Site icon Vistara News

Covishield Vaccine | ಕೊರೊನಾ ಭೀತಿ ಮಧ್ಯೆಯೇ ಕೇಂದ್ರಕ್ಕೆ ಉಚಿತವಾಗಿ 2 ಕೋಟಿ ಕೋವಿಶೀಲ್ಡ್‌ ಡೋಸ್‌ ನೀಡಲು ಸೀರಂ ತೀರ್ಮಾನ

Covishield

We Disclosed All Rare Side-Effects: Covid Vaccine Maker Amid Safety Row

ನವದೆಹಲಿ: ಚೀನಾದಲ್ಲಿ ನಿತ್ಯ ಕೋಟ್ಯಂತರ ಜನರಿಗೆ ಕೊರೊನಾ ದೃಢಪಡುತ್ತಿರುವ ಹಾಗೂ ಸಾವಿರಾರು ಜನ ಮೃತಪಡುತ್ತಿರುವ ಹಿನ್ನೆಲೆಯಲ್ಲಿ ಭಾರತಕ್ಕೂ ನಾಲ್ಕನೇ ಅಲೆಯ ಭೀತಿ ಶುರುವಾಗಿದೆ. ಹಾಗಾಗಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಗ್ಗೂಡಿ ಸೋಂಕು ನಿಗ್ರಹಕ್ಕೆ ಕ್ರಮ ತೆಗೆದುಕೊಳ್ಳುತ್ತಿವೆ. ಲಸಿಕೆ ವಿತರಣೆಗೆ ವೇಗ ನೀಡುತ್ತಿವೆ. ಇದರ ಬೆನ್ನಲ್ಲೇ, ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (SII) ಕಂಪನಿಯು ಕೇಂದ್ರ ಸರ್ಕಾರಕ್ಕೆ ಕೋವಿಶೀಲ್ಡ್‌ (Covishield Vaccine) ಲಸಿಕೆಯ 2 ಕೋಟಿ ಡೋಸ್‌ಗಳನ್ನು ಉಚಿತವಾಗಿ ನೀಡಲು ತೀರ್ಮಾನಿಸಿದೆ.

“ಕೊರೊನಾ ವಿರುದ್ಧದ ಹೋರಾಟಕ್ಕೆ ಸೀರಂ ಸಂಸ್ಥೆಯೂ ಕೈಜೋಡಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಸುಮಾರು 410 ಕೋಟಿ ರೂಪಾಯಿ ಮೌಲ್ಯದ 200 ಕೋಟಿ ಡೋಸ್‌ಗಳನ್ನು ನೀಡಲು ತೀರ್ಮಾನಿಸಲಾಗಿದೆ. ಇದರ ಕುರಿತು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ” ಎಂದು ಸೀರಂ ಸಂಸ್ಥೆಯ ಸರ್ಕಾರ ಮತ್ತು ನಿಯಂತ್ರಣ ವ್ಯವಹಾರಗಳ ವಿಭಾಗದ ನಿರ್ದೇಶಕ ಪ್ರಕಾಶ್‌ ಕುಮಾರ್‌ ಸಿಂಗ್‌ ತಿಳಿಸಿದ್ದಾರೆ.

ಕೊರೊನಾ ನಿರೋಧಕ ಲಸಿಕೆ ವಿತರಣೆಗೆ ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಗೆ (National Immunisation Programme) ಸೀರಂ 170 ಕೋಟಿ ಡೋಸ್‌ ನೀಡಿದೆ. ದೇಶದಲ್ಲಿ ಕೇವಲ ಶೇ.27ರಷ್ಟು ವಯಸ್ಕರು ಬೂಸ್ಟರ್‌ ಡೋಸ್‌ ಪಡೆದಿದ್ದು, ಇದಕ್ಕೆ ವೇಗ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ರಾಜ್ಯಗಳು ಕೂಡ ಲಸಿಕೆ ವಿತರಣೆಗೆ ಕ್ರಮ ತೆಗೆದುಕೊಳ್ಳುತ್ತಿವೆ. ತಪಾಸಣೆ, ಮಾಸ್ಕ್‌ ಕಡ್ಡಾಯ ಸೇರಿ ಹಲವು ಸೂಚನೆ ನೀಡಿವೆ.

ಇದನ್ನೂ ಓದಿ | Coronavirus | ಕೋವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆ ಕೊರತೆ; ಕಾರ್ಬಿವ್ಯಾಕ್ಸ್‌ ಬೂಸ್ಟರ್‌ ಡೋಸ್‌ಗೆ ಜನ ಹಿಂದೇಟು

Exit mobile version