ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ಅಖಿಲ ಭಾರತ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ (AIIMS) ಭಾರಿ ಪ್ರಮಾಣದ ಸರ್ವರ್ ಸಮಸ್ಯೆಯುಂಟಾಗಿದ್ದು (Server Issue at AIIMS), ರೋಗಿಗಳು ಪರದಾಡುವಂತಾಗಿದೆ. ಏಕಾಏಕಿ ಸರ್ವರ್ ಡೌನ್ ಆದ ಹಾಗೂ ತುಂಬ ಹೊತ್ತಾದರೂ ಸಮಸ್ಯೆ ಬಗೆಹರಿಸಲು ಸಾಧ್ಯವಾಗದ ಕಾರಣ ಹ್ಯಾಕರ್‌ಗಳು ಮಾಲ್ವೇರ್ (ವೈರಸ್) ದಾಳಿ ಮಾಡಿರಬಹುದು ಎಂದು ಶಂಕಿಸಲಾಗಿದೆ. ಹಾಗೆಯೇ, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
“ಬುಧವಾರ ಬೆಳಗ್ಗೆ 7 ಗಂಟೆಯಿಂದಲೇ ಸರ್ವರ್ ಸಮಸ್ಯೆಯುಂಟಾಗಿದೆ. ಇದರಿಂದಾಗಿ ಹೊರರೋಗಿಗಳು ಹಾಗೂ ಒಳರೋಗಿಗಳ ವಿಭಾಗದಲ್ಲಿ ಡಿಜಿಟಲ್ ಹಾಸ್ಪಿಟಲ್ ಸೇವೆಯಲ್ಲಿ ವ್ಯತ್ಯಯವಾಗಿದೆ. ಹಾಗೆಯೇ, ಸ್ಮಾರ್ಟ್‌ಲ್ಯಾಬ್, ಬಿಲ್ಲಿಂಗ್, ರಿಪೋರ್ಟ್ ಜನರೇಷನ್, ಅಪಾಯಿಂಟ್‌ಮೆಂಟ್ ಸಿಸ್ಟಮ್ ಸೇರಿ ಹಲವು ರೀತಿಯಲ್ಲಿ ತೊಂದರೆಯಾಗಿದೆ. ಇದರಿಂದ ಗ್ರಾಹಕರೂ ಪರದಾಡುವಂತಾಗಿದೆ” ಎಂದು ಏಮ್ಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
“ನ್ಯಾಷನಲ್ ಇನ್‌ಫಾರ್ಮ್ಯಾಟಿಕ್ಸ್ ಸೆಂಟರ್ (ಎನ್‌ಐಸಿ) ಅಧಿಕಾರಿಗಳು ಇದರ ಕುರಿತು ಹೆಚ್ಚಿನ ತನಿಖೆ ಹಾಗೂ ಪರಿಶೀಲನೆ ನಡೆಸುತ್ತಿದ್ದಾರೆ. ರ‍್ಯಾನ್ಸಮ್‌ವೇರ್ (Ransomware) ದಾಳಿಯಾಗಿರುವ ಕುರಿತು ಶಂಕೆ ವ್ಯಕ್ತಪಡಿಸಲಾಗಿದೆ. ತನಿಖೆಯ ಬಳಿಕವೇ ನಿಖರ ಮಾಹಿತಿ ಲಭ್ಯವಾಗಲಿದೆ.
ಇದನ್ನೂ ಓದಿ | AIIMS Delhi | ಕಲ್ಯಾಣ ಕರ್ನಾಟಕದ ಕೀರ್ತಿ ಹೆಚ್ಚಿಸಿದ ಡಾ. ಶ್ರೀನಿವಾಸ; ಈಗ ದೆಹಲಿಯ ಏಮ್ಸ್ ನಿರ್ದೇಶಕ