Site icon Vistara News

Uttarakhand Accident: ಜನ ನಿದ್ದೆಯಲ್ಲಿದ್ದಾಗಲೇ ಕಣ್ಣು ಬಿಟ್ಟ ಯಮ; ಬಸ್‌ ಪ್ರಪಾತಕ್ಕೆ ಬಿದ್ದು 7 ಮಂದಿ ಸಾವು

Uttarakhand Accident

Seven die after bus falls into ditch in Uttarakhand

ಡೆಹ್ರಾಡೂನ್:‌ ಉತ್ತರಾಖಂಡದಲ್ಲಿ ವಾಸಿಸುವವರಿಗೆ ಬಹುತೇಕ ಸಂದರ್ಭದಲ್ಲಿ ನಿಸರ್ಗವೇ ಮುಳುವಾಗುತ್ತದೆ. ಮೇಘಸ್ಫೋಟ, ಭೂಕಂಪ, ದಿಢೀರ್‌ ಪ್ರವಾಹ, ಕಣಿವೆ ಇರುವುದರಿಂದ ಬಸ್‌ಗಳ ಅಪಘಾತ ಸೇರಿ ಹಲವು ದುರಂತಗಳು ಉತ್ತರಾಖಂಡದಲ್ಲಿ ಸಾಮಾನ್ಯ ಎಂಬಂತಾಗಿದೆ. ಇದಕ್ಕೆ ನಿದರ್ಶನ ಎಂಬಂತೆ ಉತ್ತರಾಖಂಡದ ನೈನಿತಾಲ್‌ನಲ್ಲಿ (Nainital) ಬಸ್‌ ಕಂದಕಕ್ಕೆ ಬಿದ್ದು (Uttarakhand Accident) ಏಳು ಜನ ಮೃತಪಟ್ಟಿದ್ದಾರೆ.

ನೈನಿತಾಲ್‌ನ ಘಾಟ್‌ಗಡ್‌ ಬಳಿಯ ಕಲಧುಂಗಿ ರಸ್ತೆ ಮಾರ್ಗವಾಗಿ ಭಾನುವಾರ (ಅಕ್ಟೋಬರ್‌ 8) ರಾತ್ರಿ ಸಂಚರಿಸುತ್ತಿದ್ದ ಬಸ್‌ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ. ಬಸ್‌ನಲ್ಲಿ ಸುಮಾರು 35 ಜನ ಪ್ರಯಾಣಿಸುತ್ತಿದ್ದರು. ಇವರಲ್ಲಿ ಏಳು ಜನ ಮೃತಪಟ್ಟರೆ, ಇನ್ನೂ 25 ಜನರನ್ನು ರಕ್ಷಿಸಲಾಗಿದೆ. ಬಸ್‌ನಲ್ಲಿದ್ದವರನ್ನು ರಕ್ಷಣೆ ಮಾಡಲು ಸಿಬ್ಬಂದಿಯು ತಡರಾತ್ರಿಯೂ ಕಾರ್ಯಾಚರಣೆ ನಡೆಸಿದೆ ಎಂದು ತಿಳಿದುಬಂದಿದೆ.

ಖಾಸಗಿ ಬಸ್‌ ಪ್ರಪಾತಕ್ಕೆ ಬಿದ್ದಿದೆ ಎಂಬ ಸುದ್ದಿ ತಿಳಿಯುತ್ತಲೇ ರಾಜ್ಯ ವಿಪತ್ತು ನಿರ್ವಹಣಾ ಪಡೆಯು (SDRF) ಸ್ಥಳಕ್ಕೆ ಆಗಮಿಸಿ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿದ ಕಾರಣ ಬಸ್‌ನಲ್ಲಿದ್ದ ಹೆಚ್ಚಿನ ಜನರನ್ನು ರಕ್ಷಿಸಲು ಸಾಧ್ಯವಾಗಿದೆ ಎಂದು ಮೂಲಗಳು ತಿಳಿಸಿವೆ. “ಇದುವರೆಗೆ 25 ಜನರನ್ನು ರಕ್ಷಿಸಲಾಗಿದ್ದು, ಏಳು ಜನರ ಶವಗಳನ್ನು ಹೊರತೆಗೆಯಲಾಗಿದೆ” ಎಂದು ನೈನಿತಾಲ್‌ ಎಸ್‌ಎಸ್‌ಪಿ ಪಿ.ಎನ್.ಮೀನಾ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Bus Accident: ಪ್ರವಾಸಕ್ಕೆ ಹೊರಟಿದ್ದ ಬಸ್‌ ಪ್ರಪಾತಕ್ಕೆ ಬಿದ್ದು 8 ಜನರ ದುರ್ಮರಣ, ಹಲವರ ಸ್ಥಿತಿ ಗಂಭೀರ!

ಕೆಲ ದಿನಗಳ ಹಿಂದಷ್ಟೇ ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿತ್ತು. ನೀಲಗಿರಿ ಜಿಲ್ಲೆ ಕುನೂರು ತಾಲೂಕು ಮರಪಲಂ ಗ್ರಾಮದ ಬಳಿ ಪ್ರವಾಸಕ್ಕೆ ಹೊರಟಿದ್ದ ಬಸ್‌ ಪ್ರಪಾತಕ್ಕೆ ಉರುಳಿ, ಇಬ್ಬರು ಚಾಲಕರು ಸೇರಿ ಎಂಟು ಮಂದಿ ದಾರುಣವಾಗಿ ಮೃತಪಟ್ಟಿದ್ದರು. ಅಪಘಾತದಲ್ಲಿ ಸುಮಾರು 35 ಮಂದಿ ಗಾಯಗೊಂಡಿದ್ದರು.

Exit mobile version