ನವದೆಹಲಿ: ಹಿರಿಯ ನಾಗರಿಕರ ಉಳಿತಾಯ ಯೋಜನೆ(Senior Citizen Savings Scheme-SCSS)ಯ ಹೂಡಿಕೆ ಮಿತಿಯನ್ನು 15 ಲಕ್ಷ ರೂ.ನಿಂದ 30 ಲಕ್ಷ ರೂ.ವರೆಗೆ ಹೆಚ್ಚಿಸಲಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗಿದೆ.
2023, ಮಾರ್ಚ್ 31ಕ್ಕೆ ಮುಕ್ತಾಯಗೊಳ್ಳಲಿರುವ ತ್ರೈಮಾಸಿಕದಲ್ಲಿ ಸರ್ಕಾರವು ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಬಡ್ಡಿ ದರವನ್ನು ಶೇ.8ಕ್ಕೆ ಏರಿಕೆ ಮಾಡಿದೆ. ಈಗ ಹೂಡಿಕೆ ಮಿತಿಯನ್ನು 15 ಲಕ್ಷ ರೂ.ನಿಂದ 30 ಲಕ್ಷಕ್ಕೆ ಏರಿಸಲು ಮುಂದಾಗಿರುವುದು ಸಂತಸ ತಂದಿದೆ.
ಐತಿಹಾಸಿಕ ಬಜೆಟ್: ಮೋದಿ
ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ 87 ನಿಮಿಷಗಳ ಬಜೆಟ್ ಮಂಡನೆ (Union Budget 2023) ಮಾಡಿದ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಮಾತನಾಡಿದರು. ಹಾಗೇ, ಪ್ರಸಕ್ತ ಸಾಲಿನ ಬಜೆಟ್ನ್ನು ಹೊಗಳಿದರು. ಇದೊಂದು ಐತಿಹಾಸಿಕ ಬಜೆಟ್ ಎಂದು ಹೇಳಿದರು.
ಇದನ್ನೂ ಓದಿ: Union Budget 2023: ಧಾರವಾಡದ ವಿಶಿಷ್ಟ ಕಸೂತಿ ಸೀರೆ ಧರಿಸಿ, ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್
‘ಸ್ವಾತಂತ್ರ್ಯೋತ್ಸವದ ಅಮೃತ ಕಾಲದ ಮೊದಲ ಬಜೆಟ್ ಮಂಡನೆಯಾಗಿದೆ. ಇದು ಭಾರತದ ಅಭಿವೃದ್ಧಿಗೆ ಭದ್ರವಾದ ಬುನಾದಿ ಹಾಕಿಕೊಟ್ಟಿದೆ. ದೇಶದ ಅಭಿವೃದ್ಧಿ ಪಥಕ್ಕೆ ಹೊಸ ಶಕ್ತಿ ತುಂಬುವಂತಿದೆ. ಈ ಸಮಾಜದ ಬಡಜನರು, ಮಧ್ಯಮ ವರ್ಗದ್ದು ಮತ್ತು ಕೃಷಿಕರ ಸೇರಿ ಎಲ್ಲ ವರ್ಗದವರ ಕನಸುಗಳನ್ನೂ ನನಸು ಮಾಡುವಂತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.