Site icon Vistara News

Shashi Tharoor Controversy: ಉತ್ತರಪ್ರದೇಶದ ಬಗ್ಗೆ ಶಶಿ ತರೂರ್‌ ಹೇಳಿದ್ದೇನು ಗೊತ್ತಾ?; ಭಾರೀ ವಿವಾದಕ್ಕೀಡಾಗ್ತಿದೆ ಈ ಪೋಸ್ಟ್‌

Shashi Tharoor Controversy

ಹೊಸದಿಲ್ಲಿ: ದೇಶಾದ್ಯಂತ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET 2024)ಯ ಅಕ್ರಮ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದ ಬುಗಿಲೆದ್ದಿರುವ ಬೆನ್ನಲ್ಲೇ ಕಾಂಗ್ರೆಸ್‌ ಸಂಸದ ಶಶಿ ತರೂರ್‌(Shashi Tharoor Controversy) ಅವರ ಪೋಸ್ಟ್‌ವೊಂದು ಭಾರೀ ವಿವಾದಕ್ಕೀಡಾಗಿದೆ. ಶಶಿ ತರೂರ್‌ ಪೋಸ್ಟ್‌ಗೆ ಬಿಜೆಪಿ ನಾಯಕರ ಕೆಂಗಣ್ಣಾಗಿದ್ದು, ಪ್ರತಿಪಕ್ಷ ನಾಯಕರು ನಾಚಿಕೆಯ ಎಲ್ಲೆ ಮೀರಿದೆ.

ಎಕ್ಸ್‌ನಲ್ಲಿ ಚಿತ್ರವೊಂದನ್ನು ಶಶಿ ತರೂರ್‌ ಪೋಸ್ಟ್‌ ಮಾಡಿದ್ದರು. ಉತ್ತರಪ್ರದೇಶ ಅಂದರೇನು? ಎಂಬ ಪ್ರಶ್ನೆ ಅಲ್ಲಿದೆ. ಅದಕ್ಕೆ ಯಾವ ರಾಜ್ಯದಲ್ಲಿ ಪರೀಕ್ಷೆಗೂ ಮುನ್ನ ಉತ್ತರ ತಿಳಿದಿರುತ್ತದೋ ಅದನ್ನೇ ಉತ್ತರಪ್ರದೇಶ ಎಂದು ಕರೆಯಲಾಗುತ್ತದೆ ಎಂಬ ಉತ್ತರವೂ ಆ ಚಿತ್ರದಲ್ಲಿದೆ. ಈ ಪೋಸ್ಟ್‌ ಇದೀಗ ಭಾರೀ ವಿವಾದಕ್ಕೀಡಾಗಿದ್ದು, ಉತ್ತರಪ್ರದೇಶಕ್ಕೆ ಇದು ಮಾಡಲಾಗಿರುವ ಅಪಮಾನ ಎಂದು ಶಶಿ ತರೂರ್‌ ವಿರುದ್ಧ ಬಿಜೆಪಿ ನಾಯಕರು ಕಿಡಿ ಕಾರಿದ್ದಾರೆ.

ಬಿಜೆಪಿ ನಾಯಕರು ಅಕ್ರೋಶ

ಶಶಿ ತರೂರ್‌ ಪೋಸ್ಟ್‌ಗೆ ಮಾಜಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಪ್ರತಿಕ್ರಿಯಿಸಿದ್ದು, ಇದು ನಾಚಿಕೆಯಿಲ್ಲದ ಕ್ರೌರ್ಯ ರಾಜಕಾರಣ. ಕೆಲವೇ ತಿಂಗಳುಗಳ ಹಿಂದೆ, ಕಾಂಗ್ರೆಸ್‌ ನಾಯಕ ಸ್ಯಾಮ್ ಪಿತ್ರೋಡಾ ಅವರು ಭಾರತೀಯರನ್ನು‌ ಅವಹೇಳನ ಮಾಡಿದ್ದರು. ಕಾಂಗ್ರೆಸ್‌ನವರಿಂದ ಇಂತಹ ಹೇಳಿಕೆಯಷ್ಟೇ ನಿರೀಕ್ಷಿಸಬಹುದಾಗಿದೆ.

ಇನ್ನು ಶಶಿ ತರೂರ್‌ ಹೇಳಿಕೆಗೆ ಬಿಜೆಪಿ ಫೈರ್‌ ಬ್ರ್ಯಾಂಡ್‌ ಹಿಮಂತ್‌ ಬಿಸ್ವಾ ಶರ್ಮಾ, ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಪುರಿ ಸೇರಿದಂತೆ ಅನೇಕ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ:Sipping Tea Or Coffee With Meals: ಊಟತಿಂಡಿ ಜೊತೆಜೊತೆಗೆ ಚಹಾ ಕಾಫಿ ಹೀರುವ ಅಭ್ಯಾಸ ಒಳ್ಳೆಯದೇ, ಕೆಟ್ಟದ್ದೇ?

Exit mobile version