ನವದೆಹಲಿ: ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಶಂಕರ್ ಮಿಶ್ರಾಗೆ (Shankar Mishra Case) ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ನಾಲ್ಕು ತಿಂಗಳು ವಿಮಾನ ಸಂಚಾರ ನಿಷೇಧ ಹೇರಿದೆ.
ಮೂತ್ರ ವಿಸರ್ಜನೆ ಮಾಡುವ ಮೂಲಕ ಅಸಭ್ಯ ವರ್ತನೆ ತೋರಿದ್ದು ಸುದ್ದಿಯಾದ ಬೆನ್ನಲ್ಲೇ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ಶಂಕರ್ ಮಿಶ್ರಾಗೆ ಒಂದು ತಿಂಗಳು ವಿಮಾನಯಾನ ನಿಷೇಧಿಸಲಾಗಿತ್ತು. ಈಗ ಮೂತ್ರ ವಿಸರ್ಜನೆ ಕುರಿತು ಸಂಪೂರ್ಣ ತನಿಖೆ ನಡೆಸಿ, ಮತ್ತೆ ನಾಲ್ಕು ತಿಂಗಳು ವಿಮಾನ ಸಂಚಾರ ನಿಷೇಧಿಸಿದೆ.
ನವೆಂಬರ್ 26ರಂದು ನ್ಯೂಯಾರ್ಕ್‌ನಿಂದ ದೆಹಲಿಗೆ ತೆರಳುತ್ತಿದ್ದ ವಿಮಾನದಲ್ಲಿ ಶಂಕರ್ ಮಿಶ್ರಾ ಅಸಭ್ಯ ವರ್ತನೆ ತೋರಿದ್ದರು. ಕುಡಿದ ಮತ್ತಿನಲ್ಲಿ 70 ವರ್ಷದ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಹಿನ್ನೆಲೆಯಲ್ಲಿ ಜನವರಿ 4ರಂದು ಪೊಲೀಸರು ಬೆಂಗಳೂರಿನಲ್ಲಿ ಶಂಕರ್ ಮಿಶ್ರಾನನ್ನು ಬಂಧಿಸಿದ್ದರು.
ಇದನ್ನೂ ಓದಿ | Air India Urination Case | ನಾನು ಮೂತ್ರ ಮಾಡಿಲ್ಲ, ಮಹಿಳೆಯೇ ಮಾಡಿರಬಹುದು, ಶಂಕರ್ ಮಿಶ್ರಾ ಹೊಸ ವರಸೆ