡೆಗಳನ್ನು ಆಧುನೀಕರಿಸಲು ಸಮೀಕ್ಷೆ ಹಡಗುಗಳು ಸೇರಿದಂತೆ 45,000 ಕೋಟಿ ರೂ. ಮೌಲ್ಯದ ಸೇನಾ ಸಲಕರಣೆಗಳ (military hardware) ಖರೀದಿಗೆ ಭಾರತ ಶುಕ್ರವಾರ ಪ್ರಾಥಮಿಕ ಅನುಮೋದನೆ ನೀಡಿದೆ.

ರಕ್ಷಣಾ ಸ್ವಾಧೀನ ಮಂಡಳಿಯು (DAC), ಸಶಸ್ತ್ರ ಪಡೆಗಳ ಅಗತ್ಯತೆಗಳ ಆಧಾರದ ಮೇಲೆ ಖರೀದಿ ಪ್ರಕ್ರಿಯೆನ್ನು ಆರಂಭಿಸುತ್ತದೆ. ರಕ್ಷಣಾ ಸ್ವಾಧೀನ ಪ್ರಕ್ರಿಯೆಯ ಅಡಿಯಲ್ಲಿ ಸ್ವದೇಶೀಕರಣಕ್ಕಾಗಿ ಎರಡು ಪ್ರಮುಖ ವಿಭಾಗಗಳ (BUY and BUY) ಅಡಿಯಲ್ಲಿ ಮೂರು ಸೇವೆಗಳ ಸ್ವಾಧೀನ ಪ್ರಸ್ತಾವನೆಗಳನ್ನು ಅನುಮೋದಿಸಲಾಗಿದೆ. ಅವು; ಖರೀದಿ-BUY (ಭಾರತೀಯ-ಐಡಿಡಿಎಂ ) ಮತ್ತು ಖರೀದಿ -BUY (ಭಾರತೀಯ)ಗಳಾಗಿವೆ. ಇಲ್ಲಿ ಐಡಿಡಿಎಂ ಅಂದರೆ, ಸ್ಥಳೀಯವಾಗಿ ವಿನ್ಯಾಸಗೊಳಿಸಿದ, ಅಭಿವೃದ್ಧಿಪಡಿಸಿದ ಮತ್ತು ತಯಾರಿಸಿದ ಎಂದರ್ಥ. ಶಸ್ತ್ರಾಸ್ತ್ರಗಳು ಮತ್ತು ವ್ಯವಸ್ಥೆಗಳನ್ನು ಭಾರತೀಯ ಮಾರಾಟಗಾರರಿಂದ ಖರೀದಿಸಲಾಗುವುದು, ಇದು ದೇಶೀಯ ರಕ್ಷಣಾ ಉದ್ಯಮಕ್ಕೆ ಗಣನೀಯ ಉತ್ತೇಜನವನ್ನು ನೀಡುತ್ತದೆ ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಭಾರತವು ತನ್ನ ರಕ್ಷಣಾ ಬಜೆಟ್‌ನ ಒಂದು ಭಾಗವನ್ನು ಸ್ಥಳೀಯವಾಗಿ ತಯಾರಿಸಿದ ಮಿಲಿಟರಿ ಯಂತ್ರೋಪಕರಣಗಳ ಖರೀದಿಸಲು ಮೀಸಲಿಟ್ಟಿದೆ. ಹಿಂದಿನ ಮೂರು ವರ್ಷಗಳಲ್ಲಿ ಕ್ರಮವಾಗಿ 84,598 ಕೋಟಿ, 70,221 ಕೋಟಿ ಮತ್ತು 51,000 ಕೋಟಿಗಳಿಗೆ ಹೋಲಿಸಿದರೆ ಈ ವರ್ಷದ ಬಜೆಟ್‌ನಲ್ಲಿ ದೇಶೀಯ ಸಂಗ್ರಹಣೆಗಾಗಿ ಸುಮಾರು ಒಂದು ಲಕ್ಷ ಕೋಟಿ ರೂಪಾಯಿ ಇರಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Su 30MKI: ಮೇಕ್‌ ಇನ್‌ ಇಂಡಿಯಾಗೆ ಬಲ; ವಾಯುಪಡೆ ಸೇರಲಿವೆ 12 ಸು-30 ಎಂಕೆಐ ಯುದ್ಧವಿಮಾನ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಡಿಎಸಿ ಅನುಮೋದಿಸಿದ ಪ್ರಸ್ತಾವನೆಗಳಲ್ಲಿ 12 ಸುಖೋಯ್-30 ಎಂಕೆಐ ಫೈಟರ್ ಜೆಟ್‌ಗಳು ಮತ್ತು ₹ 11,000 ಕೋಟಿ ಮೌಲ್ಯದ ಉಪಕರಣಗಳನ್ನು ಸರ್ಕಾರಿ ವಿಮಾನ ತಯಾರಕ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ನಿಂದ ಖರೀದಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಾಳಾಗಿರುವ 12 Su-30 MKIಗಳಿಗೆ ಬದಲಿಯಾಗಿ ಯುದ್ಧವಿಮಾನಗಳನ್ನು ಖರೀದಿಸಲಾಗುತ್ತದೆ. ಭಾರತವು ರಷ್ಯಾದಿಂದ 272 Su-30-MKIಗಳನ್ನು ಒಪ್ಪಂದ ಮಾಡಿಕೊಂಡಿತ್ತು, ಅದರಲ್ಲಿ 222 ವಿಮಾನಗಳು ಎಚ್‌ಎಎಲ್‌ನಿಂದ ಪರವಾನಗಿ ನಿರ್ಮಿತವಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version