ನವದೆಹಲಿ: ಕತಾರ್‌ನಲ್ಲಿ (Qatar) ನೇಣು ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನೌಕಾ ಪಡೆಯ 8 ಮಾಜಿ ಯೋಧರನ್ನು(Indian Navy Veterans) ರಕ್ಷಿಸಿ ಭಾರತಕ್ಕೆ ವಾಪಸ್ ಕರೆ ತರುವಲ್ಲಿ ತಾವು ಯಾವುದೇ ಪಾತ್ರವನ್ನು ನಿರ್ವಹಿಸಿಲ್ಲ ಎಂದು ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ (Bollywood Super Star Shah Rukh Khan) ಹೇಳಿದ್ದಾರೆ. ಈ ಕೆಲಸವನ್ನು ಕೇವಲ ಭಾರತ ಸರ್ಕಾರ ಮಾಡಿದೆ ಎಂದು ಅವರು ಸ್ಪಷ್ಪಪಡಿಸಿದ್ದಾರೆ. ಮೋದಿ (PM Narendra Modi) ಅವರ ವೈಯಕ್ತಿಕ ವರ್ಚಸ್ಸಿನ ಪರಿಣಾಮ ಶಿಕ್ಷೆಗೆ ಗುರಿಯಾದವರನ್ನು ಭಾರತೀಯರನ್ನು ವಾಪಸು ಕರೆತರಲು ಸಾಧ್ಯವಾಯಿತು ಎಂದು ಹೇಳಲಾಗಿತ್ತು. ಆದರೆ, ಬಿಜೆಪಿಯ ನಾಯಕರಾದ ಸುಬ್ರಮಣಿಯನ್ ಸ್ವಾಮಿ (Subramanian Swamy) ಅವರು, ಇದರಲ್ಲಿ ಮೋದಿ ಅವರ ಪಾತ್ರವೇನೂ ಇಲ್ಲ. ಬಾಲಿವುಡ್ ನಟ ಶಾರುಖ್ ಖಾನ್ ಮಧ್ಯಸ್ಥಿಕೆ ಹಾಗೂ ದುಬಾರಿ ಒಪ್ಪಂದದ ಪರಿಣಾಮ ಮಾಜಿ ಯೋಧರನ್ನು ಶಿಕ್ಷೆಯಿಂದ ಪಾರು ಮಾಡಲು ಸಾಧ್ಯವಾಗಿದೆ ಎಂದು ಟ್ವೀಟ್ ಮಾಡಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು.
From the office of Mr. Shah Rukh Khan pic.twitter.com/s7Kwwhmd6j
— Pooja Dadlani (@pooja_dadlani) February 13, 2024
ಶಾರುಖ್ ಖಾನ್ ಪಾತ್ರವನ್ನು ನಿರಾಕರಿಸಿರುವ ನಟನ ತಂಡವು ಎಕ್ಸ್ ವೇದಿಕೆಯಲ್ಲಿ ಸ್ಪಷ್ಟಿಕರಣವನ್ನು ಪೋಸ್ಟ್ ಮಾಡಿದ್ದು, ಕತಾರ್‌ನಿಂದ ಭಾರತದ ನೌಕಾ ಅಧಿಕಾರಿಗಳನ್ನು ಬಿಡುಗಡೆ ಮಾಡುವಲ್ಲಿ ಶಾರುಖ್ ಖಾನ್ ಅವರ ಉದ್ದೇಶಿತ ಪಾತ್ರದ ಕುರಿತು ವರದಿಗಳಿಗೆ ಸಂಬಂಧಿಸಿದಂತೆ, ಅವರ ಕಚೇರಿಯು ಅವರ ಒಳಗೊಳ್ಳುವಿಕೆಯ ಅಂತಹ ಯಾವುದೇ ಸಮರ್ಥನೆಗಳು ಆಧಾರರಹಿತವಾಗಿವೆ ಎಂದು ಹೇಳುತ್ತದೆ. ಈ ಯಶಸ್ವಿ ನಿರ್ಣಯದ ಕಾರ್ಯಗತಗೊಳಿಸುವಿಕೆಯನ್ನು ಕೇವಲ ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ್ದಾಗಿದೆ. ಇದರಲ್ಲಿ ಶಾರುಖ್ ಖಾನ್ ಅವರು ಯಾವುದೇ ಪಾತ್ರವನ್ನು ನಿರ್ವಹಿಸಿಲ್ಲ ಎಂದು ಹೇಳಲಾಗಿದೆ.
ರಾಜತಾಂತ್ರಿಕತೆ ಮತ್ತು ಮುತ್ಸಿದ್ಧತನಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳು ನಮ್ಮ ಅತ್ಯಂತ ಸಮರ್ಥ ನಾಯಕರಿಂದ ಉತ್ತಮವಾಗಿ ಕಾರ್ಯಗತಗೊಳಿಸಲ್ಪಟ್ಟಿವೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಇತರ ಅನೇಕ ಭಾರತೀಯರಂತೆ ಶಾರುಖ್ ಖಾನ್ ಅವರು, ನೌಕಾಪಡೆಯ ಅಧಿಕಾರಿಗಳು ಮನೆಯಲ್ಲಿ ಸುರಕ್ಷಿತವಾಗಿರುವುದಕ್ಕೆ ಸಂತೋಷಪಡುತ್ತಾರೆ ಮತ್ತು ಅವರಿಗೆ ಶುಭ ಹಾರೈಸುತ್ತಾರೆ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.
ಬಾಲಿವುಡ್ ಸೂಪರ್ ಸ್ಟಾರ್ ಇತ್ತೀಚೆಗೆ ಕತಾರ್‌ನ ರಾಜಧಾನಿ ದೋಹಾದಲ್ಲಿ ವಿಶೇಷ ಅತಿಥಿಯಾಗಿ ಎಎಫ್‍ಸಿ ಫೈನಲ್‌ಗೆ ಹಾಜರಾಗಲು ಬಂದಿದ್ದರು. ಯುಎಇಯಲ್ಲಿರುವ ಪ್ರಧಾನಿ ಮೋದಿ ಬುಧವಾರ ಕತಾರ್‌ಗೆ ಪ್ರಯಾಣಿಸಿದ್ದು, ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಬಲಪಡಿಸುವ ಮಾರ್ಗಗಳ ಕುರಿತು ಚರ್ಚೆ ನಡೆಸಿದ್ದಾರೆ.
ಈ ಸುದ್ದಿಯನ್ನೂ ಓದಿ: Subramanian Swamy: ಕತಾರ್‌ನಿಂದ ಮಾಜಿ ಯೋಧರ ಬಿಡುಗಡೆಗೆ ಮೋದಿಯಲ್ಲ, ‘ಶಾರುಖ್ ಖಾನ್’ ಕಾರಣ!