Site icon Vistara News

Self-Harming : 3 ಮಕ್ಕಳು ಸೇರಿ ಒಂದೇ ಕುಟುಂಬದ 7 ಮಂದಿ ಸಾಮೂಹಿಕ ಆತ್ಮಹತ್ಯೆ

Crime news

ಸೂರತ್:(ಗುಜರಾತ್​): ಪೀಠೋಪಕರಣ ಉದ್ಯಮಿ ಸೇರಿದಂತೆ ಒಂದೇ ಕಟುಂಬದ ಏಳು ಮಂದಿ ಆತ್ಮಹತ್ಯೆ (Self-Harming) ಮಾಡಿಕೊಂಡ ಘಟನೆ ಇಲ್ಲಿನ ಪಾಲನ್ಪುರ್ ಜಕತ್ನಾಕಾದಲ್ಲಿ ಶನಿವಾರ ನಡೆದಿದೆ. ಮೃತಪಟ್ಟವರಲ್ಲಿ ಮೂವರು ಮಕ್ಕಳೂ ಇದ್ದಾರೆ. ಘಟನೆ ಬಳಿಕ ಸ್ಥಳೀಯವಾಗಿ ಆತಂಕ ಹೆಚ್ಚಾಗಿದೆ. ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಕುಟುಂಬವು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಆತ್ಮಹತ್ಯೆ ಮಾಡಿಕೊಂಡ ಉದ್ಯಮಿಯನ್ನು ಮನೀಶ್ ಸೋಲಂಕಿ ಎಂದು ಗುರುತಿಸಲಾಗಿದೆ. ಪತ್ನಿ ರೀಟಾ, ತಂದೆ ಕಾನು, ತಾಯಿ ಶೋಭಾ ಮತ್ತು ಮೂವರು ಮಕ್ಕಳಾದ ದಿಶಾ, ಕಾವ್ಯಾ ಮತ್ತು ಕುಶಾಲ್ ಆತ್ಮಹತ್ಯೆ ಮಾಡಿಕೊಂಡವರು . ಸಾಮೂಹಿಕ ಆತ್ಮಹತ್ಯೆ ನಡೆದ ಅದಾಜನ್ ಪ್ರದೇಶದ ಸಿದ್ದೇಶ್ವರ್ ಅಪಾರ್ಟ್ಮೆಂಟ್​ನಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಸೋಲಂಕಿ ಅವರೊಂದಿಗೆ ಸುಮಾರು 25 ಬಡಗಿಗಳು ಮತ್ತು ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ಸ್ಥಳೀಯರು ಹೇಳದ್ದಾರೆ. ಈ ಕಾರ್ಮಿಕರು ಶನಿವಾರ ಬೆಳಿಗ್ಗೆ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಅವರು ಫೋನ್ ಕರೆಗೆ ಉತ್ತರಿಸಿರಲಿಲ್ಲ. ಅವರ ಮನೆಗೆ ಹೋದಾಗಲೂ ಬಾಗಿಲು ತೆರೆಯಲಿಲ್ಲ. ಸ್ಥಳೀಯ ನಿವಾಸಿಗಳು ಮನೆಯ ಹಿಂಭಾಗದ ಕಿಟಕಿಯನ್ನು ಒಡೆದು ಮನೆಯೊಳಗೆ ಪ್ರವೇಶಿಸಿದ್ದರು. ವೇಳೆ ಆತ್ಮಹತ್ಯೆ ಮಾಹಿತಿ ಗೊತ್ತಾಗಿದೆ.

ಈ ಸುದ್ದಿಯನ್ನೂ ಓದಿ : Mukesh Ambani:‌ ಮುಕೇಶ್‌ ಅಂಬಾನಿಗೆ ಮತ್ತೆ ಜೀವ ಬೆದರಿಕೆ; ದುಷ್ಕರ್ಮಿ ‘ಖಾನ್’‌ ಬೇಡಿಕೆ ಏನು?

ಪೊಲೀಸರು ಇನ್ನೂ ಆತ್ಮಹತ್ಯೆಗೆ ನಿಖರವಾದ ವಿವರಗಳನ್ನು ಹೇಳಿಲ್ಲ. ಆದರೆ ಅವರು ಮನೆಯಿಂದ ಡೆತ್​ನೋಟ್​ ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ಸೋಲಂಕಿ ತಾವು ಎದುರಿಸುತ್ತಿದ್ದ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಆದರೆ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ ಎಂದು ಹೇಳಲಾಗಿದೆ. ಸೋಲಂಕಿ ಪೀಠೋಪಕರಣಗಳ ಸರಬರಾಜು ಮಾಡಲು ಕೆಲವು ದೊಡ್ಡ ಒಪ್ಪಂದಗಳನ್ನು ಹೊಂದಿದ್ದರು. ಆದರೆ ದೀರ್ಘಕಾಲದಿಂದ ಕೆಲವು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಸ್ಥಳಕ್ಕೆ ತಲುಪಿದ ಕುಟುಂಬದ ಸಂಬಂಧಿಕರು ಯಾವುದೇ ವಿವರಗಳನ್ನು ನೀಡಿಲ್ಲ.

ಕಬಡ್ಡಿ ಆಟಗಾರ್ತಿ ಆತ್ಮಹತ್ಯೆ

ನೆಲಮಂಗಲ: ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ್ತಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಆತ್ಮಹತ್ಯೆ (Kabaddi Player ends life) ಮಾಡಿಕೊಂಡಿದ್ದಾರೆ. ಖ್ಯಾತ ಕಬಡ್ಡಿ ಆಟಗಾರ್ತಿ ಧನಲಕ್ಷ್ಮಿ (25) (kabaddi player Dhanalakshmi) ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು.

ನೆಲಮಂಗಲ ತಾಲೂಕಿನ ಅರಶಿನ ಕುಂಟೆಯ ಆದರ್ಶ ನಗರದಲ್ಲಿ ತಮ್ಮ ತಂದೆ-ತಾಯಿ ಜತೆ ವಾಸಿಸುತ್ತಿದ್ದ ಧನಲಕ್ಷ್ಮಿ ಅವರು ಮನೆಯಲ್ಲೇ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಅವರು ಯಾವುದೇ ಆತ್ಮಹತ್ಯೆ ಟಿಪ್ಪಣಿ ಬರೆದಿಟ್ಟಿಲ್ಲ. ಹೀಗಾಗಿ ಸಾವಿನ ನಿಜವಾದ ಕಾರಣ ಸ್ಪಷ್ಟವಾಗಿಲ್ಲ.

ಧನಲಕ್ಷ್ಮಿ ಅವರು ಮೂಲತಃ ಹಾಸನ ಜಿಲ್ಲೆಯ ಚನ್ನರಾಯ ಪಟ್ಟಣದ ಕೆ. ತಿಮ್ಮಲಾಪುರದವರು. ಕಳೆದ 5 ವರ್ಷದಿಂದ ನೆಲಮಂಗಲದ ಅರಿಶಿನಕುಂಟೆಯ ಆದರ್ಶ ನಗರದಲ್ಲಿ ವಾಸವಾಗಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂರು ಬಾರಿ ಕಬಡ್ಡಿ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದರು.

ಮೈಸೂರು ದಸರಾ ನೋಡಿಕೊಂಡು ಬಂದಿದ್ದರು
ಧನಲಕ್ಷ್ಮಿ ಅವರ ಕಬಡ್ಡಿ ಕ್ರೀಡೆ, ಶಿಕ್ಷಣ ಮತ್ತು ವೃತ್ತಿ ಬದುಕಿಗೆ ಮನೆಯವರು ತುಂಬ ಚೆನ್ನಾಗಿ ಸ್ಪಂದಿಸಿದ್ದರು. ಧನಲಕ್ಷ್ಮಿ ಅವರು ಮಾಸ್ಟರ್ಸ್‌ ಇನ್‌ ಕಂಪ್ಯೂಟರ್‌ ಅಪ್ಲಿಕೇಶನ್ಸ್‌ ಅಧ್ಯಯನ ಮಾಡಬೇಕು ಎಂಬ ಕಾರಣಕ್ಕಾಗಿ ಬೆಂಗಳೂರಿಗೆ ಬಂದಾಗ ಇಡೀ ಕುಟುಂಬ ಶಿಫ್ಟ್‌ ಆಗಿತ್ತು. ಅದಾದ ಬಳಿಕ ಅವರು ಕಾಡುಗೋಡಿಯಲ್ಲಿರುವ ನೆಕ್ಸ್ಟ್‌ ಸ್ಟೇ ಖಾಸಗಿ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿದ್ದರು.

ಮೂರು ದಿನಗಳ ಹಿಂದೆ ಅವರು ಮೈಸೂರಿಗೆ ಜಂಬೂ ಸವಾರಿ ನೋಡಲು ಫ್ರೆಂಡ್ಸ್‌ ಜತೆ ಹೋಗಿದ್ದರು. ಅಲ್ಲಿಂದ ಖುಷಿಖುಷಿಯಾಗೇ ಮರಳಿದ್ದರು. ಗುರುವಾರ ಮುಂಜಾನೆ ಖುಷಿ ಖುಷಿಯಾಗಿಯೇ ಇದ್ದ ಅವರು ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ತಂದೆ ಮತ್ತು ತಮ್ಮ ಮನೆಯಲ್ಲಿದ್ದಾಗಲೇ ಆಕೆ ಹೀಗೆ ಪ್ರಾಣ ಕಳೆದುಕೊಂಡಿದ್ದಾರೆ. ಅವರನ್ನು ನೇಣಿನಿಂದ ಇಳಿಸಿ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅದಕ್ಕಿಂತ ಮೊದಲೇ ಅವರು ಪ್ರಾಣ ಕಳೆದುಕೊಂಡಿದ್ದರು.

ಖುಷಿಯಾಗಿಯೇ ಇದ್ದ ಧನಲಕ್ಷ್ಮಿ ಯಾಕೆ ಹೀಗೆ ಮಾಡಿಕೊಂಡರು ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ. ಅದಕ್ಕೆ ಉತ್ತರ ಹೇಳಬಹುದಾದ ಡೆತ್‌ ನೋಟ್‌ಗಳೇನೂ ಮನೆಯಲ್ಲಿ ಸಿಕ್ಕಿಲ್ಲ. ಹೀಗಾಗಿ ಸಾವಿನ ಕಾರಣ ಸದ್ಯಕ್ಕೆ ನಿಗೂಢವಾಗಿದೆ.

Exit mobile version