Site icon Vistara News

Gautam Adani : ಅದಾನಿ ಭೇಟಿ ಮಾಡಿದ ಶರದ್​ ಪವಾರ್​; ರಾಹುಲ್​ ಮಾತಿಗೆ ಕಿಮ್ಮತ್ತಿಲ್ಲ ಎಂದ ಬಿಜೆಪಿ!

Gautam Adani

ನವದೆಹಲಿ: ಎನ್​​ಸಿಪಿ ಮುಖ್ಯಸ್ಥ ಶರದ್ ಪವಾರ್ ಶನಿವಾರ ಅಹಮದಾಬಾದ್​ನಲ್ಲಿ ದೈತ್ಯ ಉದ್ಯಮಿ ಗೌತಮ್ ಅದಾನಿ (Gautam Adani) ಅವರನ್ನು ಭೇಟಿಯಾಗಿದ್ದಾರೆ. ಅವರ ನಿವಾಸ ಹಾಗೂ ಕಚೇರಿಗೆ ಭೇಟಿ ನೀಡಿದ್ದರು ಎಂಬುದಾಗಿ ವರದಿಯಾಗಿದೆ. ಅದಕ್ಕಿಂತ ಮೊದಲು ಇಬ್ಬರೂ ಅಹಮದಾಬಾದ್​​ನಲ್ಲಿ ಭಾರತದ ಮೊದಲ ಲ್ಯಾಕ್ಟೋಫೆರಿನ್ ಪ್ಲಾಟ್ ಉದ್ಘಾಟನಾ ಸಮಾರಂಭದಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದರು

ಉದ್ಯಮಿ ಅದಾನಿ ವಿರುದ್ಧ ಕಾಂಗ್ರೆಸ್​ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ನಿರಂತರ ಮಾತಿನ ದಾಳಿ ನಡೆಸುತ್ತಿರುವ ನಡುವೆಯೇ 2024 ರ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ಸಂಘಟಿಸಿರುವ ಪ್ರತಿಪಕ್ಷಗಳ ಇಂಡಿಯಾ ಬಣದ ಸದಸ್ಯರಾಗಿರುವ ಶರದ್​ ಪವಾರ್​ ಅವರು ಅದಾನಿಯನ್ನು ಭೇಟಿ ಮಾಡಿರುವುದು ಅಚ್ಚರಿ ಮೂಡಿಸಿದೆ. ಗೌತಮ್ ಅದಾನಿ ಅವರೊಂದಿಗೆ ಗುಜರಾತ್​್ನ ಚಾಚಾರ್ವಾಡಿಯ ವಾಸ್ನಾದಲ್ಲಿ ಭಾರತದ ಮೊದಲ ಲ್ಯಾಕ್ಟೋಫೆರಿನ್ ಸ್ಥಾವರ ಎಕ್ಸಿಂಪವರ್ ಅನ್ನು ಉದ್ಘಾಟಿಸುವ ಸೌಭಾಗ್ಯ ದೊರಕಿದೆ ಎಂದು ಪವಾರ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : Rahul Gandhi: ರಾಹುಲ್ ಆಧುನಿಕ ಭಾರತದ ಮಹಾತ್ಮ ಗಾಂಧಿ ಹಾಗೂ ರಾಷ್ಟ್ರ ಪುತ್ರ! ಹೀಗೆ ಹೇಳಿದ್ದು ಯಾರು?

ಶರದ್ ಪವಾರ್ ಅವರ ಹ್ಯಾಂಡಲ್​ನಲ್ಲಿ ಮಾತ್ರ ಪೋಸ್ಟ್ ಮಾಡಲಾದ ಕಾರ್ಯಕ್ರಮದ ಫೋಟೋಗಳನ್ನು ಹಂಚಿಕೊಂಡ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ, ಈ ಚಿತ್ರವು ಸಾವಿರ ಪದಗಳನ್ನು ವಿವರಿಸುತ್ತವೆ. ಆದರೆ ರಾಹುಲ್ ಗಾಂಧಿ ಅವರ ಮಾತನ್ನು ಕೇಳಲು ಸಿದ್ಧರಿದ್ದರೆ ಮಾತ್ರ ಎಂದು ಬರೆದುಕೊಂಡಿದ್ದಾರೆ. ರಾಹುಲ್ ಗಾಂಧಿಯನ್ನು ಇಂಡಿಯಾ ಬಣದಲ್ಲಿ ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಪೂನಾವಾಲಾ ಟೀಕಿಸಿದ್ದಾರೆ.

ಇಂಡಿಯಾ ಮೈತ್ರಿಕೂಟದಲ್ಲಿ ಯಾರೂ ರಾಹುಲ್​ ಅವರನ್ನು ಮತ್ತು ಅವರ ಅವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸವುದಿಲ್ಲ. ಆ ಕಾರಣ ಶರದ್ ಪವಾರ್ ಜಿ ಅವರನ್ನು ಅಲ್ಕಾ ಲಂಬಾ ಅವರಂತಹವರು ಮತ್ತೆ ನಿಂದಿಸುವುದಿಲ್ಲ ರಾಹುಲ್ ಗಾಂಧಿ ಅವರ ಮಾತು ಕೇಳಲು ಸಿದ್ಧರಿದ್ದರೆ ಈ ಚಿತ್ರವು ಸಾವಿರ ಪದಗಳನ್ನು ಹೇಳುತ್ತದೆ ಎಂದು ಪೂನಾವಾಲಾ ಟ್ವೀಟ್ ಮಾಡಿದ್ದಾರೆ.

ಅದಾನಿ ಜತೆ ಉತ್ತಮ ಗೆಳೆತನ ಹೊಂದಿರುವ ಪವಾರ್​

ಅದಾನಿ ಜೊತೆ ಶರದ್ ಪವಾರ್ ಅವರ ನಿಕಟ ಸಂಪರ್ಕ ಬೆಳಕಿಗೆ ಬರುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ ಸಂದರ್ಶನವೊಂದರಲ್ಲಿ, ಶರದ್ ಪವಾರ್ ಅವರು ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿಯನ್ನು ರಚಿಸಬೇಕೆಂಬ ಪ್ರತಿಪಕ್ಷಗಳ ಬೇಡಿಕೆಯನ್ನು ವಿರೋಧಿಸಿದ್ದರು. ಬದಲಿಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ಸಮಿತಿಯ ಪರವಾಗಿರುವುದಾಗಿ ಹೇಳಿದ್ದರು.

ಶರದ್ ಪವಾರ್ ತಮ್ಮ ಆತ್ಮಚರಿತ್ರೆ ಲೋಕ್ ಮೇಜ್ ಸಾಂಗತಿಯಲ್ಲಿ ಗೌತಮ್ ಅದಾನಿ ಅವರನ್ನು ಕಠಿಣ ಪರಿಶ್ರಮಿ, ಸರಳ ಮತ್ತು ಕೆಳಮಟ್ಟದ ವ್ಯಕ್ತಿ ಎಂದು ಬಣ್ಣಿಸಿದ್ದಾರೆ. ಶರದ್ ಪವಾರ್ ಅವರ ಒತ್ತಾಯದ ಮೇರೆಗೆ ಗೌತಮ್ ಅದಾನಿ ಥರ್ಮಲ್ ವಿದ್ಯುತ್ ಕ್ಷೇತ್ರಕ್ಕೆ ಕಾಲಿಟ್ಟರು ಎಂದು ಶರದ್ ಪವಾರ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

Exit mobile version