ನವದೆಹಲಿ: ತನ್ನ ಲಿವ್-ಇನ್ ಸಂಗಾತಿ ಶ್ರದ್ಧಾ ವಾಳ್ಕರಳನ್ನು (Shraddha Walkar) ತುಂಡು ತುಂಡಾಗಿ ಕತ್ತರಿಸಿ ಭಯಾನಕವಾಗಿ ಕೊಲೆ ಮಾಡಿದ್ದ ಆರೋಪಿ ಅಫ್ತಾಬ್ ಪೂನಾವಾಲ (Aftab Poonawala) ಈಗ ದಿಲ್ಲಿಯ ತಿಹಾರ್ ಜೈಲಿನಲ್ಲಿದ್ದಾನೆ. ಆತನನ್ನು ಭೇಟಿಯಾಗಲು ಬಂದ ತನ್ನ ಕುಟುಂಬದ ಸದಸ್ಯರನ್ನು ಭೇಟಿಯಾಗಲು ನಿರಾಕರಿಸುತ್ತಿದ್ದಾನೆಂದು ತಿಳಿದು ಬಂದಿದೆ.
28 ವರ್ಷದ ಅಫ್ತಾಬ್ ನವೆಂಬರ್ 26ರಿಂದ ತಿಹಾರ್ ಜೈಲಿನಲ್ಲಿದ್ದಾನೆ. ಆತ ತನ್ನನ್ನು ಯಾರು ಭೇಟಿ ಮಾಡಬೇಕೆಂಬ ಕುರಿತು ಮಾಹಿತಿಯನ್ನು ಜೈಲು ಅಧಿಕಾರಿಗಳಿಗೆ ಇನ್ನಷ್ಟೇ ನೀಡಬೇಕಿದೆ. ನಿಯಮಗಳ ಪ್ರಕಾರ, ಜೈಲಿನಲ್ಲಿರುವ ವ್ಯಕ್ತಿ ವಾರಕ್ಕೆ ಎರಡು ಸಾರಿ, ತನ್ನ ಕುಟುಂಬದವರನ್ನು ಭೇಟಿ ಮಾಡಲು ಅವಕಾಶವಿದೆ.
ಸದ್ಯ ಜೈಲಿನಲ್ಲಿ ತನ್ನ ಪಾಡಿಗೆ ತಾನು ಇರುತ್ತಿರುವ ಆರೋಪಿ ಪೂನಾವಾಲ ಈ ವಾರದ ಬಳಿಕ, ಯಾರನ್ನೋ ಭೇಟಿಯಾಗುವ ಬಗ್ಗೆ ಸಹ ಕೈದಿಗಳ ಜತೆಗೆ ಮಾತನಾಡಿಕೊಂಡಿದ್ದಾನೆಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಆತ ಇದವರೆಗೂ ಯಾರನ್ನು ಭೇಟಿ ಮಾಡಬೇಕೆಂಬ ಮಾಹಿತಿಯನ್ನು ಹಂಚಿಕೊಂಡಿಲ್ಲ. ಜತೆಗೆ, ತನ್ನ ಕುಟುಂಬದ ಸದಸ್ಯರನ್ನು ಭೇಟಿಯಾಗಲೂ ಮುಂದಾಗುತ್ತಿಲ್ಲ.
ಇದನ್ನೂ ಓದಿ | Shraddha Murder Case | ಶ್ರದ್ಧಾ ವಾಳ್ಕರ್ ಹತ್ಯೆ ಕೇಸ್ ಸಿಬಿಐಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದ ದೆಹಲಿ ಹೈಕೋರ್ಟ್