ಚಂಡೀಗಢ: ಪಂಜಾಬ್‌ನ ಅಮೃತಸರದಲ್ಲಿ ಶಿವಸೇನೆ ನಾಯಕ ಸುಧೀರ್ ಸೂರಿ (Sudhir Suri Shot Dead) ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಅಮೃತಸರದ ದೇವಾಲಯವೊಂದರ ಎದುರು ಪ್ರತಿಭಟನೆ ನಡೆಸುವಾಗ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ.
ಅಮೃತಸರದಲ್ಲಿರುವ ದೇವಾಲಯವೊಂದರ ಆವರಣದಲ್ಲಿ ದೇವರ ಮೂರ್ತಿಗಳು ಧ್ವಂಸಗೊಂಡ ರೂಪದಲ್ಲಿ ಸಿಕ್ಕಿದ್ದು, ದೇವಾಲಯದ ಆಡಳಿತ ಮಂಡಳಿ ವಿರುದ್ಧ ಶಿವಸೇನೆ ಕಾರ್ಯಕರ್ತರೊಡನೆ ಸುಧೀರ್ ಸೂರಿ ಅವರು ಪ್ರತಿಭಟನೆ ನಡೆಸುತ್ತಿದ್ದರು. ಇದೇ ವೇಳೆ ಗುಂಡಿನ ದಾಳಿ ನಡೆಸಲಾಗಿದೆ. ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಸುಧೀರ್ ಸೂರಿ ಅವರು ಪೊಲೀಸರ ಜತೆ ಮಾತನಾಡುವಾಗಲೇ ಗುಂಡಿನ ದಾಳಿ ನಡೆಸಲಾಗಿದೆ. ಇದಕ್ಕೂ ಮೊದಲು ಅವರ ಹತ್ಯೆಗೆ ಸಂಚು ರೂಪಿಸಿದ ಕಾರಣ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು. ಇನ್ನು ಸುಧೀರ್ ಸೂರಿ ಅವರ ಮೇಲೆ ಗುಂಡಿನ ದಾಳಿ ನಡೆಸಿರುವುದನ್ನು ಬಿಜೆಪಿ ಖಂಡಿಸಿದೆ. “ಪಂಜಾಬ್‌ನಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಇದಕ್ಕೆ ಸುಧೀರ್ ಸೂರಿ ಅವರ ಮೇಲೆ ಗುಂಡಿನ ದಾಳಿ ನಡೆಸಿರುವುದೇ ಉದಾಹರಣೆ” ಎಂದು ಬಿಜೆಪಿ ನಾಯಕ ತಜಿಂದರ್ ಸಿಂಗ್ ಬಗ್ಗಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | ಕಾಶ್ಮೀರದಲ್ಲಿ ವಲಸೆ ಕಾರ್ಮಿಕನನ್ನು ಕೊಂದ ಉಗ್ರರು; ಮಧ್ಯರಾತ್ರಿ ಗುಂಡಿನ ದಾಳಿ