Site icon Vistara News

Sexual Assault Case: ಮಹಿಳಾ ಭಕ್ತರ ಮೇಲೆ ಲೈಂಗಿಕ ದೌರ್ಜನ್ಯ, ಸ್ವಘೋಷಿತ ದೇವಮಾನವ ಅಂದರ್!

Sexual Assault Case and Self styled godman arrested

ನವದೆಹಲಿ: ಇಬ್ಬರು ಮಹಿಳಾ ಭಕ್ತರ (Women Devotee)ಮೇಲೆ ಲೈಂಗಿಕ ದೌರ್ಜನ್ಯ (Sexual Assault Case) ಎಸಗಿದ ‘ಸ್ವಘೋಷಿತ ದೇವಮಾನ’ರೊಬ್ಬರನ್ನು (Self-Styled Godman) ದಿಲ್ಲಿ ಪೊಲೀಸ್ ಬಂಧಿಸಿದೆ (Delhi Police). ಬಂಧಿತ ದೇವಮಾನವನ್ನು 33 ವರ್ಷದ ವಿನೋದ್ ಕಶ್ಯಪ್ ಎಂದು ಗುರುತಿಸಲಾಗಿದೆ. ಈ ಸ್ವಾಮೀಜಿ, ದಿಲ್ಲಿಯ ಕಕ್ರೋಲಾ ಪ್ರದೇಶದಲ್ಲಿ ಮಾತಾ ಮಸನಿ ಚೌಕಿ ದರ್ಬಾರ್ ನಡೆಸುತ್ತಿದ್ದರು. ಅಲ್ಲದೇ, ಯುಟ್ಯೂಬ್‌ ಚಾನೆಲ್ (YouTube Channel) ಕೂಡ ಇದ್ದು, ಭಾರೀ ಸಂಖ್ಯೆಯಲ್ಲಿ ಫಾಲೋವರ್ಸ್ ಇದ್ದಾರೆ.

ಎರಡೂ ಪ್ರಕರಣಗಳಲ್ಲಿ ಮಹಿಳಾ ಭಕ್ತರಿಗೆ ಸಹಾಯ ಮಾಡುವ ನೆಪದಲ್ಲಿ ಅವರನ್ನು ಕರೆಸಿಕೊಂಡಿದ್ದ ಆರೋಪ ಕೇಳಿಬಂದಿದ್ದು, ಅವರ ಸಮಸ್ಯೆಗಳಿಂದ ಮುಕ್ತಿ ಹೊಂದಲು ಭಕ್ತರು ಗುರುಸೇವೆ ಮಾಡುವಂತೆ ಆರೋಪಿಗಳು ಒತ್ತಾಯಿಸಿದ್ದಾರೆ. ಬಳಿಕ ದೇವಮಾನವ ವಿನೋದ್ ಕಶ್ಯಪ್ ಮಹಿಳಾ ಭಕ್ತರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಕುರಿತು ಬಹಿರಂಗವಾಗಿ ಯಾರಿಗೂ ಹೇಳಿದಂತೆ ಬೆದರಿಕೆ ಹಾಕಿದ್ದಾರೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಿಳಾ ಭಕ್ತರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ, ಐಪಿಸಿ 376 ಮತ್ತು 506 ಸೆಕ್ಷನ್‌ಗಳಡಿ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ. ಆರೋಪಿಯನ್ನು ಕೂಡಲೇ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯು ತಿಳಿಸಿದ್ದಾರೆ.

ಕ್ಲಾಸ್‌ಮೇಟ್‌ಗಳಿಂದಲೇ ಲೈಂಗಿಕ ದೌರ್ಜನ್ಯ, ಅಕ್ಕ-ತಂಗಿ ಆತ್ಮಹತ್ಯೆ; ಇದೆಂಥ ಅನ್ಯಾಯ!

ಸಹಪಾಠಿಗಳಾದವರು ಹೇಗಿರಬೇಕು? ಶಾಲೆ ಅಥವಾ ತರಗತಿಯಲ್ಲಿ ಯಾವುದೇ ಸಮಸ್ಯೆ ಎದುರಾದರೆ ಅದನ್ನು ಬಗೆಹರಿಸಬೇಕು. ಖುಷಿಯ ಕ್ಷಣಗಳಲ್ಲಿ ನಕ್ಕು, ದುಃಖದ ಸಂದರ್ಭದಲ್ಲಿ ಸಂತೈಸಿ ಜತೆಗಿರಬೇಕು. ಇಂತಹ ಸಹಪಾಠಿಗಳು ಶಿಕ್ಕಾಗಲೇ ಶಾಲೆ, ಕಾಲೇಜಿನ ನೆನಪುಗಳು ಮಧುರವಾಗಿರುತ್ತವೆ. ಭವಿಷ್ಯವೂ ಉಜ್ವಲವಾಗಿರುತ್ತದೆ. ಆದರೆ, ರಾಜಸ್ಥಾನದ (Rajasthan) ಶಾಲೆಯೊಂದರಲ್ಲಿ ಸಹಪಾಠಿಗಳಾದ ಬಾಲಕರು ಇಬ್ಬರು ಬಾಲಕಿಯರ (ಅಕ್ಕ-ತಂಗಿ) ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗುವ ಮೂಲಕ ಕ್ಲಾಸ್‌ಮೇಟ್ಸ್‌ ಪದಕ್ಕೇ ಕಳಂಕ ತಂದಿದ್ದಾರೆ. ಇದರಿಂದ ನೊಂದ ಅಕ್ಕ-ತಂಗಿಯು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Sexual Assault: ಗಂಡಂದಿರು, ಮಕ್ಕಳ ಎದುರೇ 3 ಮಹಿಳೆಯರ ಮೇಲೆ ಗ್ಯಾಂಗ್ ರೇಪ್! ಜಾಗ ಬಿಟ್ಟು ಕೊಡಲ್ಲ ಎಂದಿದ್ದೇ ತಪ್ಪಾಯ್ತಾ?

ರಾಜಸ್ಥಾನದ ಪ್ರತಾಪ್‌ಗಢ ಜಿಲ್ಲೆಯ ಪಿಪಲ್‌ಖುಂಟ್‌ ಗ್ರಾಮದ ಶಾಲೆಯಲ್ಲಿ 12ನೇ ತರಗತಿ ಓದುತ್ತಿರುವ ನಾಲ್ವರು ಬಾಲಕರು ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಇದಾದ ಬಳಿಕ ಬಾಲಕಿಯರ ತಂದೆಯು ಪೊಲೀಸ್‌ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ದೂರು ದಾಖಲಿಸಿದ ಸಹೋದರಿಯರ ತಂದೆ ಮೇಲೆಯೇ ವಿದ್ಯಾರ್ಥಿಗಳು ಹಲ್ಲೆಗೆ ಮುಂದಾಗಿದ್ದಾರೆ. ಇದಾದ ಬಳಿಕ ಶನಿವಾರ ಬೆಳಗ್ಗೆ (ಅಕ್ಟೋಬರ್‌ 7) ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version