Site icon Vistara News

Shah Rukh Khan | ಶಾರುಕ್ ಖಾನ್ ಮನೆಯಲ್ಲಿ ಗಣೇಶ ಹಬ್ಬದ ಸಂಭ್ರಮ, ದೇವರಲ್ಲಿ ನಂಬಿಕೆ ಇಡಿ ಎಂದ ನಟ

Shah Rukh Khan

ಮುಂಬೈ: ಬಾಲಿವುಡ್‌ನ ಖ್ಯಾತ ನಟ, ಕಿಂಗ್ ಖಾನ್ ಎಂದು ಅಭಿಮಾನಿಗಳಿಂದ ಕರೆಯಿಸಿಕೊಳ್ಳುವ ಶಾರುಕ್ ಖಾನ್ (Shah Rukh Khan) ಅವರೂ ತಮ್ಮ ಮನೆಯಲ್ಲಿ ಗಣೇಶ ಹಬ್ಬವನ್ನು ಆಚರಿಸಿದರು. ತಮ್ಮ ಹಬ್ಬದ ಸಡಗರವನ್ನು ಸೆರೆ ಹಿಡಿದ ವಿಡಿಯೋವನ್ನು ಅವರು ಇನ್‌ಸ್ಟಾದಲ್ಲಿ ಷೇರ್ ಮಾಡಿಕೊಂಡಿದ್ದಾರೆ.

ಬುಧವಾರ ತಮ್ಮ ಮನೆಗೆ ಗಣೇಶ ವಿಗ್ರಹವನ್ನು ಅವರು ಬರ ಮಾಡಿಕೊಂಡರು. ಈ ವೇಳೆ, ತಾವು ಮತ್ತು ತಮ್ಮ ಪುತ್ರ ಅಬ್ರಾಮ್ ಅವರು ಗಣೇಶ ಜತೆಗಿರುವ ಫೋಟೋವನ್ನು ಷೇರ್ ಮಾಡಿಕೊಂಡು, ಗಣಪತಿಜೀ ಎಂದು ಬರೆದುಕೊಂಡಿದ್ದಾರೆ.

ನಾನು ಮತ್ತು ನನ್ನ ಕಿರಿಯ ಪುತ್ರ ಗಣಪತಿಯನ್ನು ಸ್ವಾಗತಿಸಿದೆವು. ಮೋದಕಗಳು ತುಂಬಾ ಡೆಲಿಷಿಯಸ್ ಆಗಿದ್ದವು. ಕಠಿಣ ಪರಿಶ್ರಮ ಪಡಬೇಕು ಮತ್ತು ದೇವರಲ್ಲಿ ನಂಬಿಕೆ ಇಡಬೇಕು. ಇದರಿಂದ ನಿಮ್ಮ ಕನಸುಗಳು ನನಸಾಗುತ್ತವೆ. ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು ಎಂದು ಶಾರುಕ್ ಹೇಳಿದ್ದಾರೆ.

ಬಾಲಿವುಡ್‌ನ ಬಹುಬೇಡಿಕೆಯ ನಟ ಹಾಗೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಶಾರುಕ್ ಖಾನ್, ಪ್ರತಿ ವರ್ಷವೂ ಗಣೇಶ ಮೂರ್ತಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಾರೆ. ಅದೇ ರೀತಿ ಈ ವರ್ಷವೂ ಗಣೇಶನನ್ನು ಪ್ರತಿಷ್ಠಾಪಿಸಿ, ಪೂಜೆ ಮಾಡುತ್ತಿದ್ದಾರೆ.

ಬಾಲಿವುಡ್‌ ನಟ, ನಟಿಯರು ಶೃದ್ಧೆ ಮತ್ತು ಸಡಗರದಿಂದ ಗಣೇಶ ಹಬ್ಬವನ್ನು ಆಚರಿಸುತ್ತಾರೆ. ಸಲ್ಮಾನ್ ಖಾನ್, ಶಿಲ್ಪಾ ಶೆಟ್ಟಿ, ರಿತೇಶ್ ದೇಶಮುಖ ಸೇರಿ ಬಹಳಷ್ಟು ಕಲಾವಿದರು ಗಣೇಶ ಹಬ್ಬವನ್ನು ಆಚರಿಸುತ್ತಾ ಬಂದಿದ್ದಾರೆ. ಕೊರೊನಾದಿಂದಾಗಿ ಎರಡು ವರ್ಷದಿಂದ ಕಳೆಗುಂದಿದ್ದ ಗಣೇಶ ಹಬ್ಬ ಈ ವರ್ಷ ಕಳೆಗಟ್ಟಿದೆ. ಇದಕ್ಕೆ ಬಾಲಿವುಡ್ ಕೂಡ ಹೊರತಾಗಿಲ್ಲ.

ಇದನ್ನೂ ಓದಿ | Salman Khan | ತಂಗಿ ಮನೆಯಲ್ಲಿ ಗಣೇಶ ಹಬ್ಬ ಆಚರಿಸಿದ ನಟ ಸಲ್ಮಾನ್ ಖಾನ್

Exit mobile version