Site icon Vistara News

ಲೈಂಗಿಕ ದಂಧೆ ಜಾಲ ಭೇದಿಸಿದ ಮುಂಬೈ ಪೊಲೀಸ್, ನಟಿ ಆರತಿ ಮಿತ್ತಲ್ ಬಂಧನ

sex racket busted and actress aarti mittal arrested by mumbai crime branch

ಮುಂಬೈ, ಮಹಾರಾಷ್ಟ್ರ: ಮುಂಬೈ ಕ್ರೈಮ್ ಬ್ರ್ಯಾಂಚ್ ಪೊಲೀಸರು (Mumbai Crime Branch Police) ಬಾಲಿವುಡ್ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿದ್ದ ಸೆಕ್ಸ್ ರಾಕೆಟ್ (Actress Aarti Mittal) ಭೇದಿಸಿದ್ದಾರೆ. ಅಪ್ನಾಪ್ನ ಧಾರಾವಾಹಿಯಲ್ಲಿ ಕೆಲಸ ಮಾಡಿದ್ದ ನಟಿ ಆರತಿ ಮಿತ್ತಲ್ ಅವರು ಈ ಲೈಂಗಿಕ ದಂಧೆಯ ಜಾಲವನ್ನು ಹೊಂದಿದ್ದು, ಅವರನ್ನು ಪೊಲೀಸರು ಬಂಧಿಸಿದ್ದಾರೆ(sex racket).

ಮುಂಬೈ ಕ್ರೈಂ ಬ್ರಾಂಚ್ ಘಟಕ 11 ದಿಂಡೋಶಿ ಪೊಲೀಸರು, ಗೋರೆಗಾಂವ್ ಪ್ರದೇಶದಲ್ಲಿ ನಡೆಸುತ್ತಿದ್ದ ಲೈಂಗಿಕ ದಂಧೆಯನ್ನು ಜಾಲವನ್ನು ಭೇದಿಸಿದ್ದಾರೆ. ಇಬ್ಬರು ಮಾಡೆಲ್‌ಗಳನ್ನು ಸ್ಥಳದಿಂದ ರಕ್ಷಿಸಲಾಗಿದೆ. ಈ ಪ್ರಕರಣದಲ್ಲಿ 30 ವರ್ಷದ ಕಾಸ್ಟಿಂಗ್ ಡೈರೆಕ್ಟರ್ ಕೂಡ ಆಗಿರುವ ನಟಿ ಆರತಿ ಮಿತ್ತಲ್ ಅವರನ್ನು ಬಂಧಿಸಲಾಗಿದೆ. ರಕ್ಷಿಸಲಾದ ಮಾಡೆಲ್‌ಗಳನ್ನು ಪುನವರ್ಸತಿ ಕೇಂದ್ರಕ್ಕೆ ಕಳುಹಿಸಿ ಕೊಡಲಾಗಿದೆ. ಬಂಧಿತ ನಟಿ, ಈ ಇಬ್ಬರು ಮಾಡೆಲ್‌ಗಳಿಗೆ ತಲಾ 15 ಸಾವಿರ ರೂ. ನೀಡುವುದಾಗಿ ಹೇಳಿದ್ದರು.

ಆರತಿ ನಡೆಸುತ್ತಿದ್ದ ಈ ಲೈಂಗಿಕ ದಂಧೆ ಬಯಲಾಗಿದ್ದು ಹೇಗೆ?

ನಟಿ ಆರತಿ ಮಿತ್ತಲ್ ಅವರು ಲೈಂಗಿಕ ದಂಧೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಪಡೆದುಕೊಂಡ ಕ್ರೈಮ್ ಬ್ರ್ಯಾಂಚ್ ಪೊಲೀಸರು, ಈ ಜಾಲವನ್ನು ಭೇದಿಸಲು ಉಪಾಯ ಮಾಡಿದರು. ನಕಲಿ ಗ್ರಾಹಕನೊಬ್ಬನನ್ನು ಪೊಲೀಸರು ಹೊಟೇಲ್‌ಗೆ ಕಳುಹಿಸಿ, ಜಾಲವನ್ನು ಭೇದಿಸಿದರು. ಬಳಿಕ ನಟಿಯನ್ನು ಪೊಲೀಸರು ಬಂಧಿಸಿದರು.

ಮಿತ್ತಲ್ ನಡೆಸುತ್ತಿದ್ದ ಲೈಂಗಿಕ ದಂಧೆಯ ಬಗ್ಗೆ ಇನ್ಸ್‌ಪೆಕ್ಟರ್ ಮನೋಜ್ ಸುತಾರ್ ಅವರಿಗೆ ಮೊದಲಿಗೆ ಮಾಹಿತಿ ಬಂದಿತ್ತು. ಅವರು, ಗ್ರಾಹಕರ ರೂಪದಲ್ಲಿ ನಟಿಯನ್ನು ಸಂಪರ್ಕಿಸಿ ಮತ್ತು ಇಬ್ಬರು ತಮ್ಮ ಸ್ನೇಹಿತರಿಗೆ ಇಬ್ಬರು ಹುಡುಗಿಯರನ್ನು ವ್ಯವಸ್ಥೆ ಮಾಡಲು ಕೇಳಿದ್ದಾರೆ. ಆಗ ನಟಿ 60,000 ರೂ. ಬೇಡಿಕೆ ಇಟ್ಟಿದ್ದಾಳೆ. ಆರತಿ ನಟಿಯಾಗಿರುವುದರ ಹೊರತಾಗಿ ಕಾಸ್ಟಿಂಗ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾಳೆ.

ಇದನ್ನೂ ಓದಿ: ದೇಶವ್ಯಾಪಿ ಸೆಕ್ಸ್‌ ರ್‍ಯಾಕೆಟ್‌ ಪತ್ತೆ, 14,000 ಹೆಣ್ಣುಮಕ್ಕಳ ರಕ್ಷಣೆ, ಬೆಂಗಳೂರಿನಲ್ಲೂ ಇತ್ತು ಇದರ ಜಾಲ!

ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಭಾಗಿಯಾಗಿರುವ ಹಲವಾರು ನಿದರ್ಶನಗಳಿವೆ. ಅನೇಕ ಸೆಲೆಬ್ರಿಟಿಗಳು ಅದನ್ನು ಖಚಿತಪಡಿಸಿದ್ದಾರೆ. ಈ ಹಿಂದೆ ಅನೇಕ ನಟಿ, ನಟಿಯರು ಈ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ ಈ ಕಾಸ್ಟಿಂಗ್ ಕೌಚ್‌ನಿಂದ ತಾವು ಹೇಗೆ ಪಾರು ಆದೆವು ಎಂಬುದನ್ನು ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಮಲಯಾಳಂ ನಟಿ ಮಾಲವಿಕಾ ಶ್ರೀಶಾಂತ್ ಕೂಡ ಕೌಸ್ಟಿಂಗ್ ಕೌಚ್‌ ಬಗ್ಗೆ ಮಾತನಾಡಿದ್ದರು.

Exit mobile version