ಮುಂಬೈ: ಕಿರುತೆರೆ ನಟಿ ತುನಿಶಾ ಶರ್ಮಾ ಸಾವಿನ ಪ್ರಕರಣವು (Tunisha Sharma Death) ದೇಶಾದ್ಯಂತ ಸುದ್ದಿಯಾಗಿದೆ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗಿದೆ ಎಂಬ ಆರೋಪವಿದೆ. ಅದರಲ್ಲೂ, ಆಕೆಯ ಬಾಯ್‌ಫ್ರೆಂಡ್ ಆಗಿದ್ದ, ನಟ ಶಿಜಾನ್ ಖಾನ್ ನಟಿಯನ್ನು ಇಸ್ಲಾಂಗೆ ಮತಾಂತರ ಆಗುವಂತೆ ಒತ್ತಾಯಿಸುತ್ತಿದ್ದ ಎಂದು ಆಕೆಯ ತಾಯಿ ಹೇಳಿಕೆ ನೀಡಿದ್ದಾರೆ.
“ತುನಿಶಾ ಶರ್ಮಾ ಇಚ್ಛೆಯ ವಿರುದ್ಧವಾಗಿ ನಡೆದುಕೊಳ್ಳಲಾಗುತ್ತಿತ್ತು. ಇಸ್ಲಾಂಗೆ ಮತಾಂತರ ಆಗು ಎಂದು ಶಿಜಾನ್ ಖಾನ್ ಒತ್ತಾಯಿಸುತ್ತಿದ್ದ. ಇದರಿಂದ ನನ್ನ ಮಗಳ ಮೇಲೆ ಹೆಚ್ಚಿನ ಒತ್ತಡ ಸೃಷ್ಟಿಯಾಗಿತ್ತು” ಎಂದು ನಟಿಯ ತಾಯಿ ವನಿತಾ ಶರ್ಮಾ ಅವರು ಮಾಧ್ಯಮದವರಿಗೆ ತಿಳಿಸಿದ್ದಾರೆ. ಹಾಗಾಗಿ, ಕೇಸ್ ಮತ್ತಷ್ಟು ಗಂಭೀರವಾದಂತಾಗಿದೆ.
ಡಿಸೆಂಬರ್ 24ರಂದು ತುನಿಶಾ ಶರ್ಮಾ ವಸಾಯಿಯಲ್ಲಿ ಶೂಟಿಂಗ್ ಸೆಟ್‌ನ ಕೋಣೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಪೊಲೀಸರು ಶಿಜಾನ್ ಖಾನ್‌ನನ್ನು ಬಂಧಿಸಿದ್ದು, ಆತನ ಮೊಬೈಲ್ ವಶಪಡಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | Tunisha Sharma | ‘ಅವನು ಪುಣ್ಯ ಮಾಡಿದ್ದ’; ತುನಿಶಾ ಶರ್ಮಾ ಮೃತಪಟ್ಟ ಕೋಣೆಯಲ್ಲಿ ಸಿಕ್ಕಿತೊಂದು ಪತ್ರ