Site icon Vistara News

Himachal Pradesh: ನೋಡ ನೋಡುತ್ತಲೇ ಕುಸಿದು ಹೋದ ಮನೆಗಳು! ಹಿಮಾಚಲದಲ್ಲಿ ಮೃತರ ಸಂಖ್ಯೆ 60ಕ್ಕೇರಿಕೆ

Landslide in Himachal Pradesh

ನವದೆಹಲಿ: ಸತತ ಮಳೆಯಿಂದ ಹಿಮಾಚಲ ಪ್ರದೇಶದಲ್ಲಿ (Himachal Pradesh) ಭೂಕುಸಿತ ಸಂಭವಿಸುತ್ತಿದೆ(Landslide). ಮಂಗಳವಾರ ಭೂಕುಸಿತದ ವೇಳೆ ಕಸಾಯಿಖಾನೆ, ಹಲವು ಮನೆಗಳು ಸೇರಿ ಅನೇಕ ಕಟ್ಟಡಗಳು ಶಿಮ್ಲಾದಲ್ಲಿ (Shimla District) ನೆಲಸಮವಾಗಿವೆ. ಸ್ಥಳೀಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಎನ್‌ಡಿಆರ್‌ಎಫ್ (NDRF Team) ಮತ್ತು ಎಸ್‌ಡಿಆರ್‌ಎಫ್ (SDRF Team) ತಂಡಗಳು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿವೆ. ಸಾಕಷ್ಟು ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿವೆ. ಮಳೆ ಘಟನೆಗಳಿಗೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶದಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 60ಕ್ಕೆ ಏರಿಕೆಯಾಗಿದೆ.

ಸಂಜೆ 5 ಗಂಟೆಗೆ ಸುಮಾರು 5-6 ಮನೆಗಳು ಕುಸಿದಿವೆ ಎಂದು ನಮಗೆ ಮಾಹಿತಿ ಬಂದಿತು. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡಗಳು ಸ್ಥಳದಲ್ಲಿವೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಶಿಮ್ಲಾದ ಡೆಪ್ಯೂಟಿ ಕಮಿಷನರ್ ಆದಿತ್ಯ ನೇಗಿ ಅವರು ತಿಳಿಸಿದ್ದಾರೆ. ಈ ಘಟನೆಯಲ್ಲಿ ಈವರೆಗೆ ಇಬ್ಬರು ಮೃತಪಟ್ಟಿದ್ದಾರೆಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದೇರ್ ಸಿಂಗ್ ಸುಖು ಅವರು ತಿಳಿಸಿದ್ದಾರೆ.

Himachal Pradesh: ಹಿಮಾಚಲ ಪ್ರದೇಶದಲ್ಲಿ ಭೂಕುಸಿತ

ಭೂಕುಸಿತ ಸಂಭವಿಸಿದ ಸ್ಥಳದಲ್ಲಿರುವ ಮನೆಗಳಲ್ಲಿರುವ ಜನರು ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದಾರೆ. ನಮ್ಮ ಮನೆಯ ಸಮೀಪವೇ ಭೂ ಕುಸಿತ ಸಂಭವಿಸಿದ್ದರಿಂದ ನಾವು ಸುರಕ್ಷತೆಯ ದೃಷ್ಟಿಯಿಂದ ಹೊರ ಗೆ ಬಂದಿದ್ದೇವೆ ಎಂದು ಸ್ಥಳೀಯರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಭೂಕುಸಿತಕ್ಕೆ ಸಮೀಪದ ಕಸಾಯಿಖಾನೆ ಕೂಡ ಕುಸಿದಿದೆ.

ಈ ಸುದ್ದಿಯನ್ನೂ ಓದಿ: Himachal Pradesh: ಹಿಮಾಚಲದಲ್ಲಿ ಮೇಘಸ್ಫೋಟಕ್ಕೆ ಏಳು ಜನ ಬಲಿ; ಪ್ರವಾಹಕ್ಕೆ ಕೊಚ್ಚಿಹೋದ ಬದುಕು

ಮನೆಗಳ ಗೋಡೆಗಳಿಗೆ ಬಿರುಕು ಹೆಚ್ಚುತ್ತಿದ್ದಂತೆ ಮನೆಗಳನ್ನು ತೊರೆಯುವಂತೆ ಸ್ಥಳೀಯರಿಗೆ ಸೂಚಿಸಲಾಯಿತು ಎಂದು ಸ್ಥಳೀಯ ಕೌನ್ಸಿಲರ್ ಅವರು ಹೇಳಿದ್ದಾರೆ. ಕೆಲವು ಮನೆಗಳಿಗೆ ಬಿರುಕು ಮೂಡುತ್ತಿರುವುದನ್ನು ನಾವು ಗಮನಿಸಿದೆವು. ಈ ಸ್ಥಳಕ್ಕೆ ಬಹುತೇಕರು ಆಗಮಿಸಿದರು. ಈ ಬಿರುಕುಗಳು ಹೆಚ್ಚುತ್ತಿರುವುದನ್ನು ನಾವು ಗಮನಿಸಿದೆವು ಮತ್ತು ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸ್ಥಳೀಯರಿಗೆ ನಾವು ವಿನಂತಿಸಿಕೊಂಡೆವು. ಆಗ ತಕ್ಷಣವೇ ಅನೇಕ ಮನೆಗಳು ಭೂಕುಸಿತಕ್ಕೆ ನೆಲಸಮವಾದವು. ಸುಮಾರು 20ರಿಂದ 15 ಮನೆಗಳನ್ನು ಖಾಲಿ ಮಾಡಿದ್ದೇವೆ ಮತ್ತು 50ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಿದ್ದೇವೆ. ಅವರನ್ನೆಲ್ಲ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದೇವೆ ಎಂದು ಕೌನ್ಸಿಲರ್ ಬಿಟ್ಟು ಪನ್ನಾ ಅವರು ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.

ಹಿಮಾಚಲ ಪ್ರದೇಶದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆ, ಮೇಘ ಸ್ಫೋಟ ಹಾಗೂ ಭೂಕುಸಿತಕ್ಕೆ ಈವರೆಗೆ 60 ಜನರು ಮೃತಪಟ್ಟಿದ್ದಾರೆ. ಈ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಸೋಲನ್, ಶಿಮ್ಲಾ, ಮಂಡಿ ಮತ್ತು ಹಮಿಪುರ ಜಿಲ್ಲೆಗಳಲ್ಲಿ ವ್ಯಾಪಕ ಮಳೆಗೆ ತೀವ್ರ ಸಂತ್ರಸ್ತ ಜಿಲ್ಲೆಗಳಾಗಿವೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version