Site icon Vistara News

Infosys: ಕಾಗ್ನಿಜೆಂಟ್‌‌ಗೆ ಇನ್ಫೋಸಿಸ್ ಅಧಿಕಾರಿಗಳು ಜಂಪ್‌; ಕಿಡಿ ಕಾರಿದ ಐಟಿ ಕಂಪನಿ

Seniors joined Cognizant and Infosys say unfair employee poaching

ಬೆಂಗಳೂರು: ಕಾಗ್ನಿಜೆಂಟ್ ಕಂಪನಿಯು (Cognizant) ತಮ್ಮ ಕಂಪನಿಯನ್ನು ಉದ್ಯೋಗಿಗಳನ್ನು ಸೆಳೆಯುತ್ತಿದೆ ಎಂದು ಆರೋಪಿಸಿರುವ ಬೆಂಗಳೂರು ಮೂಲದ ಇನ್ಫೋಸಿಸ್(Infosys), ಈ ಕುರಿತು ಕಾಗ್ನಿಜೆಂಟ್‍‌ಗೆ ಪತ್ರ ಬರೆದಿದೆ. ಇನ್ಫೋಸಿಸ್‌ನ ಕೆಲವು ಹಿರಿಯ ಅಧಿಕಾರಿಗಳು (Senior officials) ಕಂಪನಿಯನ್ನು ತೊರೆದು ಕಾಗ್ನಿಜೆಂಟ ಸೇರಿದ ಹಿನ್ನೆಲೆಯಲ್ಲಿ ಈ ಆರೋಪವನ್ನು ಮಾಡಿದೆ ಎಂದು ಈ ಬೆಳವಣಿಗೆಗಳ ಬಗ್ಗೆ ಅರಿವು ಇರುವವರ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ(Unfair Employee Poachin).

ವಿಶೇಷ ಎಂದರೆ, ಇನ್ಫೋಸಿಸ್‌ನ ಪ್ರಮುಖ ಪ್ರತಿಸ್ಪರ್ಧಿಯಾಗಿರುವ ವಿಪ್ರೋ ಕೂಡ ಇದೇ ರೀತಿಯ ಆರೋಪವನ್ನು ಕಾಗ್ನೆಜೆಂಟ್ ವಿರುದ್ಧ ಮಾಡಿತ್ತು. ಇತ್ತೀಚೆಗಷಟೇ ನಾಸ್ಡಾಕ್‌ನಲ್ಲಿ ಲಿಸ್ಟ್ ಆಗಿರುವ ಕಾಗ್ನಿಜೆಂಟ್‌‌ ಕಂಪನಿಗೆ ವಿಪ್ರೋದ ಇಬ್ಬರು ಮಾಜಿ ಹಿರಿಯ ಅಧಿಕಾರಿಗಳು ಸೇರ್ಪಡೆಯಾಗಿದ್ದರು. ಈ ಅಧಿಕಾರಗಳ ವಿರುದ್ಧ ವಿಪ್ರೋ ಮೊಕದ್ದಮೆ ದಾಖಲಿಸಿದೆ. ಈ ಬೆಳವಣಿಗೆ ನಡೆದ ಬೆನ್ನಲ್ಲೇ ಇನ್ಫೋಸಿಸ್ ಕೂಡ ಅಂಥದ್ದೇ ಆರೋಪವನ್ನು ಕಾಗ್ನಿಜೆಂಟ್ ವಿರುದ್ಧ ಮಾಡಿರುವುದು ಮಹತ್ವ ಪಡೆದುಕೊಂಡಿದೆ.

ಸ್ಪರ್ಧಾತ್ಮಕವಲ್ಲದ ಷರತ್ತುಗಳನ್ನು ಜಾರಿಗೊಳಿಸಲಾಗುವುದಿಲ್ಲ ಆದರೆ ಕಾಗ್ನಿಜೆಂಟ್‌ಗೆ ಈ ಸಂವಹನವು ಎಚ್ಚರಿಕೆಯನ್ನು ಒದಗಿಸಲಿದೆ ಎಂಬ ಮೂಲವನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ. ನ್ಯಾಯಸಮ್ಮತವಲ್ಲದ ರೀತಿಯಲ್ಲಿ ಉದ್ಯೋಗಿಗಳನ್ನು ಸೆಳೆಯುತ್ತಿರುವ ಕಾಗ್ನಿಜೆಂಟ್ ವಿರುದ್ಧ ಕೆಲವು ವಾರದ ಹಿಂದೆಯೇ ಮಾಹಿತಿಯನ್ನು ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾಗ್ನಿಜೆಂಟ್ ಸಿಇಒ ರವಿಕುಮಾರ್ ಈ ವರ್ಷದ ಜನವರಿಯಲ್ಲಿ ಅಧಿಕಾರ ವಹಿಸಿಕೊಂಡರು. ಅವರು ಇನ್ಫೋಸಿಸ್ ಮತ್ತು ವಿಪ್ರೋ ಸೇರಿದಂತೆ ಸುಮಾರು 20 ಕಾರ್ಯನಿರ್ವಾಹಕ ಉಪಾಧ್ಯಕ್ಷರು ಮತ್ತು 4 ಹಿರಿಯ ಉಪಾಧ್ಯಕ್ಷರನ್ನು ನೇಮಿಸಿಕೊಂಡಿದ್ದಾರೆ. ಅವರು ಈ ಹಿಂದೆ ಇನ್ಫೋಸಿಸ್‌ನಲ್ಲಿದ್ದರು.

ಈ ಸುದ್ದಿಯನ್ನು ಓದಿ: Infosys: ಇನ್ಫೋಸಿಸ್‌ಗೆ 1.5 ಶತಕೋಟಿ ಡಾಲರ್ ಡೀಲ್ ನಷ್ಟ!

Exit mobile version