ಅಹಮದಾಬಾದ್ : ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶದ ಟ್ರೆಂಡ್ ಪ್ರಕಾರ ಆಮ್ ಆದ್ಮಿ ಪಾರ್ಟಿ ಆರು ಸ್ಥಾನಗಳ ಮುನ್ನಡೆಯೊಂದಿಗೆ ನೆಲೆ ಕಂಡುಕೊಂಡಿದೆ. ಆದಾಗ್ಯೂ ಸಿಎಂ ಅಭ್ಯರ್ಥಿ ಇಸಾದುನ್ ಗಢವಿಗೆ ಸೋಲಿನ ಭೀತಿ ಎದುರಾಗಿದೆ.
ಕಂಬಾಲಿಯಾ ಕ್ಷೇತ್ರದಿಂದ ಸ್ಪರ್ಧಿಸಿರುವ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಮುಲಾಭಾಯಿ ಬೇರಾ ಅವರಿಗಿಂತ 7956 ಮತಗಳಿಂದ ಹಿನ್ನಡೆ ಅನುಭವಿಸಿದ್ದಾರೆ. ಜನಪ್ರಿಯ ಟಿವಿ ನಿರೂಪಕರಾಗಿರುವ ಇಸಾದುನ್ ಅವರು ಗೆದ್ದೇ ಗೆಲ್ಲುತ್ತಾರೆಂಬ ವಿಶ್ವಾಸದಲ್ಲಿ ಆಪ್ ಪಕ್ಷ ಅವರನ್ನು ಸಿಎಂ ಅಭ್ಯರ್ಥಿ ಎಂಬುದಾಗಿ ಘೋಷಿಸಿತ್ತು.
ಗುಜರಾತ್ನಲ್ಲಿ ಬಿಜೆಪಿ ಐತಿಹಾಸಿಕ ಸಾಧನೆ ಮಾಡಿದ್ದು, ೧೫೫ ಕ್ಷೇತ್ರಗಳಲ್ಲಿ ಮುನ್ನಡೆ ಹೊಂದಿದ್ದಾರೆ. ಕಾಂಗ್ರೆಸ್ ೧೮ ಸ್ಥಾನದಲ್ಲಿ ಮುನ್ನಡೆ ಹೊಂದಿದ್ದು, ಆಪ್ ೬ ಸ್ಥಾನ ಮುನ್ನಡೆ ಪಡೆದುಕೊಂಡಿದ್ದಾರೆ. ಪಕ್ಷೇತರರು ೩ರಲ್ಲಿ ಮುನ್ನಡೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ | Gujarat Election Results | ಗುಜರಾತ್ನಲ್ಲಿ ಮೋದಿ ಸುನಾಮಿ, ಸತತ 7ನೇ ಬಾರಿಗೆ ಅಧಿಕಾರದತ್ತ ಬಿಜೆಪಿ, ಕಾಂಗ್ರೆಸ್ ಧೂಳೀಪಟ